ETV Bharat / bharat

ಮುಖ ಮುಚ್ಚಿಕೊಂಡು ಬಂದ ದರೋಡೆಕೋರರು: ಹಣ-ಮೊಬೈಲ್​ ದೋಚಿ ಎಸ್ಕೇಪ್! ವಿಡಿಯೋ ನೋಡಿ

author img

By

Published : Jul 1, 2019, 1:48 PM IST

ಹಣ-ಮೊಬೈಲ್​ ದೋಚಿ ಎಸ್ಕೇಪ್

ದೆಹಲಿಯಲ್ಲಿ ದುಷ್ಕರ್ಮಿಗಳು ಗನ್​ ತೋರಿಸಿ ದಂಪತಿಯನ್ನ ಬೆದರಿಸಿ ದರೋಡೆ ನಡೆಸಿದ್ದಾರೆ.

ನವದೆಹಲಿ: ಇಲ್ಲಿನ ಗುಗುಜ್ರನ್​ವಲ ಎಂಬಲ್ಲಿ ಮನೆಮುಂದೆ ಕಾರು ಪಾರ್ಕ್​ ಮಾಡುವಾಗ ಬಂದ ಮೂವರು ಮುಸುಕುದಾರಿಗಳು ಪತಿ ಮತ್ತು ಪತ್ನಿ ಬಳಿಯಿಂದ ಹಣ ಕಸಿದುಕೊಂಡು ಪರಾರಿಯಾಗಿದ್ದಾರೆ.

ದರೋಡೆ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವ್ಯಕ್ತಿಯೋರ್ವ ಕಾರು ಪಾರ್ಕಿಂಗ್​ ಮಾಡುವಾಗ ಮೂರು ಜನ ಮುಸುಕುದಾರಿಗಳು ಒಳ ನುಗ್ಗುತ್ತಾರೆ. ಗನ್​ ತೋರಿಸಿ ವ್ಯಕ್ತಿಯನ್ನ ಬೆದರಿಸಿ ಅತನ ಬಳಿಯಿದ್ದ ಹಣ ಕಸಿದುಕೊಳ್ಳುತ್ತಾರೆ.

ಮಗು ಜೊತೆಯಲ್ಲಿ ಕಾರಿನಲ್ಲಿ ಕುಳಿತಿದ್ದ ಮಹಿಳೆ ಬಳಿ ಬಂದ ದರೋಡೆಕೋರ ಅಕೆಯ ಬಳಿ ಇದ್ದ ಮೊಬೈಲ್​ ಮತ್ತು ಹಣ ಕಿತ್ತುಕೊಳ್ಳುತ್ತಾನೆ. ಘಟನೆಯ ಸಂಪೂರ್ಣ ದೃಶ್ಯ ಮನೆ ಮುಂದೆ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಲ್ಲಿಯವರೆಗೆ ಯಾರನ್ನೂ ಬಂಧಿಸಿಲ್ಲ.

Intro:Body:Conclusion:

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.