ETV Bharat / bharat

ದೆಹಲಿ ಬೆಂಕಿ ಅವಘಡದಲ್ಲಿ 43 ಮಂದಿ ಸಾವು: ಕಟ್ಟಡದ ಮಾಲೀಕನ ವಿರುದ್ಧ ಪ್ರಕರಣ ದಾಖಲು

author img

By

Published : Dec 8, 2019, 1:13 PM IST

ದೆಹಲಿ ಬೆಂಕಿ ಅವಘಡದಲ್ಲಿ 43 ಮಂದಿ ಸಾವು, Case registered under section 304 of the IPC against owner of the building
ದೆಹಲಿ ಬೆಂಕಿ ಅವಘಡದಲ್ಲಿ 43 ಮಂದಿ ಸಾವು

ನಗರದ ಅನಜ್​ ಮಂಡಿಯಲ್ಲಿರುವ ಬಹುಮಹಡಿ ಕಟ್ಟಡದಲ್ಲಿ ಅಗ್ನಿ ಅನಾಹುತ ಸಂಭವಿಸಿ 43 ಜನ ಸಾವನ್ನಪ್ಪಿರುವ ಪ್ರಕರಣ ಸಂಬಂಧ ಕಟ್ಟಡ ಮಾಲೀಕ ಹಾಗೂ ಬಾಡಿಗೆದಾರರ ವಿರುದ್ಧ ಐಪಿಸಿ ಸೆಕ್ಷನ್​ 304ರ ಅಡಿಯಲ್ಲಿ ದೂರು ದಾಖಲಾಗಿದೆ. ಸದ್ಯ ಕಟ್ಟಡ ಮಾಲೀಕ ರೆಹಾನ್​ ಪರಾರಿಯಾಗಿದ್ದಾನೆಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ನವದೆಹಲಿ: ನಗರದ ಅನಜ್​ ಮಂಡಿಯಲ್ಲಿರುವ ಬಹುಮಹಡಿ ಕಟ್ಟಡದಲ್ಲಿ ಅಗ್ನಿ ಅನಾಹುತ ಸಂಭವಿಸಿ 43 ಜನ ಸಾವನ್ನಪ್ಪಿರುವ ಪ್ರಕರಣ ಸಂಬಂಧ ಕಟ್ಟಡ ಮಾಲೀಕ ಹಾಗೂ ಬಾಡಿಗೆದಾರರ ವಿರುದ್ಧ ದೂರು ದಾಖಲಾಗಿದೆ.

ಐಪಿಸಿ ಸೆಕ್ಷನ್​ 304ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಕಟ್ಟಡ ಮಾಲೀಕ ರೆಹಾನ್​ ಪರಾರಿಯಾಗಿದ್ದಾನೆಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಇಂದು ಬೆಳ್ಳಂಬೆಳಗ್ಗೆ ಘಟನೆ ನಡೆದಿದ್ದು, ಬೆಂಕಿಯ ಕೆನ್ನಾಲಿಗೆಯಿಂದ 50ಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಲಾಗಿದೆ. ಈ ನಡುವೆಯೂ ಕಟ್ಟಡದಲ್ಲಿ ಹೊಗೆ ತುಂಬಿಕೊಂಡು 43 ಜನ ಸಾವನ್ನಪ್ಪಿದ್ದಾರೆಂದು ದೆಹಲಿ ಪೊಲೀಸರು ತಿಳಿಸಿದ್ದರು. ಕಟ್ಟಡದಲ್ಲಿ ಹೊಗೆ ತುಂಬಿ ಉಸಿರುಗಟ್ಟಿ 43 ಜನ ಸಾವನ್ನಪ್ಪಿದ್ದಾರೆ ಎಂದು ದೆಹಲಿ ಪೊಲೀಸರು ತಿಳಿಸಿದ್ದು, ಅವೈಜ್ಞಾನಿಕವಾಗಿ ಕಟ್ಟಡ ನಿರ್ಮಾಣ ಆರೋಪದ ಮೇಲೆ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಎಲ್​ಎನ್​ಜೆಪಿ ಆಸ್ಪತ್ರೆಗೆ ಕೇಜ್ರಿವಾಲ್​ ಭೇಟಿ...

ಇನ್ನು ಘಟನೆಯಿಂದ ಗಾಯಗೊಂಡು ಎಲ್​ಎನ್​ಜೆಪಿ ಆಸ್ಪತ್ರೆಗೆ ದಾಖಲಾಗಿರುವ ಗಾಯಾಳುಗಳನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಭೇಟಿ ಮಾಡಿ ವಿಚಾರಿಸಿದರು.

ಪ್ರಧಾನಿ ಮೋದಿಯಿಂದ ಪರಿಹಾರ ಘೋಷಣೆ...

  • PM @narendramodi announced an ex-gratia of Rs. 2 lakh each from PMNRF for the next of kin of those who have lost their lives due to the tragic fire in Delhi.

    PM has also approved Rs. 50,000 each for those seriously injured in the fire.

    — PMO India (@PMOIndia) December 8, 2019 " class="align-text-top noRightClick twitterSection" data=" ">

ಇನ್ನು ಮೃತರ ಕುಟುಂಬಗಳಿಗೆ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂ. ಪರಿಹಾರವನ್ನು ಪ್ರಧಾನಿ ಮೋದಿ ಘೋಷಿಸಿದ್ದಾರೆ. ಇನ್ನೊಂದೆಡೆ ಗಂಭೀರವಾಗಿ ಗಾಯಗೊಂಡಿರುವವರಿಗೆ ತಲಾ 50,000 ರೂ. ಪರಿಹಾರ ಘೋಷಿಸಿದ್ದಾರೆ.

Intro:Body:

case


Conclusion:

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.