ETV Bharat / bharat

Badrinath Landslide: ಭೂಕುಸಿತ, ಬದರಿನಾಥ್ ರಾಷ್ಟ್ರೀಯ ಹೆದ್ದಾರಿ ಬಂದ್.. ಗಂದರ್‌ಬಾಲ್​ನಿಂದ ಯಾತ್ರೆ ಆರಂಭ

author img

By

Published : Jul 1, 2023, 10:22 AM IST

Badrinath highway blocked due to landslide  Badrinath highway blocked  Badrinath National highway blocked  National highway blocked due to landslide  highway blocked due to landslide in Chhinka  badrinath national highway landslide  ಬದರಿನಾಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ  ಜಾಮ್​ ಆಗದಂತೆ ಎಚ್ಚರ ವಹಿಸಿದ ಅಧಿಕಾರಿಗಳು  ಬದರಿನಾಥ ಹೆದ್ದಾರಿಯಲ್ಲಿ ಪದೇ ಪದೇ ಭೂಕುಸಿತ  ಚಾರ್ಧಾಮ್ ಯಾತ್ರೆ  ಉತ್ತರಾಖಂಡ್ ಚಾರ್ಧಾಮ್ ಯಾತ್ರೆ  ಚಾರ್ಧಾಮ್ ಯಾತ್ರೆಯ ಸಮಯದಲ್ಲಿ ಭೂಕುಸಿತ  ಬದರಿನಾಥ್ ರಾಷ್ಟ್ರೀಯ ಹೆದ್ದಾರಿ  ಬದರಿನಾಥ್ ರಾಷ್ಟ್ರೀಯ ಹೆದ್ದಾರಿ ಬಂದ್​ ರಸ್ತೆಯಲ್ಲೇ ರಾತ್ರಿ ಕಳೆದ ಭಕ್ತಾದಿಗಳು
ಬದರಿನಾಥ್ ರಾಷ್ಟ್ರೀಯ ಹೆದ್ದಾರಿ ಬಂದ್

ಉತ್ತರಾಖಂಡ್ ಚಾರ್ಧಾಮ್ ಯಾತ್ರೆಯ ಸಮಯದಲ್ಲಿ ಭೂಕುಸಿತವಾಗಿದ್ದು, ಬದರಿನಾಥ್ ರಾಷ್ಟ್ರೀಯ ಹೆದ್ದಾರಿಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.

ಚಮೋಲಿ (ಉತ್ತರಾಖಂಡ್​) : ಜಿಲ್ಲೆಯ ಚಿಂಕಾದ ಬದರಿನಾಥ್ ರಾಷ್ಟ್ರೀಯ ಹೆದ್ದಾರಿ 07 ಅನ್ನು ಮತ್ತೆ ಬಂದ್​ ಮಾಡಲಾಗಿದೆ. ಚೀಂಕಾದಲ್ಲಿ ಗುಡ್ಡ ಕುಸಿದ ಪರಿಣಾಮ ಮಣ್ಣಿನ ಅವಶೇಷಗಳು ರಸ್ತೆಯ ಮೇಲೆ ಬಿದ್ದಿದೆ. ಕೂಡಲೇ ಪೊಲೀಸರು ಸ್ಥಳಕ್ಕಾಗಮಿಸಿ ಮಣ್ಣು ತೆರವು ಕಾರ್ಯ ಕೈಗೊಂಡಿದ್ದಾರೆ.

ಬದರಿನಾಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ: ಭೂಕುಸಿತಗೊಂಡ ಪರಿಣಾಮ ಬದರಿನಾಥಕ್ಕೆ ತೆರಳುವ ಯಾತ್ರಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಸ್ತೆ ಮೇಲೆ ಮಣ್ಣಿನ ಅವಶೇಷಗಳು ಬಿದ್ದಿದ್ದರಿಂದ ಪೊಲೀಸರು ಎರಡು ಹಿಟಾಚಿಯಿಂದ ಮಣ್ಣು ತೆರವು ಕಾರ್ಯ ಕೈಗೊಂಡಿದ್ದಾರೆ. ತಾತ್ಕಾಲಿಕವಾಗಿ ರಸ್ತೆ ಬಂದ್​ ಮಾಡಲಾಗಿದ್ದು, ರಸ್ತೆಯ ಎರಡೂ ಬದಿಗಳಲ್ಲಿ ಯಾತ್ರಾರ್ಥಿಗಳು ತಮ್ಮ ವಾಹನಗಳಲ್ಲಿ ತಂಗಿದ್ದಾರೆ. ಮಣ್ಣು ತೆರವು ಕಾರ್ಯಾಚರಣೆ ಮುಗಿದ ಮೇಲೆ ಪೊಲೀಸರು ರಸ್ತೆ ಸಂಚಾರ ಸುಗಮಗೊಳಿಸಲಿದ್ದಾರೆ.

ಟ್ರಾಫಿಕ್​ ಜಾಮ್​ ಆಗದಂತೆ ಎಚ್ಚರ ವಹಿಸಿದ ಅಧಿಕಾರಿಗಳು: ಮತ್ತೊಂದೆಡೆ ಭದ್ರತೆ ದೃಷ್ಟಿಯಿಂದ ಬದರಿನಾಥ ಮತ್ತು ಹೇಮಕುಂಡಕ್ಕೆ ಬರುವ ಯಾತ್ರಾರ್ಥಿಗಳನ್ನು ಬರ್ಹಿ ಮತ್ತು ಚಮೋಲಿಯಲ್ಲಿ ಪೊಲೀಸರು ತಡೆಗೋಡೆ ನಿರ್ಮಿಸಿದ್ದಾರೆ. ಇದರಿಂದ ಮಣ್ಣು ತೆರವು ಕಾರ್ಯ ಮುಗಿಯುವವರೆಗೆ ಸ್ಥಳದಲ್ಲಿ ಟ್ರಾಫಿಕ್​ ಜಾಮ್ ಆಗುವ ಪರಿಸ್ಥಿತಿ ಉಂಟಾಗುವುದಿಲ್ಲ.

ಬದರಿನಾಥ ಹೆದ್ದಾರಿಯಲ್ಲಿ ಪದೇ ಪದೇ ಭೂಕುಸಿತ: ಚಿಂಕಾದ ಬದರಿನಾಥ ಹೆದ್ದಾರಿ ಭೂಕುಸಿತದಿಂದ ಇಡೀ ದಿನ ಹೆದ್ದಾರಿಗೆ ಅಡ್ಡಿಯಾಗಿತ್ತು. ಇದರಿಂದಾಗಿ ಸಾವಿರಾರು ಯಾತ್ರಾರ್ಥಿಗಳು ಹೆದ್ದಾರಿಯಲ್ಲಿ ಸಿಲುಕಿಕೊಂಡರು. ಕೆಲವು ಗಂಟೆಗಳ ನಂತರ ರಸ್ತೆ ಸಂಚಾರ ಸುಗಮವಾಗಲಿದೆ ಎಂದು ರಸ್ತೆ ತೆರೆಯುವಲ್ಲಿ ನಿರತರಾಗಿರುವ ಹೆದ್ದಾರಿ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಗುಡ್ಡದಿಂದ ಚಿಕ್ಕ ಚಿಕ್ಕ ಬಂಡೆಗಳು ನಿರಂತರವಾಗಿ ಬೀಳುತ್ತಿರುವುದರಿಂದ ರಸ್ತೆ ತೆರವು ಕಾರ್ಯಾಚರಣೆಗೆ ಅಡ್ಡಿಯಾಗಿದೆ.

ಚಾರ್ಧಾಮ್ ಯಾತ್ರೆ: ಈ ದಿನಗಳಲ್ಲಿ ಉತ್ತರಾಖಂಡದ ಚಾರ್ಧಾಮ್ ಯಾತ್ರೆ ನಡೆಯುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಯಾತ್ರಾರ್ಥಿಗಳು ಗಂಗೋತ್ರಿ, ಯಮುನೋತ್ರಿ, ಕೇದಾರನಾಥ ಮತ್ತು ಬದರಿನಾಥ್‌ಗೆ ದರ್ಶನಕ್ಕೆ ಆಗಮಿಸುತ್ತಿದ್ದಾರೆ. ಈಗಾಗಲೇ ಮುಂಗಾರು ಕೂಡ ಎಂಟ್ರಿ ಕೊಟ್ಟಿದೆ. ಇದರಿಂದ ಭೂಕುಸಿತದ ಘಟನೆಗಳೂ ಹೆಚ್ಚಿವೆ. ನಾಲ್ಕು ಧಾಮಗಳನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಆಗಾಗೆ ಭೂಕುಸಿತಗಳು ಸಂಭವಿಸುತ್ತಿರುತ್ತವೆ. ಹವಾಮಾನದ ಬಗ್ಗೆ ತಿಳಿದ ನಂತರವೇ ಯಾತ್ರೆಗೆ ತೆರಳುವಂತೆ ಸರ್ಕಾರ ಮತ್ತು ಆಡಳಿತ ಭಕ್ತರಿಗೆ ಮನವಿ ಮಾಡಿದೆ.

ಓದಿ: Amarnath Yatra 2023: ಅಮರನಾಥ ಯಾತ್ರೆ ಆರಂಭ... ಬಿಗಿ ಭದ್ರತೆಯಲ್ಲಿ ಯಾತ್ರೆಗೆ ಹೊರಟ ಮೊದಲ ಬ್ಯಾಚ್ - ವಿಡಿಯೋ

ಮೊದಲ ಪ್ರಯಾಣ ಆರಂಭ: ಗಂದರ್‌ಬಾಲ್, ಜಮ್ಮು ಮತ್ತು ಕಾಶ್ಮೀರ: ವಾರ್ಷಿಕ ಅಮರನಾಥ ಯಾತ್ರೆಯು ಶನಿವಾರದಂದು ಜಮ್ಮು ಕಾಶ್ಮೀರದ ಗಂದರ್‌ಬಾಲ್‌ನ ಬಲ್ಟಾಲ್ ಬೇಸ್ ಕ್ಯಾಂಪ್‌ನಿಂದ ಅಮರನಾಥ ಗುಹೆಗೆ ಯಾತ್ರಿಕರ ಮೊದಲ ಬ್ಯಾಚ್ ಪ್ರಯಾಣ ಆರಂಭವಾಗಿದೆ. ಬಲ್ಟಾಲ್ ಬೇಸ್ ಕ್ಯಾಂಪ್‌ನಲ್ಲಿ ಶ್ರೀ ಅಮರನಾಥ ಪುಣ್ಯಕ್ಷೇತ್ರ ಮಂಡಳಿಯ ಹಿರಿಯ ಅಧಿಕಾರಿಗಳು ಮತ್ತು ಪೊಲೀಸರು ಗಂದರ್‌ಬಾಲ್ ಉಪ ಆಯುಕ್ತ ಶ್ಯಾಂಬೀರ್ ಯಾತ್ರೆಗೆ ಚಾಲನೆ ನೀಡಿದರು.

"ಇಂದು ನಾವು ಮೊದಲ ಬ್ಯಾಚ್ ಪ್ರಯಾಣಿಕರನ್ನು ಇಲ್ಲಿಂದ ಕಳುಹಿಸುತ್ತಿದ್ದೇವೆ. ಎಲ್ಲರಿಗೂ ಪ್ರಯಾಣ ಸುಖಕರವಾಗಿರಲಿ. ನಮ್ಮ ಸ್ವಯಂಸೇವಕರು ಸಹಾಯ ಮಾಡಲು ಎಲ್ಲೆಡೆ ಇದ್ದಾರೆ" ಎಂದು ಗಂದರ್‌ಬಲ್‌ನ ಉಪ ಆಯುಕ್ತ ಶ್ಯಾಂಬಿರ್ ಹೇಳಿದರು. 62 ದಿನಗಳ ಯಾತ್ರೆಯು ಆಗಸ್ಟ್ 31 ರಂದು ಮುಕ್ತಾಯಗೊಳ್ಳಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.