ETV Bharat / bharat

ಕೊರೊನಾ ಭೀತಿ.. ಭಾರತ ಸೇರಿ ಎಲ್ಲ ಅಂತಾರಾಷ್ಟ್ರೀಯ ವಿಮಾನಯಾನ ಸ್ಥಗಿತಗೊಳಿಸಿದ ಬಾಂಗ್ಲಾದೇಶ

author img

By

Published : Apr 13, 2021, 11:47 AM IST

ban international flights
ಅಂತಾರಾಷ್ಟ್ರೀಯ ವಿಮಾನಯಾನ ಸ್ಥಗಿತ

ಬಾಂಗ್ಲಾದೇಶ ಸರ್ಕಾರವು ಕೊರೊನಾ ಮುಂಜಾಗ್ರತಾ ಕ್ರಮವಾಗಿ ಭಾರತ ಸೇರಿದಂತೆ ಅಂತಾರಾಷ್ಟ್ರೀಯ ವಿಮಾನಯಾನವನ್ನು ಸ್ಥಗಿತಗೊಳಿಸಿದೆ.

ನವದೆಹಲಿ: ಕೊರೊನಾ ಪ್ರಕರಣ ಜಗತ್ತಿನಲ್ಲಿ ಮತ್ತೆ ಏರಿಕೆಯಾಗುತ್ತಿದ್ದು, ಭಾರತ ಸೇರಿದಂತೆ ಕೆಲ ದೇಶಗಳಲ್ಲಿ ಹೆಚ್ಚಿನ ಭೀತಿ ಸೃಷ್ಟಿಸಿದೆ. ಬಾಂಗ್ಲಾದೇಶ ಸರ್ಕಾರವು ಕೊರೊನಾ ಮುಂಜಾಗ್ರತಾ ಕ್ರಮದ ಸಲುವಾಗಿ ಭಾರತ ಸೇರಿದಂತೆ ಅಂತಾರಾಷ್ಟ್ರೀಯ ವಿಮಾನಯಾನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ಏಪ್ರಿಲ್ 14 ರಿಂದ ಏಪ್ರಿಲ್ 20 ರವರೆಗೆ ಬಾಂಗ್ಲಾದೇಶಕ್ಕೆ ಪ್ರಯಾಣಿಸುವ ಮತ್ತು ಅಲ್ಲಿಂದ ಹೊರ ಹೋಗುವ ಎಲ್ಲಾ ಅಂತಾರಾಷ್ಟ್ರೀಯ ವಿಮಾನಗಳ ನಿಷೇಧ ಘೋಷಿಸಿದೆ.

ಮುಂದಿನ ಏಳು ದಿನಗಳವರೆಗೆ ದೇಶದಲ್ಲಿ ತುರ್ತು ಮತ್ತು ಅಗತ್ಯ ಸೇವೆ ಕಲ್ಪಿಸುವ ವಿಮಾನಗಳನ್ನು ಮಾತ್ರ ಅನುಮತಿಸಲಾಗಿದೆ ಎಂದು ಬಾಂಗ್ಲಾದೇಶ ಸ್ಪಷ್ಟಪಡಿಸಿದೆ.

ಈ ಹಿಂದೆ ಸೌದಿ ಅರೇಬಿಯಾ (ಭಾರತ ಸೇರಿ 20 ದೇಶಗಳು) ಮತ್ತು ನ್ಯೂಜಿಲ್ಯಾಂಡ್​ ದೇಶಗಳು ಭಾರತದಿಂದ ಪ್ರಯಾಣಿಸುವ ಮತ್ತು ತೆರಳುವ ವಿಮಾನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.