ETV Bharat / bharat

ಗ್ಯಾಂಗ್​ಸ್ಟರ್​ - ರಾಜಕಾರಣಿ ಅತೀಕ್ ಅಹ್ಮದ್, ಸಹೋದರ ಅಶ್ರಫ್​ಗೆ​ ಗುಂಡಿಕ್ಕಿ ಹತ್ಯೆ

author img

By

Published : Apr 15, 2023, 11:57 PM IST

Updated : Apr 16, 2023, 1:44 AM IST

ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲಿ ಗ್ಯಾಂಗ್​ಸ್ಟರ್​ - ರಾಜಕಾರಣಿ ಅತೀಕ್ ಅಹ್ಮದ್ ಮತ್ತು ಸಹೋದರ ಅಶ್ರಫ್ ಅಹ್ಮದ್​ ಅವರನ್ನು ಗುಂಡಿಕ್ಕಿ ಕೊಲೆ ಮಾಡಲಾಗಿದೆ. ಈ ಹತ್ಯೆ ಉತ್ತರಪ್ರದೇಶದಲ್ಲಿ ಭಾರಿ ಸದ್ದು ಮಾಡಿದ್ದು, ಲಖನೌ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಭಾರಿ ಬಿಗಿ ಬಂದೋಬಸ್ತ್​ ಮಾಡಲಾಗಿದೆ,

http://10.10.50.85:6060/reg-lowres/15-April-2023/55773377_1504newsroom_1681583020_749.jpg
http://10.10.50.85:6060/reg-lowres/15-April-2023/55773377_1504newsroom_1681583020_749.jpg

ಪ್ರಯಾಗ್‌ರಾಜ್ (ಉತ್ತರ ಪ್ರದೇಶ): ಗ್ಯಾಂಗ್​ಸ್ಟರ್​ - ರಾಜಕಾರಣಿ ಅತೀಕ್ ಅಹ್ಮದ್ ಮತ್ತು ಸಹೋದರ ಅಶ್ರಫ್ ಅಹ್ಮದ್​ ಅವರನ್ನು ಅಪರಿಚಿತರು ಗುಂಡಿಕ್ಕಿ ಕೊಲೆ ಮಾಡಿರುವ ಘಟನೆ ಶನಿವಾರ ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲಿ ನಡೆದಿದೆ. ಅತೀಕ್​ ಪುತ್ರ ಅಸದ್ ಪೊಲೀಸ್​ ಎನ್​ಕೌಂಟರ್​ನಲ್ಲಿ ಹತ್ಯೆಯಾದ ಎರಡೇ ದಿನದಲ್ಲಿ ತಂದೆ ಮತ್ತು ಚಿಕ್ಕಪ್ಪನ ಕೊಲೆಯಾಗಿದೆ.

ಇದನ್ನೂ ಓದಿ: 101 ಕೇಸ್​ ಎದುರಿಸುತ್ತಿರುವ ಮಾಫಿಯಾ ಡಾನ್​ ಅತೀಕ್​ ಅಹ್ಮದ್​: ಕಿಡ್ನಾಪ್​ ಕೇಸ್​ನಲ್ಲಿ ಜೀವಾವಧಿ ಶಿಕ್ಷೆ

2005ರಲ್ಲಿ ನಡೆದ ಬಿಎಸ್ಪಿ ಶಾಸಕ ರಾಜು ಪಾಲ್ ಕೊಲೆ ಪ್ರಕರಣ ಮತ್ತು ಇದೇ ವರ್ಷದ ಫೆಬ್ರವರಿಯಲ್ಲಿ ನಡೆದ ವಕೀಲ ಉಮೇಶ್ ಪಾಲ್ ಕೊಲೆ ಪ್ರಕರಣದಲ್ಲಿ ಅತೀಕ್​ ಆರೋಪಿಯಾಗಿದ್ದರು. ಇದೇ ಉಮೇಶ್ ಪಾಲ್ ಕೊಲೆ ಪ್ರಕರಣದಲ್ಲೂ ಅತೀಕ್​ನ ಪುತ್ರ ಅಸದ್​ ಮತ್ತ ಶೂಟರ್​ ಗುಲಾಮ್‌ ಭಾಗಿಯಾಗಿದ್ದರು. ಆದರೆ, ಏಪ್ರಿಲ್​ 13ರಂದು ಅತೀಕ್​ನನ್ನು ಕರೆದುಕೊಂಡು ಹೋಗುತ್ತಿದ್ದಾಗ ಪೊಲೀಸ್​ ವಾಹನ ಮೇಲೆ ದಾಳಿಗೆ ಹೊಂಚು ಹಾಕಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಇದೇ ಸಂದರ್ಭದಲ್ಲಿ ನಡೆದ ಎನ್​ಕೌಂಟರ್​ನಲ್ಲಿ ಅಸದ್​ ಮತ್ತು ಗುಲಾಮ್​ ಹತರಾಗಿದ್ದರು.

ಇಂದು ಅತೀಕ್​ ಮತ್ತು ಅಶ್ರಫ್​ ಇಬ್ಬರನ್ನೂ ವೈದ್ಯಕೀಯ ಚಿಕಿತ್ಸೆಗಾಗಿ ಪೊಲೀಸರು ಕರೆದೊಯ್ಯುವಾಗ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದರು. ಈ ವೇಳೆ ಗುಂಡಿನ ದಾಳಿ ಮಾಡಲಾಗಿದೆ. ಇದಕ್ಕೂ ಮುನ್ನ ಆತನ ಮಗ ಅಸದ್​ ಅಂತ್ಯಕ್ರಿಯೆಗೆ ಕುರಿತ ಕೇಳಿದ ಪ್ರಶ್ನೆಗೆ ಅತೀಕ್​, ನಮ್ಮನ್ನು ಕರೆದುಕೊಂಡು ಹೋಗಲಿಲ್ಲ, ಆದ್ದರಿಂದ ನಾವು ಹೋಗಲಿಲ್ಲ ಎಂದು ಹೇಳಿದರು. ಇದೇ ಅತೀಕ್​ನಿಂದ ಬಂದ ಕೊನೆಯ ಮಾತು...

ವಿಪರ್ಯಾಸವೆಂದರೆ ಅತೀಕ್‌ಗೆ ಅವರ ಪುತ್ರ ಅಸದ್‌ನ ಅಂತಿಮ ವಿಧಿವಿಧಾನಗಳಲ್ಲಿ ಭಾಗವಹಿಸಲು ಅವಕಾಶ ನೀಡಿರಲಿಲ್ಲ. ಅಸದ್​​​​ನನ್ನು ಶನಿವಾರ ಮಧ್ಯಾಹ್ನ ಕಸರಿ ಮಸಾರಿಯಲ್ಲಿ ಸಮಾಧಿ ಮಾಡಲಾಯಿತು. ಭಾರಿ ಪೊಲೀಸ್ ಭದ್ರತೆಯ ನಡುವೆ ಕೆಲವು ದೂರದ ಸಂಬಂಧಿಕರು ಮತ್ತು ಸ್ಥಳೀಯರ ಸಮ್ಮುಖದಲ್ಲಿ ಧಪನ್​ ಮಾಡಲಾಯಿತು. ಒಂದು ಗಂಟೆಗಳ ಕಾಲ ಅಂತ್ಯಕ್ರಿಯೆ ಕಾರ್ಯ ನಡೆಯಿತು ಎಂದು ಪೊಲೀಸರು ತಿಳಿಸಿದ್ದಾರೆ.

  • Section 144 of CrPC imposed in all the districts of Uttar Pradesh, in the aftermath of the murder of Atiq Ahmed, his brother Ashraf Ahmed in Prayagraj. pic.twitter.com/zPEP4Z2Cdh

    — ANI (@ANI) April 15, 2023 " class="align-text-top noRightClick twitterSection" data=" ">

ಅತೀಕ್ ಶುಕ್ರವಾರವಷ್ಟೇ ತನ್ನ ಮಗನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಮ್ಯಾಜಿಸ್ಟ್ರೇಟ್‌ಗೆ ಅನುಮತಿ ಕೋರಿದ್ದರು. ಅಂಬೇಡ್ಕರ್ ಜಯಂತಿ ನಿಮಿತ್ತ ಕೋರ್ಟ್​ ಶುಕ್ರವಾರ ರಜೆ ಇದ್ದ ಕಾರಣ ರಿಮಾಂಡ್ ಮ್ಯಾಜಿಸ್ಟ್ರೇಟ್‌ಗೆ ಮನವಿ ಸಲ್ಲಿಸಲಾಗಿತ್ತು ಎಂದು ಅತೀಕ್​ ಪರ ವಕೀಲ ಮನೀಶ್ ಖನ್ನಾ ಹೇಳಿದ್ದರು.

ಅಷ್ಟೇ ಅಲ್ಲ ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ತನಗೆ ಮತ್ತು ತನ್ನ ಕುಟುಂಬ ಸದಸ್ಯರಿಗೆ ರಕ್ಷಣೆ ನೀಡುವಂತೆ ಅತೀಕ್ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಹ ಸಲ್ಲಿಸಿದ್ದರು. ಪ್ರಕರಣದ ತನಿಖೆಗಾಗಿ ತನ್ನನ್ನು ಸಾಬರಮತಿ ಜೈಲಿನಿಂದ ಪ್ರಯಾಗ್‌ರಾಜ್ ಜೈಲಿಗೆ ವರ್ಗಾಯಿಸಿರುವುದನ್ನು ಅವರು ಪ್ರಶ್ನಿಸಿದ್ದರು. ಆದರೆ ಅವರ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಿಸಿತು. ಬದಲಿಗೆ ಅಲಹಾಬಾದ್ ಹೈಕೋರ್ಟ್‌ನಲ್ಲೇ ಈ ಸಂಬಂಧ ಅರ್ಜಿ ಸಲ್ಲಿಸುವಂತೆ ಸುಪ್ರೀಂಕೋರ್ಟ್​ ಅತೀಕ್​ ಅಹಮ್ಮದ್​ಗೆ ಹೇಳಿತ್ತು.

ಭದ್ರತೆ ಒದಗಿಸುವಂತೆ ಕೇಂದ್ರಕ್ಕೆ ಸೂಚನೆ ನೀಡುವಂತೆ ಕೋರಿಕೆ: ಉತ್ತರ ಪ್ರದೇಶ ರಾಜ್ಯದ ಅಧಿಕಾರಿಗಳಿಂದ ತನ್ನ ಜೀವಕ್ಕೆ ತಕ್ಷಣದ ಬೆದರಿಕೆ ಎದುರಾಗಿದೆ ಎಂದು ಅತೀಕ್ ಹೇಳಿಕೊಂಡಿದ್ದು, ತನ್ನ ಮತ್ತು ತನ್ನ ಕುಟುಂಬದ ಸುರಕ್ಷತೆ ಮತ್ತು ಭದ್ರತೆ ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡುವಂತೆ ನ್ಯಾಯಾಲಯವನ್ನು ಒತ್ತಾಯಿಸಿದ್ದರು. ಅತೀಕ್​ ಹೀಗೆ ಕೇಳಿಕೊಂಡ ಸ್ಪಲ್ಪ ದಿನದಲ್ಲೇ ಹತ್ಯೆಗೀಡಾಗಿದ್ದಾರೆ.

ಅತೀಕ್ ಅವರ ಇತರ ಪುತ್ರರಲ್ಲಿ ಹಿರಿಯ ಮಗ ಉಮರ್ ಲಕ್ನೋ ಜೈಲಿನಲ್ಲಿದ್ದರೆ, ಎರಡನೇ ಮಗ ಅಲಿ ಪ್ರತ್ಯೇಕ ಪ್ರಕರಣಗಳಲ್ಲಿ ನೈನಿ ಸೆಂಟ್ರಲ್ ಜೈಲಿನಲ್ಲಿದ್ದಾನೆ. ನಾಲ್ಕನೇ ಮಗ ಅಹ್ಜಾಮ್ ಮತ್ತು ಕಿರಿಯ ಮಗ ಅಬಾನ್ ಪ್ರಯಾಗರಾಜ್‌ನಲ್ಲಿರುವ ಬಾಲಾಪರಾಧಿಗಳ ಸೆಲ್​​ನಲ್ಲಿದ್ದಾರೆ.

ಎಲ್ಲಡೆ ಬಿಗಿ ಬಂದೋಬಸ್ತ್: ರಾಜ್ಯಾದ್ಯಂತ ಬಿಗಿ ಬಂದೋಬಸ್ತ್​ ಮಾಡಲಾಗಿದೆ. ಲಖನೌ ಸೇರಿದಂತೆ ಸೂಕ್ಷ್ಮ ನಗರಗಳಲ್ಲಿ ನಿಷೇಧಾಜ್ಞೆ ವಿಧಿಸಲಾಗಿದೆ. ಹಲವು ಕಡೆ ಉತ್ತರಪ್ರದೇಶ ಪೊಲೀಸರು ಮಾರ್ಚ್​ ಫಾಸ್ಟ್​ ನಡೆಸಿ, ಶಾಂತಿ ಕಾಪಾಡಲು ಮನವಿ ಮಾಡಿದ್ದಾರೆ.

  • #WATCH | Atiq Ahmed, his brother Ashraf Ahmed were brought for medical & while giving media byte, three people came as media persons and shot at them where both of them died. Three people have been arrested, they are being questioned. A journalist was also injured as he fell down… pic.twitter.com/qJcwuXH0Gq

    — ANI (@ANI) April 15, 2023 " class="align-text-top noRightClick twitterSection" data=" ">

ಮೂವರ ಬಂಧನ: ಗ್ಯಾಂಗಸ್ಟರ್​ಗಳ ಹತ್ಯೆಗೆ ಸಂಬಂಧಿಸಿದಂತೆ ಮೂವರನ್ನುಉತ್ತರಪ್ರದೇಶ ಪೊಲೀಸರು ಬಂಧಿಸಿದ್ದಾರೆ.ಈ ಸಂಬಂಧ ಒಬ್ಬ ಪತ್ರಕರ್ತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ,

ಈ ಹತ್ಯೆಯನ್ನು ಇದೀಗ ರಾಜಕೀಯ ಬಿರುಗಾಳಿ ಎಬ್ಬಿಸಿದೆ. ಈ ಘಟನೆಯನ್ನು ಕಾಂಗ್ರೆಸ್​ ಖಂಡಿಸಿದೆ.

ಇದನ್ನೂ ಓದಿ: ಎನ್​ಕೌಂಟರ್​ನಲ್ಲಿ ಗ್ಯಾಂಗ್​ಸ್ಟರ್ ಅತೀಕ್ ಅಹ್ಮದ್ ಪುತ್ರ ಅಸದ್ ಹತ

Last Updated : Apr 16, 2023, 1:44 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.