ETV Bharat / bharat

ಸಂಸತ್​ನಲ್ಲಿ ಭದ್ರತಾ ಲೋಪ ಪ್ರಕರಣ: ಘಟನೆ ಬಗ್ಗೆ ಪ್ರಧಾನಿ ಮೌನ ಮುರಿಯುವಂತೆ ಚೌಧರಿ ಒತ್ತಾಯ

author img

By PTI

Published : Dec 18, 2023, 8:57 AM IST

Updated : Dec 18, 2023, 11:16 AM IST

ಸಂಸತ್​ ಭದ್ರತಾ ಲೋಪ ಕುರಿತಂತೆ ಪ್ರಧಾನಿ ಮೋದಿ ಮಾತನಾಡಬೇಕೆಂದು ಕಾಂಗ್ರೆಸ್​ ನಾಯಕ ಅಧೀರ್ ರಂಜನ್​ ಚೌಧರಿ ಆಗ್ರಹಿಸಿದ್ದಾರೆ. ಇದೇ ವೇಳೆ 13 ವಿರೋಧ ಪಕ್ಷದ ಸಂಸದರ ಅಮಾನತು ಹಿಂಪಡೆಯಬೇಕು ಎಂದು ಅಧೀರ್ ರಂಜನ್ ಚೌಧರಿ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರಿಗೆ ಒತ್ತಾಯಿಸಿದ್ದಾರೆ.

Adhir Ranjan Chowdhury
13 ವಿರೋಧ ಪಕ್ಷದ ಸಂಸದರ ಅಮಾನತು ಹಿಂಪಡೆಯುವಂತೆ ಅಧೀರ್ ರಂಜನ್ ಚೌಧರಿ ಒತ್ತಾಯ

ನವದೆಹಲಿ: ಇತ್ತೀಚಿಗೆ ಸಂಸತ್​ ಭವನದಲ್ಲಿ ನಡೆದ ಭದ್ರತಾ ಲೋಪ ಗಂಭೀರವಾದ ಪ್ರಕರಣ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಬೇಕು ಎಂದು ಲೋಕಸಭೆಯ ಕಾಂಗ್ರೆಸ್​ ನಾಯಕ ಅಧೀರ್​ ರಂಜನ್​ ಚೌಧರಿ ಆಗ್ರಹಿಸಿದ್ದಾರೆ.

ಪ್ರಧಾನಿ ಮೋದಿ ಅವರು ಕಲಾಪಕ್ಕೆ ಆಗಮಿಸಬೇಕು ಮತ್ತು ಈ ಗಂಭೀರ ಪ್ರಕರಣದ ಬಗ್ಗೆ ಮೌನ ಮುರಿಯಬೇಕು ಎಂದು ಚೌಧರಿ ಒತ್ತಾಯಿಸಿದ್ದಾರೆ. ದೇಶದಲ್ಲಿ ಯಾವುದೇ ಘಟನೆ ನಡೆದಾಗ ತಕ್ಷಣಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸುವ ಪ್ರಧಾನಿ ಮೋದಿ ಅವರು ಈ ಘಟನೆ ನಡೆದ ನಾಲ್ಕು ದಿನದ ನಂತರ ಎಕ್ಸ್​ ಪೋಸ್ಟ್​ನಲ್ಲಿ ಪ್ರತಿಕ್ರಿಯಿಸಿದ್ದರು ಎಂದು ಚೌಧರಿ ಹೇಳಿದ್ದಾರೆ.

ಅಮಾನತು ಆದೇಶ ಹಿಂಪಡೆಯುವಂತೆ ಒತ್ತಾಯ: 13 ವಿರೋಧ ಪಕ್ಷಗಳ ಸಂಸದ ಅಮಾನತು ರದ್ದುಗೊಳಿಸಬೇಕು ಎಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರಿಗೆ ಭಾನುವಾರ ಒತ್ತಾಯಿಸಿದ್ದಾರೆ. ಸಂಸತ್​ ಭದ್ರತಾ ಲೋಪ ಘಟನೆ ಹಿನ್ನೆಲೆಯಲ್ಲಿ ಅವರು ಕುರಿತು ಸರ್ಕಾರದಿಂದ ವಿವರಣೆ ನೀಡುವಂತೆ ಆಗ್ರಹಿಸಿ ಸ್ವೀಕರಿಗೆ ಪತ್ರ ಬರೆದಿದ್ದಾರೆ.

ಡಿಸೆಂಬರ್ 13 ರಂದು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಭಾರಿ ಭದ್ರತಾ ಲೋಪ ಸಂಭವಿಸಿತ್ತು. ಲೋಕಸಭೆ ಕಲಾಪ ನಡೆಯುತ್ತಿದ್ದ ವೇಳೆ ಇಬ್ಬರು ಯುವಕರು ವೀಕ್ಷಕರು ಕೂರುವ ಗ್ಯಾಲರಿಯಿಂದ ಸದನದೊಳಗೆ ಜಿಗಿದಿದ್ದರು. ಇದರಿಂದ ಲೋಕಸಭೆ ಕಲಾಪಕ್ಕೆ ತೀವ್ರ ಅಡ್ಡಿಯಾಯಿತು. ಕೂಡಲೇ ಆತನನ್ನು ವಶಕ್ಕೆ ಪಡೆಯಲಾಗಿದೆ. ದಿಢೀರ್​​ ಗ್ಯಾಲರಿಯಿಂದ ಜಿಗಿದ ಯುವಕರಿಬ್ಬರು ಸ್ಮೋಕ್​ ಕ್ರ್ಯಾಕರ್​ವೊಂದನ್ನು ಸ್ಪ್ರೇ ಮಾಡಿದ್ದರು. ಆಗ ಸದನದಲ್ಲಿದ್ದ ಕೇಂದ್ರ ಸಚಿವರು, ಸಂಸದರು ಆತಂಕದಿಂದ ಹೊರ ಬಂದಿದ್ದರು. ಇದೇ ವೇಳೆ ಹೊರಗಿನ ಗೇಟ್​ ಬಳಿಯೂ ಯುವತಿಯೊಬ್ಬಳು ಇದೇ ರೀತಿ ಬಣ್ಣವನ್ನು ಸ್ಪ್ರೇ ಮಾಡಿದ್ದಳು. ಸಂಸತ್ ಭವನದ ಮೇಲಿನ ದಾಳಿಯ ವರ್ಷಾಚರಣೆಯಂದೇ ಈ ಭದ್ರತಾ ಲೋಪವಾಗಿದ್ದು ಭಾರಿ ಆತಂಕಕ್ಕೆ ಕಾರಣವಾಗಿತ್ತು. ಸಂಸದರು, ಸದನದ ಶೂನ್ಯ ವೇಳೆಯಲ್ಲಿ ಈ ವಿಚಾರದ ಕುರಿತು ಧ್ವನಿ ಎತ್ತಿದ್ದರು.

ಡಿಸೆಂಬರ್ 13ರ ಭದ್ರತಾ ಲೋಪದ ಖಂಡಿಸಿ ಪ್ರತಿಭಟನೆ ನಡೆಸಿದ್ದ ವಿರೋಧ ಪಕ್ಷದ ಸದಸ್ಯರನ್ನು ಸ್ಪೀಕರ್​ ಅಮಾನತು​ ಮಾಡಿದ್ದರು. ''ಸದನದ ಪಾವಿತ್ರ್ಯತೆಯನ್ನು ಸಂಪೂರ್ಣವಾಗಿ ಎತ್ತಿಹಿಡಿಯಲು ಅವರನ್ನು ಅಮಾನತುಗೊಳಿಸಲಾಗಿದೆ'' ಎಂದು ಲೋಕಸಭೆ ಸ್ಪೀಕರ್ ಬಿರ್ಲಾ ಹೇಳಿದ್ದರು.

ಲೋಕಸಭೆಯಲ್ಲಿ ಭದ್ರತಾ ಉಲ್ಲಂಘನೆಯ ವಿಷಯವನ್ನು ಪತ್ರದಲ್ಲಿ ಪ್ರಸ್ತಾಪಿಸಿದ ಚೌಧರಿ ಅವರು, ''ಸಂಸತ್ ಭವನದ ಭದ್ರತೆಗೆ ಸಂಬಂಧಿಸಿದಂತೆ ತನಿಖೆ ಮತ್ತು ಸರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳುವ ತುರ್ತು ಅಗತ್ಯವಿದೆ. ಯುವಕರು ಇಂತಹ ನಾಚಿಕೆಯ ಕೃತ್ಯದಲ್ಲಿ ತೊಡಗಿರುವುದು ಸರಿಯಲ್ಲ. ಘಟನೆಗೆ ಸಂಬಂಧಿಸಿದಂತೆ ಎಲ್ಲ ಅಂಶಗಳನ್ನು ಪರಿಶೀಲಿಸಬೇಕು ಎಂದು ತಿಳಿಸಿದ್ದಾರೆ.

''ಡಿಸೆಂಬರ್ 13, 2023 ರ ಘಟನೆಗಿಂತ 2001 ರ ಡಿಸೆಂಬರ್ 13 ರ ಸಂಸತ್ ಭವನದ ಮೇಲಿನ ದಾಳಿಯ ಭಯನಕವಾಗಿತ್ತು. ಗಡಿಯಾಚೆಗಿನ ಕಠಿಣ, ಉತ್ತಮ ತರಬೇತಿ ಪಡೆದ ಮತ್ತು ಹೆಚ್ಚು ಶಸ್ತ್ರಸಜ್ಜಿತ ಭಯೋತ್ಪಾದಕರು ದಾಳಿ ನಡೆಸಿದ್ದ ಕೃತ್ಯವಾಗಿತ್ತು. ಈ ದಾಳಿಯ ಪರಿಣಾಮವಾಗಿ ಸಿಆರ್‌ಪಿಎಫ್, ದೆಹಲಿ ಪೊಲೀಸರು ಮತ್ತು ಸಿಪಿಡಬ್ಲ್ಯೂಡಿ ಮತ್ತು ಸಂಸತ್ ಭದ್ರತಾ ಸೇವೆಯ ಶಸ್ತ್ರಸಜ್ಜಿತ ಸಿಬ್ಬಂದಿ ಸಾವಿಗೆ ಕಾರಣವಾಯಿತು. ಎರಡು ಘಟನೆಗಳ ಕುರಿತ ಮಾಧ್ಯಮ ದಾಖಲೆಗಳನ್ನು ಒಳಗೊಂಡಿರುವ ಚಿತ್ರಗಳು, ಎರಡು ಘಟನೆಗಳಲ್ಲಿನ ವ್ಯತ್ಯಾಸವನ್ನು ಸ್ಪಷ್ಟವಾಗಿ ತೋರಿಸುತ್ತವೆ'' ಎಂದು ಅವರು ವಿವರಿಸಿದರು.

"ಆದ್ರೂ, 2023ರ ಡಿಸೆಂಬರ್ 13ರ ಇತ್ತೀಚಿನ ಘಟನೆಯು ನಮ್ಮ ಪ್ರಜಾಸತ್ತಾತ್ಮಕ ಆಚರಣೆಗಳು ಮತ್ತು ನೀತಿಯ ಮೂಲವಾಗಿರುವ ಸಂಸ್ಥೆಗಳ ಭದ್ರತೆಗೆ ಸಂಬಂಧಿಸಿದ ಸಮಸ್ಯೆಗಳ ಕುರಿತ ಪ್ರಶ್ನೆಗಳು ಮೂಡಿವೆ. ಏಕೆಂದರೆ ವಿಷಯದ ಗಂಭೀರತೆಯು ಈ ಸತ್ಯದಲ್ಲಿದೆ. ನಮ್ಮ ಭದ್ರತೆಗಾಗಿ, ವಿರೋಧ ಪಕ್ಷದ ಸದಸ್ಯರು ಸರ್ಕಾರದಿಂದ ವಿವರಣೆಯನ್ನು ಕೋರಲು ಕರ್ತವ್ಯ ಬದ್ಧರಾಗಿದ್ದಾರೆ. ಸರಿಪಡಿಸುವ ಕ್ರಮಗಳನ್ನು ತುರ್ತಾಗಿ ತೆಗೆದುಕೊಳ್ಳಬೇಕೆಂದು ನಿರೀಕ್ಷಿಸುತ್ತಾರೆ" ಎಂದು ಚೌಧರಿ ಬಿರ್ಲಾ ಪತ್ರದಲ್ಲಿ ತಿಳಿಸಿದ್ದಾರೆ.

''ಅಶಿಸ್ತಿನ ನಡವಳಿಕೆಯ ಕಾರಣದಿಂದ ಅಮಾನತುಗೊಂಡಿರುವ ಸದಸ್ಯರು ಬಹಳ ತೊಂದರೆಗೀಡಾದ ವಿಷಯಗಳ ಬಗ್ಗೆ ಸರ್ಕಾರದಿಂದ ವಿವರಣೆಗೆ ಒತ್ತಾಯಿಸುತ್ತಿದ್ದಾರೆ ಎಂಬ ಅಂಶವನ್ನು ಪರಿಗಣಿಸಿದ್ದೇನೆ. ಅಮಾನತು ಆಗಿರುವ ಸಂಸದರ ಕಾಳಜಿ ಗಮನಿಸಿ ಕೇಳುವುದು ಸೂಕ್ತವೆಂದು ತೋರುತ್ತದೆ" ಎಂದು ಅವರು, ‘‘ಇತ್ತೀಚಿನ ದಿನಗಳಲ್ಲಿ 13 ಸಂಸದರ ಅಮಾನತಿಗೆ ಕಾರಣವಾದ ಅಂಶಗಳನ್ನು ಪರಿಗಣಿಸಿ, ಈ ವಿಷಯವನ್ನು ಸಮಗ್ರವಾಗಿ ಪರಿಶೀಲಿಸಬೇಕು ಮತ್ತು ಅಮಾನತು ಹಿಂಪಡೆಯಲು ಮತ್ತು ಸದನದಲ್ಲಿ ಸುವ್ಯವಸ್ಥೆ ಮರುಸ್ಥಾಪಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಾನು ಒತ್ತಾಯಿಸುತ್ತೇನೆ’’ ಎಂದು ಚೌಧರಿ ಹೇಳಿದರು.

''ಈ ಘಟನೆಯು ಸಾರ್ವಜನಿಕರು, ಮಾಧ್ಯಮಗಳು ಸೇರಿದಂತೆ ವಿವಿಧ ವಲಯಗಳ ಜನರಲ್ಲೂ ದಿಗ್ಭ್ರಮೆ ಉಂಟುಮಾಡಿದೆ. ಸಂಸತ್ ಭವನದ ಭದ್ರತೆಯ ವಿಷಯಗಳ ಕುರಿತು ಸರ್ಕಾರದ ಮೇಲೆ ಸಂಪೂರ್ಣ ಅಧಿಕಾರವಿದೆ. ಜೊತೆಗೆ ಸಂಸತ್ತಿನ ರಕ್ಷಣೆಯ ಸಶಸ್ತ್ರ ಸಿಬ್ಬಂದಿ, ದೆಹಲಿ ಪೊಲೀಸ್, ಎನ್‌ಎಸ್‌ಜಿ ಮತ್ತು ಗುಪ್ತಚರ ಸಂಸ್ಥೆಗಳು ಸೇರಿದಂತೆ ಸಿಆರ್‌ಪಿಎಫ್ ಮತ್ತು ಇತರ ಭದ್ರತಾ ಏಜೆನ್ಸಿಗಳ ಘಟಕಗಳು ಸಂಸತ್ ಭವನದ ಭದ್ರತೆ ಬಗ್ಗೆ ಹೆಚ್ಚು ಗಮನಹರಿಸಬೇಕಾಗುತ್ತದೆ'' ಎಂದು ಒತ್ತಿ ಹೇಳಿದ್ದಾರೆ.

ಇದನ್ನು ಓದಿ: ಸಂಸತ್​​ ಭದ್ರತಾ ಲೋಪ: ಸಾಕ್ಷ್ಯನಾಶಕ್ಕೆ ಮೊಬೈಲ್​ ಸುಟ್ಟು ಹಾಕಿದ ಆರೋಪಿಗಳು

Last Updated : Dec 18, 2023, 11:16 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.