ETV Bharat / bharat

ಮತದಾನಕ್ಕೆ ಸೈಕಲ್​ ರಿಕ್ಷಾದಲ್ಲಿ ಪತ್ನಿ, ವಿಕಲಚೇತನ ಮಹಿಳೆ ಕೂರಿಸಿ ತಳ್ಳುತ್ತಾ ಬಂದ ವೃದ್ಧ

author img

By

Published : Mar 7, 2022, 12:39 PM IST

Updated : Mar 7, 2022, 4:41 PM IST

elderly couple
elderly couple

ವೃದ್ಧ ತನ್ನ ವಯಸ್ಸಾದ ಪತ್ನಿ ಹಾಗೂ ಮತ್ತೋರ್ವ ವಿಕಲಚೇತನ ಮಹಿಳೆಯನ್ನು ಸೈಕಲ್​ ರಿಕ್ಷಾದಲ್ಲಿ ಕೂರಿಸಿಕೊಂಡು ತಳ್ಳುತ್ತಾ ಬಂದಿರುವ ಎಲ್ಲರ ಗಮನ ಸೆಳೆಯುವಂತೆ ಮಾಡಿದ್ದಾರೆ. ಮೇಲಾಗಿ, ಈ ಮೂಲಕ ಮತದಾನದ ಮಹತ್ವವನ್ನೂ ವಯೋವೃದ್ಧರು ಸಾರಿದ್ದಾರೆ.

ಅಜಂಗಢ್​​(ಉತ್ತರಪ್ರದೇಶ): ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಗೆ ಸೋಮವಾರ ಏಳನೇ ಮತ್ತು ಅಂತಿಮ ಹಂತದ ಮತದಾನ ಭರದಿಂದ ಸಾಗಿದೆ. ಯುವಕರು, ಮಹಿಳೆಯರಿಂದ ಹಿಡಿದು ಮತದಾರರು ಸಾಲುಗಟ್ಟಿ ಮತದಾನ ಮಾಡುತ್ತಿದ್ದಾರೆ. ಹಾಗೆ, ವಯೋವೃದ್ಧ ಸಹ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.

ಮತದಾನಕ್ಕೆ ಸೈಕಲ್​ ರಿಕ್ಷಾದಲ್ಲಿ ಪತ್ನಿ, ವಿಕಲಚೇತನ ಮಹಿಳೆ ಕೂರಿಸಿ ತಳ್ಳುತ್ತಾ ಬಂದ ವೃದ್ಧ

ಹೌದು, ಅಜ್ಜ, ಅಜ್ಜಿಯರು ಕೂಡ ಉತ್ಸಾಹದಿಂದ ಮತದಾನ ಮಾಡುತ್ತಿರುವುದು ಅಜಂಗಢ್​ನಲ್ಲಿ ಕಂಡು ಬಂದಿದೆ. ಅದರಲ್ಲೂ ಓರ್ವ ವೃದ್ಧ ತನ್ನ ವಯಸ್ಸಾದ ಪತ್ನಿ ಹಾಗೂ ಮತ್ತೋರ್ವ ವಿಕಲಚೇತನ ಮಹಿಳೆಯನ್ನು ಸೈಕಲ್​ ರಿಕ್ಷಾದಲ್ಲಿ ಕೂರಿಸಿಕೊಂಡು ತಳ್ಳುತ್ತಾ ಬಂದಿರುವ ಎಲ್ಲರ ಗಮನ ಸೆಳೆಯುವಂತೆ ಮಾಡಿದ್ದಾರೆ. ಮೇಲಾಗಿ, ಈ ಮೂಲಕ ಮತದಾನದ ಮಹತ್ವವನ್ನೂ ವಯೋವೃದ್ಧರು ಸಾರಿದ್ದಾರೆ.

ನನಗೆ ಬೆನ್ನ ಮೂಳೆಯ ಸಮಸ್ಯೆ ಇದೆ. ನನ್ನ ಪತ್ನಿಗೆ ಕಾಲು ಮೂಳೆ ಮುರಿದಿದೆ. ಮತ್ತೊಬ್ಬ ಮಹಿಳೆ ವಿಕಲಚೇತನ ಇದ್ದಾಳೆ. ಹೀಗಾಗಿ ಅವರನ್ನು ಸೈಕಲ್​ ರಿಕ್ಷಾದಲ್ಲಿ ಕೂಡಿಸಿ ತಳ್ಳಿಕೊಂಡು ಮತದಾನಕ್ಕೆ ಬಂದಿದ್ದೇನೆ ಎಂದು ಮತದಾನಕ್ಕೂ ಮುನ್ನ ವೃದ್ಧ ಹೇಳಿದ್ದಾರೆ. ಜತೆಗೆ ನಾವು ಯಾವುದನ್ನು ನಿರೀಕ್ಷಿಸುತ್ತಿಲ್ಲ. ಆದರೆ, ನಾನು ಗುಣಮುಖರಾಗಲು ಸರ್ಕಾರವೇನಾದರೂ 500, 1,000 ರೂ. ನೆರವು ನೀಡಬಹುದೇ ಎಂದು ಆ ವೃದ್ಧ ಕೇಳಿದ್ದಾರೆ.

ಇದೇ ವೇಳೆ ಮತದಾನದ ನಮ್ಮ ಹಕ್ಕನ್ನು ಕಳೆದುಕೊಳ್ಳಲು ನಾವು ಬಯಸುವುದಿಲ್ಲ. ಹೀಗಾಗಿ ತಳ್ಳುತ್ತಾ ಈ ಸೈಕಲ್​ನಲ್ಲಿ ಬಂದಿದ್ದೇವೆ ಎಂದೂ ವೃದ್ಧ ಹೇಳಿದ್ದಾರೆ.

ಇದನ್ನೂ ಓದಿ: 'ನಮಾಮಿ ಗಂಗೆ'ಗೆ ಇದುವರೆಗೆ ಎಷ್ಟು ಕೋಟಿ ಖರ್ಚು ಮಾಡಲಾಗಿದೆ ಗೊತ್ತಾ?

ಇನ್ನು, ಅಂತಿಮ ಹಂತದ ಚುನಾವಣೆಯಲ್ಲಿ ಬೆಳಗ್ಗೆ 11 ಗಂಟೆಯವರೆಗೆ ಶೇ.21.55ರಷ್ಟು ಮತದಾನವಾಗಿದೆ. ಪ್ರಧಾನಿ ಮೋದಿ ಪ್ರತಿನಿಧಿಸುವ ವಾರಾಣಸಿ ಸೇರಿ ಅಜಂಗಢ, ಮೌ, ಗಾಜಿಪುರ, ಜಾನ್‌ಪುರ್, ಮಿರ್ಜಾಪುರ, ಗಾಜಿಪುರ, ಚಂದೌಲಿ ಮತ್ತು ಸೋನ್‌ಭದ್ರ ಜಿಲ್ಲೆಗಳ 54 ಸ್ಥಾನಗಳಿಗಾಗಿ ಮತದಾನ ನಡೆಯುತ್ತಿದೆ.

Last Updated :Mar 7, 2022, 4:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.