ETV Bharat / bharat

ಕೋವಿನ್​ ಪೋರ್ಟಲ್‌ನಲ್ಲಿ INCOVACC ಸೇರಿಸಲು ಕೇಂದ್ರಕ್ಕೆ ಭಾರತ್ ಬಯೋಟೆಕ್‌ ಮನವಿ

author img

By

Published : Dec 11, 2022, 1:11 PM IST

iNCOVACC in Kovin portal
ಕೋವಿನ್​ ಪೋರ್ಟಲ್‌

INCOVACC ಲಸಿಕೆ ಸ್ವೀಕರಿಸುವವರಿಗೂ ಕೂಡ ಲಸಿಕೆ ಪ್ರಮಾಣಪತ್ರಗಳು ಬೇಕಾಗುವುದರಿಂದ ಕೋವಿನ್ ಪೋರ್ಟಲ್‌ನಲ್ಲಿ INCOVACC ಸೇರಿಸಲು ಭಾರತ್ ಬಯೋಟೆಕ್ ಸಂಸ್ಥೆಯು ಕೇಂದ್ರ ಸರ್ಕಾರವನ್ನು ವಿನಂತಿಸಿದೆ.

ಹೈದರಾಬಾದ್​: ಭಾರತ್ ಬಯೋಟೆಕ್ ತನ್ನ ಇಂಟ್ರಾನಾಸಲ್ ಕೋವಿಡ್​-19ರ ಲಸಿಕೆ INCOVACC ಅನ್ನು ಕೋವಿನ್​ ಪೋರ್ಟಲ್‌ನಲ್ಲಿ ಸೇರಿಸಲು ಕೇಂದ್ರ ಸರ್ಕಾರವನ್ನು ವಿನಂತಿಸಿದೆ. ಅನುಮತಿ ಸಿಕ್ಕರೆ ಈ ಲಸಿಕೆ ಪಡೆಯುವವರಿಗೂ ಇದು ಪ್ರಮಾಣ ಪತ್ರವನ್ನು ಪಡೆಯಲು ಅನುವು ಮಾಡಿಕೊಡಲಿದೆ.

ಭಾರತ್ ಬಯೋಟೆಕ್​ ಇದರ ಸಲುವಾಗಿ ಪ್ರಸ್ತುತ ಅಂತಾರಾಷ್ಟ್ರೀಯ ಸಂಭಾವ್ಯ ಪಾಲುದಾರರೊಂದಿಗೆ ಚರ್ಚೆ ನಡೆಸುತ್ತಿದೆ ಮತ್ತು ಜಾಗತಿಕವಾಗಿ ಇಂಟ್ರಾನಾಸಲ್ ಲಸಿಕೆ ತಯಾರಿಕೆ ಮತ್ತು ವಿತರಣೆಗಾಗಿ ಕಂಪನಿಯನ್ನು ಸಂಪರ್ಕಿಸಿದ್ದಾರೆ ಎಂದು ಕಂಪೆನಿ ಮೂಲಗಳು ತಿಳಿಸಿವೆ.

ತುರ್ತು ಪರಿಸ್ಥಿತಿಯಲ್ಲಿ ನಿರ್ಬಂಧಿತ ಬಳಕೆಗಾಗಿ INCOVACC ಅನ್ನು ಅನುಮೋದಿಸಲಾಗಿತ್ತು.ಕೋವಿನ್ ಪೋರ್ಟಲ್‌ನಲ್ಲಿ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಲಸಿಕೆ ಸ್ವೀಕರಿಸುವವರಿಗೆ ಲಸಿಕೆ ಪ್ರಮಾಣಪತ್ರಗಳು ದೊರಕುತ್ತಿತ್ತು. ಆದರೆ INCOVACC ಲಸಿಕೆ ಸ್ವೀಕರಿಸುವವರಿಗೂ ಕೂಡ ಲಸಿಕೆ ಪ್ರಮಾಣಪತ್ರಗಳು ಬೇಕಾಗುವುದರಿಂದ ಕೋವಿನ್ ಪೋರ್ಟಲ್‌ನಲ್ಲಿ INCOVACC ಅನ್ನು ಸೇರಿಸಲು ಭಾರತ್ ಬಯೋಟೆಕ್ ಕೇಂದ್ರ ಸರ್ಕಾರವನ್ನು ಕೇಳಿಕೊಂಡಿದೆ. ಒಮ್ಮೆ ಇದನ್ನು ಸಕ್ರಿಯಗೊಳಿಸಿದರೆ, ಕೋವಿಡ್ ವಿರುದ್ಧದ ಪ್ರತಿರಕ್ಷಣೆ ಕಾರ್ಯಕ್ರಮದಲ್ಲಿ ಇಂಟ್ರಾನಾಸಲ್ ಲಸಿಕೆಯನ್ನು ಪರಿಚಯಿಸಿದ ಕೆಲವೇ ದೇಶಗಳಲ್ಲಿ ಭಾರತವೂ ಒಂದಾಗಲಿದೆ ಎಂದು ಮೂಲಗಳು ತಿಳಿಸಿವೆ.

ನಗರ-ಆಧಾರಿತ ಲಸಿಕೆ ತಯಾರಕರು ಆಯಾ ರಾಷ್ಟ್ರಗಳಿಂದ ಅನುಮೋದನೆಯನ್ನು ಪಡೆದ ನಂತರ INCOVACC ಅನ್ನು ಇತರ ದೇಶಗಳಿಗೆ ರಫ್ತು ಮಾಡಲು ಯೋಜಿಸಿದ್ದಾರೆ. ಲಸಿಕೆ ತಯಾರಕರು ಸೆಪ್ಟೆಂಬರ್ 6 ರಂದು ವಿಶ್ವದ ಮೊದಲ ಇಂಟ್ರಾನಾಸಲ್ ಕೋವಿಡ್​-19 ಲಸಿಕೆ INCOVACCಯನ್ನು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದಿಂದ 18 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ತುರ್ತು ಪರಿಸ್ಥಿತಿಯಲ್ಲಿ ನಿರ್ಬಂಧಿತ ಬಳಕೆಯ ಅಡಿಯಲ್ಲಿ ಅನುಮೋದನೆಯನ್ನು ಪಡೆದಿದೆ ಎಂದು ಘೋಷಿಸಿತ್ತು.

ಇದೇ ರೀತಿ INCOVACC ಅನ್ನು ಭಾರತದಲ್ಲಿ ಕೇಂದ್ರೀಯ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್​ನಿಂದ 18 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ತುರ್ತು ಪರಿಸ್ಥಿತಿಯಲ್ಲಿ ನಿರ್ಬಂಧಿತ ಬಳಕೆಯ ಅಡಿಯಲ್ಲಿ ಅನುಮೋದನೆ ಪಡೆದಿದೆ. ಲಸಿಕೆಯನ್ನು ವಾಷಿಂಗ್ಟನ್ ವಿಶ್ವವಿದ್ಯಾನಿಲಯ, ಸೇಂಟ್ ಲೂಯಿಸ್ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಅಡೆನೊವೈರಲ್ ವೆಕ್ಟರ್ ರಚನೆಯನ್ನು ವಿನ್ಯಾಸಗೊಳಿಸಿಲಾಗಿದೆ. ಅಲ್ಲದೆ ಪೂರ್ವ-ವೈದ್ಯಕೀಯ ಅಧ್ಯಯನಗಳಲ್ಲಿ ಮೌಲ್ಯಮಾಪನ ಸಹ ಮಾಡಿದೆ. ಅಲ್ಲದೆ ಲಸಿಕೆಯ ಮೊದಲ ಅಭ್ಯರ್ಥಿಯು ಹಂತ I, II ಮತ್ತು III ಕ್ಲಿನಿಕಲ್ ಪ್ರಯೋಗಗಳಿಗೆ ಒಳಗಾಗಿ ಯಶಸ್ವಿ ಫಲಿತಾಂಶವನ್ನು ತಂದುಕೊಟ್ಟಿದೆ. ಒಟ್ಟು ಭಾರತದಾದ್ಯಂತ 14 ಪ್ರಾಯೋಗಿಕ ತಾಣಗಳಲ್ಲಿ ಇಮ್ಯುನೊಜೆನಿಸಿಟಿಗಾಗಿ ಹಂತ-III ಪ್ರಯೋಗಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ.

ಇದನ್ನೂ ಓದಿ: ಮಲೇರಿಯಾ ಪತ್ತೆಗೆ ಹೊಸ ವಿಧಾನ ಅಭಿವೃದ್ಧಿಪಡಿಸಿದ ಸಂಶೋಧಕರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.