ETV Bharat / bharat

ದೆಹಲಿಯ ಬಳಿಕ ಅಮೃತಸರದಲ್ಲೂ ಭೂಕಂಪನ; 4.1 ತೀವ್ರತೆ ದಾಖಲು

author img

By

Published : Nov 14, 2022, 6:46 AM IST

earthquake
ಅಮೃತಸರದಲ್ಲಿ ಕಂಪಿಸಿದ ಭೂಮಿ

ಇಂದು ಬೆಳಗಿನ ಜಾವ ಪಂಜಾಬ್‌ನ ಅಮೃತಸರದಲ್ಲಿ ಭೂಮಿ ಕಂಪಿಸಿತು. ರಿಕ್ಟರ್​ ಮಾಪಕದಲ್ಲಿ 4.1 ತೀವ್ರತೆ ದಾಖಲಾಗಿದೆ. ಯಾವುದೇ ಸಾವು, ನೋವಿನ ಬಗ್ಗೆ ವರದಿಯಾಗಿಲ್ಲ.

ಪಂಜಾಬ್‌: ಇಂದು ಮುಂಜಾನೆ 3.42 ರ ಸುಮಾರಿಗೆ ಪಂಜಾಬ್‌ನ ಅಮೃತಸರದ ಪಶ್ಚಿಮ-ವಾಯುವ್ಯಕ್ಕೆ 4.1 ತೀವ್ರತೆಯ ಭೂಕಂಪನದ ಅನುಭವವಾಗಿದೆ. ಆದ್ರೆ, ಯಾವುದೇ ಸಾವು, ನೋವು ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ. ಈ ಘಟನೆಗೆ ಒಂದು ದಿನ ಮುನ್ನ ದೆಹಲಿಯ ಸುತ್ತಮುತ್ತ ಭೂಮಿ ಕಂಪಿಸಿತ್ತು.

  • An earthquake of magnitude 4.1 occurred 145km west-northwest of Amritsar, Punjab, at around 3.42am, today. The depth of the earthquake was 120 km below the ground: National Center for Seismology pic.twitter.com/c565a76ndE

    — ANI (@ANI) November 14, 2022 " class="align-text-top noRightClick twitterSection" data=" ">

ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರದ ಮಾಹಿತಿ ಪ್ರಕಾರ, ಅಮೃತಸರದ ಪಶ್ಚಿಮ-ವಾಯುವ್ಯಕ್ಕೆ 145 ಕಿಮೀ ದೂರದಲ್ಲಿ 120 ಕಿಲೋಮೀಟರ್ ಆಳದಲ್ಲಿ ಭೂಮಿ ಕಂಪಿಸಿದೆ. ಸುಮಾರು 73.38 ಕಿಮೀ ದೂರದಲ್ಲಿ ಭೂಕಂಪನದ ಕೇಂದ್ರಬಿಂದು ಪತ್ತೆಯಾಗಿದೆ. ಕಂಪನದ ಅನುಭವವಾಗುತ್ತಿದ್ದಂತೆ ಬೆಚ್ಚಿಬಿದ್ದ ಜನತೆ ನಿದ್ದೆಯಿಂದ ಹೊರಗೆ ಓಡಿಬಂದು ರಸ್ತೆಯಲ್ಲಿ ನಿಂತಿದ್ದು, ಆತಂಕ ಮಾನೆಮಾಡಿತ್ತು.

ಇದನ್ನೂ ಓದಿ: ನೇಪಾಳದಲ್ಲಿ ಮತ್ತೆ 5.4, ಉತ್ತರಾಖಂಡದಲ್ಲಿ 3.4 ಪ್ರಬಲ ಭೂಕಂಪನ.. ದೆಹಲಿಗೂ ತಟ್ಟಿದ ಎಫೆಕ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.