ETV Bharat / bharat

ಸುಕ್ಮಾ ನಕ್ಸಲ್‌ ಎನ್​ಕೌಂಟರ್​: 9 ಯೋಧರು ಹುತಾತ್ಮ, 21 ಮಂದಿ ನಾಪತ್ತೆ

author img

By

Published : Apr 4, 2021, 10:11 AM IST

Updated : Apr 4, 2021, 12:02 PM IST

Sukma encounter
ಜವಾನನ ಪಾರ್ಥೀವ ಶರೀರ

ಛತ್ತೀಸ್‌ಗಢದ ಟರ್ರೆಮ್ ಅರಣ್ಯ ಪ್ರದೇಶದಲ್ಲಿ ನಡೆದ ಸೇನೆ ಮತ್ತು ನಕ್ಸಲರ ನಡುವಿನ ಕಾಳಗದಲ್ಲಿ ಮೃತರಾಗಿದ್ದ 9 ಯೋಧರ ಮೃತದೇಹಗಳ ಪೈಕಿ ಓರ್ವ ಜವಾನನ ಪಾರ್ಥಿವ ಶರೀರವನ್ನು ಜಗದಾಲ್​ಪುರಕ್ಕೆ ಕರೆತರಲಾಗಿದೆ. ಇನ್ನುಳಿದಂತೆ ಕಾರ್ಯಾಚರಣೆಯಲ್ಲಿ ಇನ್ನೂ 21 ಮಂದಿ ಯೋಧರು ನಾಪತ್ತೆಯಾಗಿದ್ದು ಶೋಧ ಕಾರ್ಯ ಭರದಿಂದ ಸಾಗಿದೆ.

ಸುಕ್ಮಾ(ಛತ್ತೀಸ್​ಗಢ): ಇಲ್ಲಿನ ಟರ್ರೆಮ್ ಅರಣ್ಯ ಪ್ರದೇಶದಲ್ಲಿ ನಕ್ಸಲ್​ ವಿರೋಧಿ ಕಾರ್ಯಾಚರಣೆಗಾಗಿ ಭದ್ರತಾ ಪಡೆ ತೆರಳಿದ್ದ ಸಂದರ್ಭದಲ್ಲಿ ಭಾರಿ ಗುಂಡಿನ ಚಕಮಕಿ ನಡೆದಿದೆ.

ಜಿಲ್ಲಾ ರಿಸರ್ವ್ ಗಾರ್ಡ್ (ಡಿಆರ್‌ಜಿ) ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) 9 ಮಂದಿ ಜವಾನರು ಸಂಘರ್ಷದಲ್ಲಿ ಹುತಾತ್ಮರಾಗಿದ್ದಾರೆ. ಇನ್ನುಳಿದಂತೆ 31ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಕಾರ್ಯಾಚರಣೆ ವೇಳೆ 21 ಮಂದಿ ಯೋಧರು ನಾಪತ್ತೆಯಾಗಿದ್ದಾರೆ.

ಶನಿವಾರ ಬೆಳಗ್ಗೆಯಿಂದಲೇ ಭದ್ರತಾ ಸಿಬ್ಬಂದಿ ಹಾಗೂ ನಕ್ಸಲರ ನಡುವೆ ಎನ್​ಕೌಂಟರ್​ ನಡೆದಿತ್ತು. ಇಲ್ಲಿಯವರೆಗೆ 9 ಮಂದಿ ನಕ್ಸಲರನ್ನೂ ಹೊಡೆದುರುಳಿಸಲಾಗಿದೆ. ಜೊತೆಗೆ ಕಾರ್ಯಾಚರಣೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • Chhattisgarh encounter: CRPF Director General Kuldiep Singh reached Chhattisgarh today morning to look after operational work and take stock of the situation. Out of 21 missing security personnel, 7 are from CRPF.

    — ANI (@ANI) April 4, 2021 " class="align-text-top noRightClick twitterSection" data=" ">

ಘಟನೆಯಲ್ಲಿ ಹುತಾತ್ಮರಾದ ಓರ್ವ ಯೋಧನ ಪಾರ್ಥಿವ ಶರೀರವನ್ನು ಜಗದಾಲ್​ಪುರಕ್ಕೆ ಕರೆತರಲಾಗಿದೆ.

ಇದನ್ನೂ ಓದಿ: ಎನ್​ಕೌಂಟರ್​ನಲ್ಲಿ 9 ಮಂದಿ ನಕ್ಸಲರ ಬೇಟೆ: ಐವರು ಯೋಧರು ಹುತಾತ್ಮ

ಇದನ್ನೂ ಓದಿ: ಬೇಸಿಗೆ ಸಮಯದಲ್ಲೇ ಹೆಚ್ಚಾಗಿ ನಡೆಯುತ್ತವೆ ನಕ್ಸಲರ ದಾಳಿ

ಸದ್ಯ ಗಾಯಗೊಂಡಿದ್ದ ಯೋಧರು ಸೇರಿದಂತೆ 31 ಮಂದಿಯನ್ನು ಬಿಜಾಪುರ, ರಾಯ್ಪುರ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಛತ್ತೀಸ್​ಗಢ ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.

Last Updated :Apr 4, 2021, 12:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.