ETV Bharat / bharat

ದಡ್ಡರು ಮದುವೆಯಾಗ್ತಾರೆ, ವಿವೇಕಿಗಳು ಪ್ರೀತಿಯಲ್ಲೇ ಇರ್ತಾರೆ.. ಇದು ಆರ್​ಜಿವಿ ವೇದಾಂತ

author img

By

Published : Jan 19, 2022, 12:59 PM IST

marriage
ಆರ್​ಜಿವಿಯ ವೇದಾಂತ

ವಿವಾಹ ವಿಚ್ಛೇದನಗಳನ್ನು ಸಂಭ್ರಮದಿಂದ ಆಚರಿಸಬೇಕು. ಮದುವೆ ಎಂಬ ಅತೃಪ್ತಿ ಮತ್ತು ದುಃಖದ ಸಂಕೋಲೆಯನ್ನು ನಮ್ಮ ಪೂರ್ವಜರು ನಮ್ಮ ಮೇಲೆ ಬಿಟ್ಟು ಹೋಗಿದ್ದಾರೆ. ಮದುವೆ ಎಂಬುದು ಸಮಾಜದ ಮೇಲೆ ಹೇರಲಾದ ಅತ್ಯಂತ ಕೆಟ್ಟ ಪದ್ಧತಿಯಾಗಿದೆ ಎಂದು ಟೀಕಿಸಿದ್ದಾರೆ..

ಮುಂಬೈ (ಮಹಾರಾಷ್ಟ್ರ): 'ವಿವಾಹ ಬಂಧನ ಎಂಬುದು ಜೈಲಿದ್ದಂತೆ. ಅದು ನಮ್ಮನ್ನು ಬಹಳ ವೇಗವಾಗಿ ಕೊಲೆ ಮಾಡುತ್ತದೆ. ಮದುವೆಯಾಗುವ ಬದಲು ಪ್ರೀತಿಯಲ್ಲಿ ಮುಂದೆ ಸಾಗುವುದು ಸಂತೋಷದ ಒಳಗುಟ್ಟು..! ಇದು ಖ್ಯಾತ ನಿರ್ದೇಶಕ ರಾಮ್​ ಗೋಪಾಲ್​ ವರ್ಮಾರ ಮದುವೆ ಮತ್ತು ಪ್ರೀತಿ ಮಧ್ಯೆ ಇರುವ ವ್ಯತ್ಯಾಸದ ಹೇಳಿಕೆ.

  • Nothing murders love faster than marriage ..The secret of happiness is to keep loving as long as it remains and then move on instead of getting into the jail called marriage

    — Ram Gopal Varma (@RGVzoomin) January 18, 2022 " class="align-text-top noRightClick twitterSection" data=" ">

ಇತ್ತೀಚೆಗೆ ಸೆಲೆಬ್ರಿಟಿಗಳ ಮಧ್ಯೆ ವಿವಾಹ ವಿಚ್ಛೇದನ ಹೆಚ್ಚಾಗುತ್ತಿರುವುದನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಆರ್​ಜಿವಿ, ಯುವಕರು ಮದುವೆ ಮಾಡಿಕೊಳ್ಳಬೇಕೇ ಅಥವಾ ಬೇಡವೇ ಎಂಬುದಕ್ಕೆ ಸ್ಟಾರ್​ ದಂಪತಿಗಳ ವಿಚ್ಛೇದನ ಪ್ರಕರಣಗಳು ಮಾದರಿಯಾಗಿವೆ. ಮದುವೆಯಾಗಿ 'ಜೈಲು' ಸೇರುವ ಬದಲು, ಇಬ್ಬರು ಪರಸ್ಪರ ಪ್ರೀತಿಯಲ್ಲೇ ಜೀವನ ಸಾಗಿಸುವುದೇ ಸಂತೋಷದ ರಹಸ್ಯವಾಗಿದೆ ಎಂದು ಹೇಳಿದ್ದಾರೆ.

  • Love in a marriage lasts for lesser days than the days they celebrate it , which is 3 to 5 days

    — Ram Gopal Varma (@RGVzoomin) January 18, 2022 " class="align-text-top noRightClick twitterSection" data=" ">

ಮದುವೆಯಾದ ದಂಪತಿ ಪ್ರೀತಿಯಲ್ಲಿ ಕಾಣುವ ಸುಖದ ದಿನಗಳು ಹೆಚ್ಚೆಂದರೆ 4 ರಿಂದ 5 ದಿನ. ಆದರೆ, ಪ್ರೀತಿ ಮಾಡುವವರು ದಿನವೂ ಸುಖಿಸುತ್ತಾರೆ. ಅಲ್ಲದೇ, ಬುದ್ಧಿಹೀನರು ಮದುವೆಯಾದರೆ, ವಿವೇಕಿಗಳು ಬರೀ ಪ್ರೀತಿಸುತ್ತಾರೆ ಎಂದು ಬರೆದುಕೊಂಡಿದ್ದಾರೆ.

  • Only divorces should be celebrated with sangeet because of getting liberated and marriages should happen quietly in process of testing each other’s danger qualities

    — Ram Gopal Varma (@RGVzoomin) January 18, 2022 " class="align-text-top noRightClick twitterSection" data=" ">

ವಿವಾಹ ವಿಚ್ಛೇದನಗಳನ್ನು ಸಂಭ್ರಮದಿಂದ ಆಚರಿಸಬೇಕು. ಮದುವೆ ಎಂಬ ಅತೃಪ್ತಿ ಮತ್ತು ದುಃಖದ ಸಂಕೋಲೆಯನ್ನು ನಮ್ಮ ಪೂರ್ವಜರು ನಮ್ಮ ಮೇಲೆ ಬಿಟ್ಟು ಹೋಗಿದ್ದಾರೆ. ಮದುವೆ ಎಂಬುದು ಸಮಾಜದ ಮೇಲೆ ಹೇರಲಾದ ಅತ್ಯಂತ ಕೆಟ್ಟ ಪದ್ಧತಿಯಾಗಿದೆ ಎಂದು ಟೀಕಿಸಿದ್ದಾರೆ.

ತಮಿಳು ಖ್ಯಾತ ನಟ ಧನುಷ್​ ಮತ್ತು ರಜನಿಕಾಂತ್​ ಪುತ್ರಿ ಐಶ್ವರ್ಯಾ ಅವರು ವಿಚ್ಛೇದನ ಪಡೆಯುವ ಬಗ್ಗೆ ನಿರ್ಧರಿಸಿದ ಬೆನ್ನಲ್ಲೇ ನಿರ್ದೇಶಕ ರಾಮ್​ಗೋಪಾಲ್ ವರ್ಮಾ ಅವರು ಮದುವೆಯ ಬಗ್ಗೆ ಸರಣಿ ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ: ಗಣರಾಜ್ಯೋತ್ಸವದಂದು ತೆರೆ ಕಾಣಲು ಸಜ್ಜಾಗಿದೆ 'ಶೆಹಜಾದ್​'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.