ETV Bharat / bharat

ದೈವೇಚ್ಛೆಯೋ.. ಅಚ್ಚರಿಯೋ... 7 ತಿಂಗಳಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರೂ ಮಗುವಿಗೆ ಜನ್ಮ ನೀಡಿದ ಮಹಿಳೆ!

author img

By

Published : Oct 28, 2022, 1:47 PM IST

7 ತಿಂಗಳಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರೂ ಮಗುವಿಗೆ ಜನ್ಮ ನೀಡಿದ ಮಹಿಳೆ!
23-year-old-woman-lying-unconscious-for-7-months-gives-birth-to-baby-girl-in-delhi-aiims-hospital

ಅಪಘಾತದ ಸಮಯದಲ್ಲಿ ಮಹಿಳೆ ತನ್ನ ಪತಿಯೊಂದಿಗೆ ಬೈಕ್‌ನಲ್ಲಿ ಹೋಗುತ್ತಿದ್ದರು. ಈ ವೇಳೆ ಹೆಲ್ಮೆಟ್ ಧರಿಸಿರಲಿಲ್ಲ. ಇದೇ ವರ್ಷದ ಮಾರ್ಚ್ 31 ರಂದು ಈ ಘಟನೆ ನಡೆದಿತ್ತು.

ನವದೆಹಲಿ: ಉತ್ತರ ಪ್ರದೇಶದ ಬುಲಂದ್‌ಶಹರ್‌ನ 23 ವರ್ಷದ ಮಹಿಳೆ ಕಳೆದ 7 ತಿಂಗಳಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ. ರಸ್ತೆ ಅಪಘಾತದಲ್ಲಿ ತಲೆಗೆ ಗಾಯವಾದ ನಂತರ ಮಹಿಳೆಗೆ ಅನೇಕ ಶಸ್ತ್ರಚಿಕಿತ್ಸೆ ಮಾಡಲಾಗಿದ್ದರೂ ಅವರು ಪ್ರಜ್ಞಾಹೀನ ಸ್ಥಿತಿಯಲ್ಲೇ ಮಲಗಿದ್ದಾರೆ. ಆದರೆ ಅಚ್ಚರಿಯೋ ಅಥವಾ ದೈವೇಚ್ಛೆಯೋ ಗೊತ್ತಿಲ್ಲ.. ಈ ಮಹಿಳೆ ಕಳೆದ ವಾರ ಏಮ್ಸ್​​ನಲ್ಲಿ ಆರೋಗ್ಯವಂತ ಹೆಣ್ಣು ಶಿಶುವಿಗೆ ಜನ್ಮ ನೀಡಿದ್ದಾರೆ.

ಅಪಘಾತದ ಸಮಯದಲ್ಲಿ ಮಹಿಳೆ ತನ್ನ ಪತಿಯೊಂದಿಗೆ ಬೈಕ್‌ನಲ್ಲಿ ಹೋಗುತ್ತಿದ್ದರು. ಈ ವೇಳೆ ಆಕೆ ಹೆಲ್ಮೆಟ್ ಧರಿಸಿರಲಿಲ್ಲ. ಇದೇ ವರ್ಷದ ಮಾರ್ಚ್ 31 ರಂದು ಈ ಘಟನೆ ನಡೆದಿದೆ. ಅಪಘಾತದಲ್ಲಿ ಮಹಿಳೆಯ ತಲೆಗೆ ಆಳವಾದ ಮತ್ತು ಗಂಭೀರ ಗಾಯಗಳಾಗಿವೆ. ಈ ಅಪಘಾತದಲ್ಲಿ ಆಕೆಯ ಪ್ರಾಣ ಉಳಿಯಿತಾದರೂ ಆಕೆ ಪ್ರಜ್ಞಾಹೀನಳಾಗಿದ್ದಾಳೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ನರಶಸ್ತ್ರಚಿಕಿತ್ಸಾ ವಿಭಾಗದ ಪ್ರೊಫೆಸರ್ ದೀಪಕ್ ಗುಪ್ತಾ ಹೇಳುವ ಪ್ರಕಾರ- ಅವರು ಕಣ್ಣು ತೆರೆದು ನೋಡುತ್ತಾರೆ. ಆದರೆ ಮಹಿಳೆ ಏನನ್ನೂ ಅರ್ಥಮಾಡಿಕೊಳ್ಳುವ ಅಥವಾ ಪ್ರತಿಕ್ರಿಯಿಸುವ ಸ್ಥಿತಿಯಲ್ಲಿಲ್ಲ. ಹೆಲ್ಮೆಟ್ ಧರಿಸಿದ್ದರೆ ಅವರ ಜೀವನ ವಿಭಿನ್ನವಾಗಿರುತ್ತಿತ್ತು. ಬಹುಶಃ ಈಗ ಅವರು ಚೆನ್ನಾಗಿರುತ್ತಿದ್ದರು ಎನ್ನುತ್ತಾರೆ ಡಾ. ಗುಪ್ತಾ.

ಮಹಿಳೆಯ ಪತಿ ಖಾಸಗಿ ಕಂಪನಿಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಆದರೆ ಈ ಅಪಘಾತದ ನಂತರ ಹೆಂಡತಿಯನ್ನು ನೋಡಿಕೊಳ್ಳಲು ಆತ ತನ್ನ ಕೆಲಸ ತೊರೆದಿದ್ದಾನೆ.

ಅಪಘಾತದ ನಂತರ ಮಹಿಳೆಯನ್ನು ಏಮ್ಸ್‌ಗೆ ಕರೆತಂದಾಗ ಅವರು 40 ದಿನಗಳ ಗರ್ಭಿಣಿಯಾಗಿದ್ದರು. ಆಗ ಹೊಟ್ಟೆಯೊಳಗಿನ ಮಗು ಆರೋಗ್ಯವಾಗಿರುವುದನ್ನು ವೈದ್ಯರು ಪತ್ತೆ ಮಾಡಿದ್ದರು. ಆಕೆಯ ಪತಿ ಮಗುವನ್ನು ಉಳಿಸಿಕೊಳ್ಳಲು ನಿರ್ಧರಿಸಿದ್ದರು. ಸದ್ಯ ತಾಯಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಮಗುವಿಗೆ ಹಾಲುಣಿಸಲು ಸಾಧ್ಯವಾಗುತ್ತಿಲ್ಲ. ಮಗುವಿಗೆ ಬಾಟಲಿಯಿಂದ ಹಾಲು ನೀಡಲಾಗುತ್ತಿದೆ.

ಇದನ್ನೂ ಓದಿ: ಅತ್ಯಾಚಾರಕ್ಕೆ ವಿರೋಧ: 15ರ ಬಾಲೆ ಮೇಲೆ ಮಾರಣಾಂತಿಕ ಹಲ್ಲೆ, ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.