ETV Bharat / bharat

ಗಂಡ - ಹೆಂಡ್ತಿ ನಡುವೆ ಜಗಳ: ಮನೆ ಬಿಟ್ಟು ಹೋದ ಹೆತ್ತಮ್ಮನ ಹುಡುಕಲು ರಾತ್ರಿಯಿಡೀ ಸೈಕಲ್​ ತುಳಿದ ಮಗ!

author img

By

Published : Aug 10, 2021, 5:20 PM IST

Updated : Aug 10, 2021, 5:45 PM IST

eight-year-old son
eight-year-old son

ಮನೆಬಿಟ್ಟು ತೆರಳಿದ್ದ ತಾಯಿಯ ಭೇಟಿಗೋಸ್ಕರ 8 ವರ್ಷದ ಮಗನೊಬ್ಬ ಸೈಕಲ್​ ಏರಿ ತೆರಳಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ವಿಲ್ಲುಪುರಂ(ತಮಿಳುನಾಡು): ಅಪ್ಪ- ಅಮ್ಮನ ಜಗಳದ ಮಧ್ಯೆ ಕೂಸು ಬಡವಾಯ್ತು ಎನ್ನುವ ಗಾದೆ ಮಾತು ಮೇಲಿಂದ ಮೇಲೆ ಸಾಬೀತು ಆಗುತ್ತಿರುತ್ತದೆ. ಸದ್ಯ ಇಂತಹದೊಂದು ಘಟನೆ ತಮಿಳುನಾಡಿನ ವಿಲ್ಲುಪುರಂನಲ್ಲಿ ನಡೆದಿದೆ.

ಗ್ರಾಮ ಲೆಕ್ಕಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ತಿಂಡಿವನಂನ ರಘುರಾಮನ್​ ಹಾಗೂ ಆತನ ಪತ್ನಿ ರಾಜೇಶ್ವರಿ ನಡುವೆ ಕಳೆದ ತಿಂಗಳ ಜಗಳವಾಗಿತ್ತು. ಇದರಿಂದ ಕೋಪಗೊಂಡಿರುವ ರಾಜೇಶ್ವರಿ ಗಂಡನ ಮನೆ ಬಿಟ್ಟು ತವರು ಮನೆ ಕಲ್ಲಕುರಿಚಿಗೆ ತೆರಳಿದ್ದಳು. ಸುಮಾರು 20 ದಿನ ಕಳೆದರೂ ಆಕೆ ವಾಪಸ್​ ಗಂಡನ ಮನೆಗೆ ಬಂದಿರಲಿಲ್ಲ. ಹೀಗಾಗಿ, ಕಿರಿಯ ಮಗ ಶಬರಿನಾಥ್​​ ತಾಯಿ ಭೇಟಿ ಮಾಡುವ ನಿರ್ಧಾರ ಮಾಡಿದ್ದಾನೆ. ಸುಮಾರು 92 ಕಿಲೋ ಮೀಟರ್​ ದೂರ ಇರುವ ಕಲ್ಲಕುರಿಚಿಗೆ ಸೈಕಲ್​ ಮೇಲೆ ತೆರಳಲು ಮುಂದಾಗಿದ್ದಾನೆ.

eight-year-old son
ಮಗುವಿನ ರಕ್ಷಣೆ ಮಾಡಿದ ಪೊಲೀಸರು

8 ವರ್ಷದ ಶಬರಿನಾಥ್ ಸ್ನೇಹಿತನ ಸೈಕಲ್ ಖರೀದಿ ಮಾಡಿ, ಸೋಮವಾರ ಮಧ್ಯರಾತ್ರಿ ಮನೆಯಿಂದ ಪ್ರಯಾಣ ಆರಂಭಿಸಿದ್ದಾನೆ. ​ಸುಮಾರು 14 ಕಿಲೋ ಮೀಟರ್​ ಹೋಗಿ, ವಿಲ್ಲುಪುರಂ - ನಾಗಪಟ್ಟಣಂ ರಾಷ್ಟ್ರೀಯ ಹೆದ್ದಾರಿಯಲ್ಲಿ ತೆರಳುತ್ತಿದ್ದಾಗ ಆತನನ್ನ ನೋಡಿರುವ ಪೊಲೀಸರು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿರಿ: ಕಲಾಪಕ್ಕೆ ಬಿಜೆಪಿ ಸಂಸದರ ಗೈರು, ಪ್ರಧಾನಿ ತೀವ್ರ ಅಸಮಾಧಾನ!

ಈ ವೇಳೆ ತಾಯಿ ಭೇಟಿಗಾಗಿ ತೆರಳುತ್ತಿರುವುದಾಗಿ ಹೇಳಿದ್ದಾನೆ. ತಕ್ಷಣವೇ ಪೊಲೀಸರು ಶಬರಿನಾಥನನ್ನ ಪೊಲೀಸ್​ ಠಾಣೆಗೆ ಕರೆದೊಯ್ದಿದ್ದಾರೆ. ಈ ವೇಳೆ, ವಿಚಾರಿಸಿದಾಗ ಸಂಪೂರ್ಣ ಮಾಹಿತಿ ಬಿಚ್ಚಿಟ್ಟಿದ್ದಾನೆ. ಪೊಲೀಸರು ಬಾಲಕನ ತಂದೆ ರಘುರಾಮನ್​ಗೆ​ ಮಾಹಿತಿ ನೀಡಿದ್ದಾರೆ. ತಕ್ಷಣವೇ ಆತ ಠಾಣೆಗೆ ಆಗಮಿಸಿದ್ದಾನೆ. ಇದರ ಬಗ್ಗೆ ತಾಯಿ ರಾಜೇಶ್ವರಿಗೂ ಮಾಹಿತಿ ನೀಡಲಾಗಿದೆ. ಇದರ ಫಲವಾಗಿ ಇಂದು ತಾಯಿಯನ್ನ ಭೇಟಿ ಮಾಡುವಲ್ಲಿ ಶಬರಿನಾಥ್​ ಯಶಸ್ವಿಯಾಗಿದ್ದಾನೆ.

Last Updated :Aug 10, 2021, 5:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.