ETV Bharat / bharat

ಕನ್ನಡಿಗರಿಗೆ ಸಂದ ಗೌರವ: ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಮುಖ್ಯ ಅತಿಥಿಯಾಗಿ 'ಕಿಚ್ಚ' ಸುದೀಪ್​ ಭಾಗಿ!

author img

By

Published : Jan 16, 2021, 5:16 PM IST

ಗೋವಾದ ಪಣಜಿಯಲ್ಲಿರುವ ಶ್ಯಾಮ್​ ಪ್ರಸಾದ್​ ಮುಖರ್ಜಿ ಒಳಾಂಗಣ ಕ್ರೀಡಾಂಗಣದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿಲಾಗಿದ್ದು, ಕಾರ್ಯಕ್ರಮ ಜನವರಿ 24ರವರೆಗೆ ನಡೆಯಲಿದೆ.

51st International Film Festival
51st International Film Festival

ಪಣಜಿ(ಗೋವಾ): ಗೋವಾದ ಪಣಜಿಯಲ್ಲಿ ಇಂದಿನಿಂದ ಪ್ರತಿಷ್ಠಿತ 51ನೇ ಅಂತಾರಾಷ್ಟ್ರೀಯ ಸಿನಿಮಾ ಉತ್ಸವ ಆರಂಭಗೊಂಡಿದ್ದು, ಇದರಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ಮುಖ್ಯ ಅತಿಥಿಯಾಗಿ ಭಾಗಿಯಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಇದು ಕನ್ನಡಿಗರ ಪಾಲಿಗೆ ಹೆಮ್ಮೆಯ ಸಂಗತಿಯಾಗಿದೆ.

51ನೇ ಅಂತಾರಾಷ್ಟ್ರೀಯ ಸಿನಿಮಾ ಉತ್ಸವ: ನಟ ಸುದೀಪ್ ಭಾಗಿ

ಪಣಜಿಯ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಒಳಾಂಗಣ ಕ್ರೀಡಾಂಗಣದಲ್ಲಿ ಜನವರಿ 16ರಿಂದ 24ರವರಗೆ ನಡೆಯಲಿರುವ ಈ ಉತ್ಸವದಲ್ಲಿ 119 ಸಿನಿಮಾಗಳು ಪ್ರಸಾರಗೊಳ್ಳಲಿವೆ. ಇದು ಏಷ್ಯಾದಲ್ಲೇ ನಡೆಯುವ ಅತಿದೊಡ್ಡ ಸಿನಿ ಉತ್ಸವಗಳಲ್ಲಿ ಒಂದಾಗಿದೆ. ಕೇಂದ್ರ ಸಚಿವ ಪ್ರಕಾಶ್​ ಜಾವಡೇಕರ್​, ಗೋವಾ ಮುಖ್ಯಮಂತ್ರಿ ಪ್ರಮೋದ್​ ಸಾವಂತ್​ ಸೇರಿದಂತೆ ಹಲವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

  • Goa: The 51st International Film Festival of India started in Panaji today. Information and Broadcasting Minister Prakash Javadekar, and Chief Minister Pramod Sawant were also present at the event.

    Actor Sudeep was present at the opening ceremony as the Chief Guest. pic.twitter.com/viF4Q0cFjI

    — ANI (@ANI) January 16, 2021 " class="align-text-top noRightClick twitterSection" data=" ">

ಓದಿ:ಇದು ಕನ್ನಡಿಗರ ಹೆಮ್ಮೆ: ರಾಷ್ಟ್ರ ಮಟ್ಟದ ಈ ಕಾರ್ಯಕ್ರಮಕ್ಕೆ ಕಿಚ್ಚ ಮುಖ್ಯ ಅತಿಥಿ

ತಮ್ಮ ನಟನೆ ಮೂಲಕ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿರುವ ನಟ ಸುದೀಪ್​ ಭಾಗಿಯಾಗಿದ್ದು, ಪ್ರತಿಷ್ಠಿತ ಅಂತಾರಾಷ್ಟ್ರೀಯ ಫಿಲ್ಮ್​ ಉತ್ಸವದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.