ಕರ್ನಾಟಕ

karnataka

'ಬಳ್ಳಾರಿ ಅಭಿವೃದ್ಧಿಗೆ ಸಿಗದ ವಿಶೇಷ ಅನುದಾನ, ಇದು ನಿರಾಶಾದಾಯಕ ಬಜೆಟ್‌'

By ETV Bharat Karnataka Team

Published : Feb 16, 2024, 9:52 PM IST

ಬಳ್ಳಾರಿ: ಜಿಲ್ಲೆಯ ವಿಮಾನ ನಿಲ್ದಾಣ ನಿರ್ಮಾಣ ಮತ್ತು ಅಪಾರಲ್ ಪಾರ್ಕ್ (ಜೀನ್ಸ್ ಪಾರ್ಕ್) ಕುರಿತು ಬಜೆಟ್‌ನಲ್ಲಿ ವಿಶೇಷ ಅನುದಾನ ಸಿಗುವ ಸಾಕಷ್ಟು ನಿರೀಕ್ಷೆಗಳು ಹುಸಿಯಾಗಿವೆ. ಪ್ರತಿ ಬಜೆಟ್‌ನಲ್ಲಿ ಘೋಷಣೆಯಾಗುವ ಯೋಜನೆಗಳ ಅನುಷ್ಠಾನದ ಕುರಿತು ಸರ್ಕಾರ ಎಲ್ಲಿಯೂ ಪ್ರಸ್ತಾಪ ಮಾಡಿಲ್ಲ ಎಂದು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸಹ ಕಾರ್ಯದರ್ಶಿ ಮಲ್ಲಿಕಾರ್ಜುನ್​ ಗೌಡ ತಿಳಿಸಿದರು. 

ಬಳ್ಳಾರಿಯಲ್ಲಿ ಆಧುನಿಕ ಒಣ ಮೆಣಸಿನಕಾಯಿ ಮಾರುಕಟ್ಟೆ ನಿರ್ಮಾಣ ನಾಲ್ಕು ವರ್ಷಗಳ ಹಿಂದೆಯೇ ಘೋಷಣೆಯಾಗಿದ್ದು, ಯೋಜನೆ ಪೇಪರ್‌ಗಳಲ್ಲಿಯೇ ಉಳಿದಿದೆ. ಈಗ, ಸಿಎಂ ಸಿದ್ದರಾಮಯ್ಯನವರು ಮತ್ತೆರೆಡು ಕಡೆಗಳಲ್ಲಿ ಆಧುನಿಕ ಒಣ ಮೆಣಸಿನಕಾಯಿ ಮಾರುಕಟ್ಟೆ ಘೋಷಣೆ ಮಾಡಿರುವುದು ಏತಕ್ಕಾಗಿ? ಎಂದರು.

ಉತ್ತರ ಕರ್ನಾಟಕದಲ್ಲಿಯೇ ಅತಿ ಹೆಚ್ಚಿನ ಪ್ರಮಾಣದ ಜಿಎಸ್‌ಟಿ ಪಾವತಿಸುತ್ತಿರುವ ಬಳ್ಳಾರಿ ಜಿಲ್ಲೆಯ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿವೆ. ರೈಲ್ವೆ, ರಸ್ತೆ, ವಿಮಾನಯಾನ ಸೇರಿ ಬಳ್ಳಾರಿ ಜಿಲ್ಲೆ ಯಾರ ಲೆಕ್ಕಕ್ಕೂ ಬಾರದ ಅನಾಥಕೂಸಾಗಿದೆ. ಕರ್ನಾಟಕ ಸರ್ಕಾರ ಅಖಂಡ ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿದ ನಂತರ, ಜಿಲ್ಲೆಯ ಅಭಿವೃದ್ಧಿಯನ್ನು ಸಂಪೂರ್ಣ ಕಡೆಗಣಿಸಿದೆ. ಬಳ್ಳಾರಿ ಬೈಪಾಸ್ ರಸ್ತೆ, ಔಟರ್‌ ರಿಂಗ್ ರೋಡ್ ನಿರ್ಮಾಣದ ಕುರಿತು ವಿಷಯವನ್ನೇ ಪ್ರಸ್ತಾಪ ಮಾಡಿಲ್ಲ. ಹಾಗಾಗಿ ಈ ಬಜೆಟ್​ ನಿರಾಶಾದಾಯಕ ಎಂದು ಮಲ್ಲಿಕಾರ್ಜುನ್​ ಗೌಡ ಹೇಳಿದರು.

ಇದನ್ನೂ ಓದಿ: ರಾಜ್ಯ ಬಜೆಟ್: ತವರು ಜಿಲ್ಲೆ ಮೈಸೂರಿಗೆ ಸಿದ್ದರಾಮಯ್ಯ ಕೊಡುಗೆಗಳೇನು?

ABOUT THE AUTHOR

...view details