ETV Bharat / bharat

ಮೋದಿ ದುರಹಂಕಾರಿ ಎಂದ ಸಿಸೋಡಿಯಾ: ಮಾಜಿ ಡಿಸಿಎಂ ಕೊರಳಪಟ್ಟಿ ಹಿಡಿದು ಎಳೆದುಕೊಂಡು ಹೋದ್ರಾ ಪೊಲೀಸರು?

author img

By

Published : May 23, 2023, 7:25 PM IST

ಅಬಕಾರಿ ನೀತಿ ಹಗರಣದಲ್ಲಿ ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸುವಾಗ ದೆಹಲಿಯ ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ ಅವರೊಂದಿಗೆ ಪೊಲೀಸರು ಅನುಚಿತವಾಗಿ ವರ್ತಿಸಿದ್ಧಾರೆ ಎಂದು ಆಮ್​ ಆದ್ಮಿ ಪಕ್ಷದ ನಾಯಕರು ಆರೋಪಿಸಿದ್ದಾರೆ.

aap-leaders-allege-delhi-police-misbehaved-with-manish-sisodia-in-court
ಮೋದಿ ದುರಹಂಕಾರಿ ಎಂದ ಸಿಸೋಡಿಯಾ

ನವದೆಹಲಿ: ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿಯ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ನ್ಯಾಯಾಂಗ ಬಂಧನವನ್ನು ಜೂನ್ 1ರವರೆಗೆ ವಿಸ್ತರಿಸಿ ರೋಸ್ ಅವೆನ್ಯೂ ನ್ಯಾಯಾಲಯ ಆದೇಶಿಸಿದೆ. ಈ ಹಿಂದೆ ಸಿಸೋಡಿಯಾ ನ್ಯಾಯಾಂಗ ಬಂಧನವನ್ನು ಮೇ 23ರವರೆಗೆ ನ್ಯಾಯಾಲಯ ವಿಸ್ತರಿಸಿತ್ತು. ಇಂದಿಗೆ ನ್ಯಾಯಾಂಗ ಬಂಧನದ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಕೋರ್ಟ್​ಗೆ ಪೊಲೀಸರು ಹಾಜರು ಪಡಿಸಿದ್ದರು.

  • क्या पुलिस को इस तरह मनीष जी के साथ दुर्व्यवहार करने का अधिकार है? क्या पुलिस को ऐसा करने के लिए ऊपर से कहा गया है? https://t.co/izPacU6SHI

    — Arvind Kejriwal (@ArvindKejriwal) May 23, 2023 " class="align-text-top noRightClick twitterSection" data=" ">

ದೆಹಲಿ ಮದ್ಯ ನೀತಿ ಹಗರಣದಲ್ಲಿ ಕ್ರಿಮಿನಲ್ ಪಿತೂರಿ, ಭ್ರಷ್ಟಾಚಾರ ಮತ್ತು ಸಾಕ್ಷ್ಯಗಳ ನಾಶ ಮತ್ತು ವಿರೂಪಗೊಳಿಸಿದ ಆರೋಪದಡಿ ಮಾರ್ಚ್​ 26ರಂದು ದೆಹಲಿ ಉಪ ಮುಖ್ಯಮಂತ್ರಿಯಾಗಿದ್ದ ಮನೀಶ್ ಸಿಸೋಡಿಯಾ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದರು. ಇದರ ನಂತರ ಜೈಲಿನಲ್ಲಿದ್ದ ಸಿಸೋಡಿಯಾ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕೂಡ ಮಾರ್ಚ್​ 9ರಂದು ತಮ್ಮ ವಶಕ್ಕೆ ಪಡೆದಿದ್ದರು. ಇದೇ ಈ ಮದ್ಯ ನೀತಿ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಇಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಬೇರೆಯವರ ಹೆಸರಲ್ಲಿನ ಸಿಮ್​ ಕಾರ್ಡ್‌ಗಳು ಮತ್ತು ಮೊಬೈಲ್ ಫೋನ್‌ಗಳನ್ನು ಖರೀದಿಸಿದ್ದಾರೆ ಎಂಬ ಆರೋಪ ಸಹ ಸಿಸೋಡಿಯಾ ವಿರುದ್ಧ ಕೇಳಿ ಬಂದಿದೆ.

  • राउज एवेन्यू कोर्ट में पेशी के समय श्री मनीष सिसोदिया के साथ पुलिस दुर्व्यवहार की बात दुष्प्रचार है।

    वीडियो में प्रचारित पुलिस की प्रतिक्रिया सुरक्षा की दृष्टि से अनिवार्य थी।

    न्यायिक अभिरक्षा में अभियुक्त द्वारा मीडिया को वक्तव्य जारी करना विधि विरुद्ध है।#DelhiPoliceUpdates

    — Delhi Police (@DelhiPolice) May 23, 2023 " class="align-text-top noRightClick twitterSection" data=" ">

ಮೋದಿ ವಿರುದ್ಧ ಸಿಸೋಡಿಯಾ ಟೀಕೆ: ಮಂಗಳವಾರ ನ್ಯಾಯಾಲಯ ಆವರಣದಲ್ಲಿ ಮನೀಶ್ ಸಿಸೋಡಿಯಾ ಪತ್ರಕರ್ತರೊಂದಿಗೆ ಮಾತನಾಡಲು ಪ್ರಯತ್ನಿಸಿದರು. ಈ ವೇಳೆ, ದೆಹಲಿಯಲ್ಲಿ ಅಧಿಕಾರಿಗಳು ವರ್ಗಾವಣೆ ಮತ್ತು ನಿಯೋಜನೆ ವಿವಾದ ಬಗ್ಗೆ ರಾಷ್ಟ್ರ ರಾಜಧಾನಿ ನಾಗರಿಕ ಸೇವಾ ಪ್ರಾಧಿಕಾರ ರಚನೆಗೆ ಕೇಂದ್ರ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆ ಬಗ್ಗೆ ಪತ್ರಕರ್ತರು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಸೋಡಿಯಾ, ಮೋದಿಜಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ. ಅವರು ದುರಹಂಕಾರಿಯಾಗಿದ್ದಾರೆ ಎಂದು ಟೀಕಿಸಿದರು.

ಸಿಸೋಡಿಯಾ ಕೊರಳಪಟ್ಟಿ ಹಿಡಿದ ಪೊಲೀಸರು?: ಈ ವೇಳೆ ಮನೀಶ್ ಸಿಸೋಡಿಯಾ ಅವರ ಕೊರಳಪಟ್ಟಿ ಹಿಡಿದು ಪೊಲೀಸರು ಎಳೆದುಕೊಂಡು ಹೋಗುವ ರೀತಿಯ ವಿಡಿಯೋವೊಂದು ಬಂದಿದೆ. ಈ ವಿಡಿಯೋ ತಣುಕು ಬಹಿರಂಗವಾಗುತ್ತಿದ್ದಂತೆ ಪೊಲೀಸರ ನಡೆ ಬಗ್ಗೆ ದೆಹಲಿ ಆಡಳಿತಾರೂಢ ಆಮ್​ ಆದ್ಮಿ ಪಕ್ಷ ಆಕ್ರೋಶ ಹೊರ ಹಾಕಿದೆ. ಅಲ್ಲದೇ, ಇದನ್ನು ಖಂಡಿಸಿ ಸಿಎಂ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ. ಮನೀಶ್ ಜೊತೆ ಈ ರೀತಿ ಅನುಚಿತವಾಗಿ ವರ್ತಿಸುವ ಹಕ್ಕು ಪೊಲೀಸರಿಗೆ ಇದೆಯೇ? ಈ ರೀತಿ ಮಾಡುವಂತೆ ಪೊಲೀಸರಿಗೆ ಮೇಲಿಂದ ಹೇಳಲಾಗಿದೆಯೇ? ಎಂದು ಪ್ರಶ್ನಿಸಿದ್ದಾರೆ.

ಮತ್ತೊಂದೆಡೆ, ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಕೂಡ ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸ್ ಗೂಂಡಾಗಿರಿ ಉತ್ತುಂಗಕ್ಕೇರಿದೆ. ಸಿಸೋಡಿಯಾ ಅವರ ಕುತ್ತಿಗೆಗೆ ಎಳೆದುಕೊಂಡಿದ್ದಾರೆ. ಈ ಪೊಲೀಸ್ ಅಧಿಕಾರಿ ತನ್ನ ಬಾಸ್​ ಅನ್ನು ಮೆಚ್ಚಿಸಲು ಈ ರೀತಿ ವರ್ತಿಸಿದ್ದಾರೆ. ಈ ಘಟನೆಯ ಬಗ್ಗೆ ನ್ಯಾಯಾಲಯ ಗಮನಹರಿಸಬೇಕು. ಮೋದಿಜಿ, ನಿಮ್ಮ ಸರ್ವಾಧಿಕಾರವನ್ನು ಇಡೀ ದೇಶವೇ ಗಮನಿಸುತ್ತಿದೆ ಎಂದು ಟ್ವೀಟ್​ ಮಾಡಿದ್ದಾರೆ. ಶಿಕ್ಷಣ ಸಚಿವೆ ಅತಿಶಿ ಸಹ ಟ್ವೀಟ್ ಮಾಡಿದ್ದು, ಸಿಸೋಡಿಯಾ ಅವರ ಕೊರಳಪಟ್ಟಿ ಹಿಡಿದ ಪೊಲೀಸರನ್ನು ತಕ್ಷಣವೇ ಅಮಾನತು ಮಾಡಬೇಕೆಂದು ಆಗ್ರಹಿಸಿದ್ದಾರೆ.

ದೆಹಲಿ ಪೊಲೀಸರ ಸ್ಪಷ್ಟನೆ: ಸಿಸೋಡಿಯಾ ಅವರ ಕೊರಳಪಟ್ಟಿ ಹಿಡಿಯಲಾಗಿದೆ ಎಂಬ ವಿವಾದ ಕುರಿತಂತೆ ದೆಹಲಿ ಪೊಲೀಸರು ಪ್ರತಿಕ್ರಿಯಿಸಿದ್ದು, ಉದ್ದೇಶ ಪೂರ್ವಕವಾಗಿ ಅಪಪ್ರಚಾರ ಮಾಡಲಾಗುತ್ತಿದೆ. ಆರೋಪಿಗಳು ನ್ಯಾಯಾಂಗ ಬಂಧನದಲ್ಲಿರುವಾಗ ಮಾಧ್ಯಮಗಳಿಗೆ ಹೇಳಿಕೆ ನೀಡುವುದು ಕಾನೂನಿಗೆ ವಿರುದ್ಧವಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಸುಪ್ರೀಂಕೋರ್ಟ್​ಗೆ ಕೇಂದ್ರ ಅಪಮಾನ ಮಾಡಿದೆ... ಸುಗ್ರೀವಾಜ್ಞೆ ಪ್ರಶ್ನಿಸಿ ಅರ್ಜಿ ಸಲ್ಲಿಸುತ್ತೇವೆ: ಕೇಜ್ರಿವಾಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.