ETV Bharat / bharat

ಮುಂಬೈ ತಾಜ್​​ ಹೋಟೆಲ್​​ಗೆ​​ ಹುಸಿ ಬಾಂಬ್ ಕರೆ.. ಕೆಲಕಾಲ ಆತಂಕ

author img

By

Published : Jun 26, 2021, 6:27 PM IST

ತಾಜ್ ಹೋಟೆಲ್​​
ತಾಜ್ ಹೋಟೆಲ್​​

ಹೋಟೆಲ್​ ಬಂದಿದ್ದ ಕರೆ ಸಂಬಂಧ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು, ಇದಾದ ಬಳಿಕ ತಾಜ್​ ಹೋಟೆಲ್​ ಬಳಿ ಬಿಗಿ ಭದ್ರತೆ ಒದಗಿಸಲಾಗಿತ್ತು. ಇದೀಗ ಪ್ರಾಥಮಿಕ ತನಿಖೆಯಲ್ಲಿ ಇದೊಂದು ಹುಸಿ ಕರೆ ಎಂಬುದು ತಿಳಿದು ಬಂದಿದೆ.

ಮುಂಬೈ: ಇಲ್ಲಿನ ಪ್ರಸಿದ್ಧ ತಾಜ್ ಹೋಟೆಲ್​​ಗೆ ಬಾಂಬ್ ಇಡಲಾಗಿದೆ ಎಂದು ಹೋಟೆಲ್​​ಗೆ ಬಂದಿದ್ದ ಅನಾಮಧೇಯ ಕರೆ ಕೆಲಹೊತ್ತು ಆತಂಕ ಸೃಷ್ಟಿಸಿತ್ತು. ಮುಂಬೈನ ಕೊಲಾಬಾ ಪ್ರದೇಶದಲ್ಲಿದ್ದ ತಾಜ್ ಹೋಟೆಲ್​​​ನಲ್ಲಿ ಬಾಂಬ್ ಇಡಲಾಗಿದೆ ಎಂದು ಹೋಟೆಲ್​​ನ ಕಚೇರಿಗೆ ದೂರವಾಣಿ ಕರೆ ಬಂದಿತ್ತು. ಆದರೆ, ಇದೊಂದು ಹುಸಿ ಬಾಂಬ್ ಕರೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಹೋಟೆಲ್​ ಬಂದಿದ್ದ ಕರೆ ಸಂಬಂಧ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು, ಇದಾದ ಬಳಿಕ ತಾಜ್​ ಹೋಟೆಲ್​ ಬಳಿ ಬಿಗಿ ಭದ್ರತೆ ಒದಗಿಸಲಾಗಿತ್ತು. ಇದೀಗ ಪ್ರಾಥಮಿಕ ತನಿಖೆಯಲ್ಲಿ ಇದೊಂದು ಹುಸಿ ಕರೆ ಎಂಬುದು ತಿಳಿದು ಬಂದಿದೆ. ಅಲ್ಲದೇ ಸ್ಥಳಕ್ಕೆ ಬಾಂಬ್ ಪತ್ತೆ ದಳ ಹಾಗೂ ಬಾಂಬ್ ನಿಷ್ಕ್ರಿಯ ದಳ ಸಹ ಆಗಮಿಸಿ ಬಾಂಬ್​ಗಾಗಿ ಶೋಧ ನಡೆಸಿತ್ತು. ಈ ವೇಳೆ ಹೋಟೆಲ್​​ನಲ್ಲಿ ಯಾವುದೇ ಬಾಂಬ್ ಪತ್ತೆಯಾಗಿರಲಿಲ್ಲ.

ಇದನ್ನೂ ಓದಿ: Video Viral : ಬ್ಯಾರಿಕೇಡ್​ಗೆ ಯಾಕೆ ಡಿಕ್ಕಿ ಹೊಡಿದ್ರಿ ಅಂದಿದ್ದಕ್ಕೆ ಪೊಲೀಸರ ಮೇಲೆಯೇ ಕೈ ಮಾಡೋದಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.