ETV Bharat / bharat

ಸಂವಿಧಾನ ಶಿಲ್ಪಿಗೆ 129ನೇ ಜನ್ಮ ದಿನಾಚರಣೆ; ರಾಷ್ಟ್ರ ನಾಯಕರಿಂದ ಗೌರವ ವಂದನೆ

author img

By

Published : Apr 14, 2020, 11:54 AM IST

129th birth anniversary of Dr. B R Ambedkar
ಅಂಬೇಡ್ಕರ್

ಇಂದು ಭಾರತದ ಸಂವಿಧಾನ ಶಿಲ್ಪಿ, ಸಾಮಾಜಿಕ ಅಸಮಾನತೆಯ ವಿರುದ್ಧ ಹೋರಾಡಿದ ಸಂತ, ದಲಿತರ ಪಾಲಿನ ಆರಾಧ್ಯ ದೈವ, ಶತಮಾನದ ಮಹಾನ್​ ದಾರ್ಶನಿಕ, ಸಮಾನತೆಯ ಹರಿಕಾರ, ಅಸ್ಪೃಶ್ಯತೆ, ಅಸಮಾನತೆ, ಮಹಿಳಾ ಸಮಾನತೆ ವಿರುದ್ಧ ಹೋರಾಡಿದ ಮಾರ್ಗದರ್ಶಿ ಡಾ. ಭೀಮರಾವ್​ ರಾಮ್​ಜೀ ಅಂಬೇಡ್ಕರ್​ ಅವರ 129 ನೇ ಜನ್ಮದಿನವನ್ನು ದೇಶದಾದ್ಯಂತ ಅವರಿಗೆ ಗೌರವ ವಂದನೆ ಸಲ್ಲಿಸುವ ಮೂಲಕ ಆಚರಿಸಲಾಗುತ್ತಿದೆ.

ನವದೆಹಲಿ: ಇಂದು ಭಾರತದ ಸಂವಿಧಾನ ಶಿಲ್ಪಿ ಡಾ. ಬಿ ಆರ್​. ಅಂಬೇಡ್ಕರ್​ ಅವರ 129ನೇ ಜನ್ಮ ದಿನಾಚರಣೆ. ಈ ಹಿನ್ನೆಲೆಯಲ್ಲಿ ರಾಷ್ಟ್ರ ನಾಯಕರು ಗೌರವ ವಂದನೆ ಸಲ್ಲಿಸಿದ್ದಾರೆ.

ರಾಷ್ಟ್ರಪತಿ ರಾಮನಾಥ್​ ಕೋವಿಂದ್​, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್​ ಶಾ, ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ, ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಸೇರಿದಂತೆ ಹಲವು ರಾಷ್ಟ್ರೀಯ ನಾಯಕರು ಸಂವಿಧಾನ ಶಿಲ್ಪಿಗೆ ಗೌರವ ನಮನ ಸಲ್ಲಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಅಂಬೇಡ್ಕರ್​ ಅವರು ಬದುಕಿದ್ದಾಗ ಅವರಿಗೆ ಸಿಗಬೇಕಿದ್ದ ಗೌರವವನ್ನು ಕಾಂಗ್ರೆಸ್​ ಕೊಟ್ಟಿಲ್ಲ. ಅವರು ಸಾವನ್ನಪ್ಪಿದ ನಾಲ್ಕು ದಶಕಗಳ ಬಳಿಕ ಅವರಿಗೆ ಭಾರತ ರತ್ನದ ಗೌರವ ಸಲ್ಲಿಸಲಾಯ್ತು. ಆದರೆ ನಮ್ಮ ಬಿಜೆಪಿ ಸರ್ಕಾರವು ಸಂವಿಧಾನ ಶಿಲ್ಪಿಯ ತತ್ವ ಸಿದ್ಧಾಂತಗಳನ್ನು ನೈಜವಾಗಿಸುವಲ್ಲಿ ಶಿಸ್ತುಬದ್ಧ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದ್ದಾರೆ.

ಅಂಬೇಡ್ಕರ್ ಅವರ ಕೋಟ್ಯಾಂತರ ಅನುಯಾಯಿಗಳು ಹಾಗೂ ಬಿಎಸ್​ಪಿ ಪರವಾಗಿ ನಾನು ಅವರಿಗೆ ಗೌರವ ಸಲ್ಲಿಸುತ್ತೇನೆ. ದಲಿತರು, ಆದಿವಾಸಿಗಳು ಮತ್ತು ಇತರ ಮೂಲೆಗುಂಪಾಗಿದ್ದ ಸಮುದಾಯಗಳು ಸ್ವಾಭಿಮಾನದಿಂದ ಬದುಕಲು ಅವರು ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಅವರ ಕನಸುಗಳನ್ನು ಈಡೇರಿಸಲು 1984 ರ ಇದೇ ದಿನ ಬಿಎಸ್​ಪಿಯನ್ನು ಸ್ಥಾಪಿಸಲಾಯಿತು ಎಂದು ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ ಅಭಿಪ್ರಾಯಪಟ್ಟರು.

ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿ, ಶ್ರೇಷ್ಠ ಸಮಾಜ ಸುಧಾರಕ, ದೇಶದ ಸಂವಿಧಾನ ಶಿಲ್ಪಿಗೆ ನಮನ ಸಲ್ಲಿಸಿದ್ದಾರೆ.

  • My tributes to the great social reformer & chief architect of our Constitution, Babasaheb Bhimrao Ambedkar Ji on his Jayanti.

    डॉ. बाबासाहेब अम्बेडकर जी की जयंती पर सादर नमन।#IAmAmbedkar pic.twitter.com/zKTmmFx690

    — Rahul Gandhi (@RahulGandhi) April 14, 2020 " class="align-text-top noRightClick twitterSection" data=" ">
ETV Bharat Logo

Copyright © 2024 Ushodaya Enterprises Pvt. Ltd., All Rights Reserved.