ETV Bharat / bharat

ಪಬ್‌ಜಿ ಆಟದಲ್ಲೇ ಮಗ್ನ: ನೀರೆಂದು ರಾಸಾಯನಿಕ ಸೇವಿಸಿ ಯುವಕ ಸಾವು!

author img

By

Published : Dec 10, 2019, 11:54 PM IST

PUBG death
ಯುವಕ ಸಾವು

ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಪಬ್ಜಿ ಆಟದಲ್ಲಿ ಮುಳುಗಿ ಹೋಗಿದ್ದ ಯುವಕನೊಬ್ಬ ನೀರಿನ ಬದಲು ರಾಸಾಯನಿಕ ಸೇವಿಸಿ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.

ಆಗ್ರಾ(ಉತ್ತರ ಪ್ರದೇಶ): ಬ್ಲೂವೇಲ್ ಗೇಮ್​ನ ಬಳಿಕ ಈಗ ಪಬ್‌ಜಿ ಆಟದಿಂದಾಗಿ ಯುವಕರು ಪ್ರಾಣ ಕಳೆದುಕೊಳ್ತಿದ್ದಾರೆ. ಪಬ್‌ಜಿ ಆಡುವುದರಲ್ಲೇ ನಿರತವಾಗಿದ್ದ ಯುವಕನೊಬ್ಬ ನೀರಿನ ಬದಲು ರಾಸಾಯನಿಕ ಸೇವಿಸಿ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ!

ಪಬ್‌ಜಿ ಆಡುತ್ತಾ ನೀರೆಂದು ರಾಸಾಯನಿಕ ಸೇವಿಸಿ ಯುವಕ ಸಾವು

ಸೌರಭ್, ಮೃತಪಟ್ಟ ಯುವಕ. ಗೋಲ್ಡನ್ ಜುಬಿಲಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಪಬ್‌ಜಿ ಆಟದಲ್ಲಿ ಮುಳುಗಿ ಹೋಗಿದ್ದ ಸೌರಭ್, ನೀರು ಎಂದುಕೊಂಡು ನೀರಿನ ಬದಲು ರಾಸಾಯನಿಕವನ್ನು ಸೇವಿಸಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಆತನ ಜೊತೆಯಲ್ಲೇ ಇದ್ದ ಸ್ನೇಹಿತ ಸಂತೋಷ್ ಶರ್ಮಾ, ಆಗ್ರಾ ಕ್ಯಾಂಟ್​ನ ಜಿಆರ್‌ಪಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾನೆ.

ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಮೃತರ ಕುಟುಂಬಕ್ಕೆ ವಿಷಯ ತಿಳಿಸಿ, ರಾಸಾಯನಿಕವನ್ನು ವಶಪಡಿಸಿಕೊಂಡಿದ್ದಾರೆ.

Intro:Body:

national


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.