ETV Bharat / bharat

ಎನ್​ಕೌಂಟರ್​ನಲ್ಲಿ ಗ್ಯಾಂಗ್​ಸ್ಟರ್ ಅತೀಕ್ ಅಹ್ಮದ್ ಪುತ್ರ ಅಸದ್ ಹತ

author img

By

Published : Apr 13, 2023, 1:45 PM IST

Updated : Apr 13, 2023, 2:01 PM IST

ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದ ಎನ್​ಕೌಂಟರ್​ನಲ್ಲಿ ಗ್ಯಾಂಗ್​ಸ್ಟರ್ ಅತೀಕ್ ಅಹ್ಮದ್ ಪುತ್ರ ಅಸದ್ ಸಾವನ್ನಪ್ಪಿದ್ದಾರೆ.

mafia-atiq-ahamad-son-asad-encounter-in-jhansi-by-up-stf
ಎನ್​ಕೌಂಟರ್​ನಲ್ಲಿ ಗ್ಯಾಂಗ್​ಸ್ಟರ್ ಅತೀಕ್ ಅಹ್ಮದ್ ಪುತ್ರ ಅಸದ್ ಹತ

ಲಖನೌ (ಉತ್ತರ ಪ್ರದೇಶ): ರಾಜಕಾರಣಿಯಾಗಿ ಬದಲಾಗಿರುವ ಗ್ಯಾಂಗ್​ಸ್ಟರ್ ಅತೀಕ್ ಅಹ್ಮದ್ ಪುತ್ರ ಅಸದ್ ಸೇರಿ ಇಬ್ಬರು ಪೊಲೀಸ್​ ಎನ್​ಕೌಂಟರ್​ನಲ್ಲಿ ಹತರಾಗಿದ್ದಾರೆ. ಝಾನ್ಸಿಯಲ್ಲಿ ಈ ಎನ್​ಕೌಂಟರ್ ನಡೆದಿದ್ದು, ಅತ್ಯಾಧುನಿಕ ವಿದೇಶಿ ನಿರ್ಮಿತ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಯಾಗ್‌ರಾಜ್‌ನ ವಕೀಲ ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಅಸದ್ ಮತ್ತು ಶೂಟರ್​ ಗುಲಾಮ್‌ ಎಂಬುವವರು ಪೊಲೀಸರಿಗೆ ಬೇಕಾಗಿದ್ದರು. ಅಲ್ಲದೇ, ಈ ಇಬ್ಬರ ಬಗ್ಗೆ ಸುಳಿವು ನೀಡಿದವರಿಗೆ ತಲಾ ಐದು ಲಕ್ಷ ರೂಪಾಯಿ ಬಹುಮಾನವನ್ನು ಪೊಲೀಸರು ಘೋಷಿಸಿದ್ದರು. ಇಂದು ಡಿವೈಎಸ್ಪಿ ನಾವೆಂದು ನೇತೃತ್ವದ ಉತ್ತರ ಪ್ರದೇಶ ವಿಶೇಷ ಕಾರ್ಯಪಡೆ (ಯುಪಿಎಸ್​ಟಿ​ಎಫ್) ತಂಡದೊಂದಿಗೆ ನಡೆದ ಎನ್​ಕೌಂಟರ್​ನಲ್ಲಿ ಇಬ್ಬರೂ ಸಹ ಹತರಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

  • Asad, son of mafia-turned-politician Atiq Ahmed and Ghulam S/o Maksudan, both wanted in Umesh Pal murder case of Prayagraj and carrying a reward of Rupees five lakhs each; killed in encounter with the UPSTF team led by DySP Navendu and DySP Vimal at Jhansi. Sophisticated foreign… pic.twitter.com/dAIS6iMM3G

    — ANI (@ANI) April 13, 2023 " class="align-text-top noRightClick twitterSection" data=" ">

ಫೆಬ್ರವರಿ 24ರಂದು ಧೂಮಂಗಂಜ್‌ನಲ್ಲಿ ಉಮೇಶ್ ಪಾಲ್‌ ಮೇಲೆ ಅಸಾದ್ ಗುಂಡಿನ ದಾಳಿ ನಡೆಸುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿತ್ತು. ಇಂದು ಅಸದ್ ಮತ್ತು ಶೂಟರ್​ ಗುಲಾಮ್‌ ಇಬ್ಬರಿಗೂ ಶರಣಾಗುವಂತೆ ಪೊಲೀಸ್ ತಂಡ ಸೂಚಿಸಿತ್ತು. ಆದರೆ, ಪೊಲೀಸರ ಮೇಲೆ ಆರೋಪಿಗಳು ಗುಂಡು ಹಾರಿಸಿದರು. ಇದರಿಂದ ನಮ್ಮ ಪೊಲೀಸ್​ ತಂಡವು ಪ್ರತಿದಾಳಿ ನಡೆಸಬೇಕಾಯಿತು ಎಂದು ವಿಶೇಷ ಕಾರ್ಯಪಡೆ ಎಡಿಜಿ ಅಮಿತಾಭ್ ಯಶ್ ತಿಳಿಸಿದ್ದಾರೆ.

ಮತ್ತೊಂದೆಡೆ, ಇದೇ ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಅತೀಕ್ ಅಹ್ಮದ್ ಮತ್ತು ಅವರ ಸಹೋದರ ಅಶ್ರಫ್​ನನ್ನು ಇಂದು ಬೆಳಗ್ಗೆ ಪ್ರಯಾಗರಾಜ್‌ನಲ್ಲಿರುವ ಸಿಜೆಎಂ ನ್ಯಾಯಾಲಯಕ್ಕೆ ಪೊಲೀಸರು ಕರೆತಂದಿದ್ದಾರೆ. ತನ್ನ ಮಗನ ಎನ್‌ಕೌಂಟರ್ ಬಗ್ಗೆ ತಿಳಿಸಿದಾಗ ಅತೀಕ್ ಅಹ್ಮದ್ ಕಣ್ಣೀರು ಹಾಕಿದರು ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ.

ಏನಿದು ಉಮೇಶ್ ಪಾಲ್‌ ಕೇಸ್​ ?: 2005ರ ಜನವರಿ 25ರಂದು ಬಿಎಸ್‌ಪಿ ಶಾಸಕ ರಾಜು ಪಾಲ್‌ ಹತ್ಯೆ ನಡೆದಿತ್ತು. ಈ ಕೊಲೆ ಪ್ರಕರಣದ ಪ್ರತ್ಯಕ್ಷದರ್ಶಿ ಮತ್ತು ಪ್ರಮುಖ ಸಾಕ್ಷಿ ವಕೀಲ ಉಮೇಶ್​ ಪಾಲ್ ಆಗಿದ್ದರು. 2023ರ ಫೆಬ್ರುವರಿ​ 24ರಂದು ಉಮೇಶ್​ ಪಾಲ್ ಅವರನ್ನೂ ಗುಂಡು ಹಾರಿಸಿ ಕೊಲೆ ಮಾಡಲಾಗಿತ್ತು.

ಆದರೆ, ಇದಕ್ಕೂ ಮೊದಲು ಎಂದರೆ 2005-06 ಸಾಲಿನಲ್ಲೇ ಪ್ರಕರಣದಿಂದ ಹಿಂದೆ ಸರಿಯುವಂತೆ ಉಮೇಶ್​ ಪಾಲ್​ಗೆ ಗ್ಯಾಂಗ್​ಸ್ಟರ್​​ ಅತೀಕ್ ಅಹ್ಮದ್​ ಬೆದರಿಕೆಯಾಗಿದ್ದ. ಈ ವೇಳೆ ಇದಕ್ಕೊಪ್ಪದ ಕಾರಣಕ್ಕೆ ಉಮೇಶ್​ ಪಾಲ್​​ರನ್ನು 2006ರ ಫೆಬ್ರವರಿ 28ರಂದು ಅಪಹರಣ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಇದೇ ಮಾರ್ಚ್​ 28ರಂದು ಅತೀಕ್​ ಅಹ್ಮದ್​ ಸೇರಿದಂತೆ ಮೂವರಿಗೆ ಪ್ರಯಾಗ್‌ರಾಜ್‌ ಕೋರ್ಟ್​ ಜೀವಾವಧಿ ಶಿಕ್ಷೆ ಪ್ರಕಟಿಸಿತ್ತು.

ಇನ್ನು, ಅತೀಕ್ ಅಹ್ಮದ್​ ವಿರುದ್ಧ ಒಟ್ಟಾರೆ 101 ಪ್ರಕರಣಗಳು ದಾಖಲಾಗಿವೆ. ಆತನ ಸಹೋದರ ಅಶ್ರಫ್ ಕೂಡ ವಿರುದ್ಧ 50ಕ್ಕೂ ಹೆಚ್ಚು ಪ್ರಕರಣಗಳು ಇವೆ. ಅತೀಕ್​ನ ಪತ್ನಿ ಶೈಸ್ತಾ ಪರ್ವೀನ್​ ಮತ್ತು ಮಕ್ಕಳ ಮೇಲೂ ಪೊಲೀಸ್​ ಪ್ರಕರಣಗಳು ದಾಖಲಾಗಿವೆ. ಆದರೆ, ಇಲ್ಲಿಯವರೆಗೆ ಅತೀಕ್ ಮತ್ತು ಈತನ ಸಹೋದರರಿಗೆ ಯಾವುದೇ ಪ್ರಕರಣದಲ್ಲಿ ಶಿಕ್ಷೆಯಾಗಿರಲಿಲ್ಲ. ಇದೇ ಮೊದಲ ಬಾರಿಗೆ ಉಮೇಶ್​ ಪಾಲ್ ಅಪಹರಣ ಪ್ರಕರಣದಲ್ಲಿ ಅತೀಕ್​ ಅಹ್ಮದ್​ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾರೆ.

ಇದನ್ನೂ ಓದಿ: 101 ಕೇಸ್​ ಎದುರಿಸುತ್ತಿರುವ ಮಾಫಿಯಾ ಡಾನ್​ ಅತೀಕ್​ ಅಹ್ಮದ್​: ಕಿಡ್ನಾಪ್​ ಕೇಸ್​ನಲ್ಲಿ ಜೀವಾವಧಿ ಶಿಕ್ಷೆ

Last Updated : Apr 13, 2023, 2:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.