ಕರ್ನಾಟಕ

karnataka

ಶಿವಮೊಗ್ಗ: ಪರೀಕ್ಷೆಯ ದಿನವೇ ಎಸ್​ಎಸ್​ಎಲ್​ಸಿ ವಿದ್ಯಾರ್ಥಿ ಆತ್ಮಹತ್ಯೆ - SSLC STUDENT SUICIDE

By ETV Bharat Karnataka Team

Published : Mar 25, 2024, 12:07 PM IST

Updated : Mar 25, 2024, 3:11 PM IST

ರಾತ್ರಿ ಸಹೋದರಿಗೆ ಮೆಸೇಜ್​ ಹಾಕಿದ್ದ ವಿದ್ಯಾರ್ಥಿ ಇಂದು ಬೆಳಗ್ಗೆ ತನ್ನ ರೂಂನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

SSLC student commits suicide on exam day in Shimoga
ಪರೀಕ್ಷಾ ದಿನವೇ ಎಸ್​ಎಸ್​ಎಲ್​ಸಿ ವಿದ್ಯಾರ್ಥಿ ಆತ್ಮಹತ್ಯೆ

ಶಿವಮೊಗ್ಗ:ಪರೀಕ್ಷೆಯ ದಿನವೇ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಾಗರ ತಾಲೂಕು ಆನಂದಪುರಂ ಬಳಿಯ ಯಡೇಹಳ್ಳಿ ಗ್ರಾಮದಲ್ಲಿ ನಡೆದಿದೆ. ಪರಶುರಾಮ್ ಬಾಬು ಆಂದೋಳ್ಳಿ (15) ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿ. ಸೋಮವಾರ ಬೆಳಗ್ಗೆ ಪರಶುರಾಮ್ ಅವರ ತಾಯಿ ರೂಂಗೆ ಹೋಗಿ ನೋಡಿದಾಗ ಮಗ ಸಾವನ್ನಪ್ಪಿರುವುದು ಗೊತ್ತಾಗಿದೆ. ವಿದ್ಯಾರ್ಥಿ ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡ ಎಂಬುದರ ಬಗ್ಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಪರಶುರಾಮ್ ಆನಂದಪುರಂನ ಪಿಇಎಸ್ ಪಬ್ಲಿಕ್‌ ಶಾಲೆಯಲ್ಲಿ ಓದುತ್ತಿದ್ದ. ಮೃತ ವಿದ್ಯಾರ್ಥಿಯ ತಂದೆ ದಾಂಡೇಲಿ ಮೂಲದವರಾಗಿದ್ದು, ಕೂಲಿ ಕೆಲಸಕ್ಕೆಂದು ಯಡೇಹಳ್ಳಿ ಗ್ರಾಮಕ್ಕೆ ಬಂದು ನೆಲೆಸಿದ್ದರು. ಪರಶುರಾಮ್ ತನ್ನ ಸಹೋದರಿಗೆ ನಿನ್ನೆ ರಾತ್ರಿ ಗುಡ್ ಬೈ ಎಂದು ವಾಟ್ಸ್​ ಆ್ಯಪ್ ಮೆಸೇಜ್​ ಮಾಡಿದ್ದನು. ಸಹೋದರಿ ಬೇರೆ ಊರಿನಲ್ಲಿ‌ ನೆಲೆಸಿದ್ದು, ಅವರು ಬಂದು ಪೊಲೀಸರಿಗೆ ದೂರು ನೀಡುವುದಾಗಿ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಆನಂದಪುರಂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:ಜಮೀನಿನ ದಾಖಲೆಗಳು ಬೇರೆಯವರ ಹೆಸರಿಗೆ ಬದಲಾವಣೆ: ಮನನೊಂದು ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣು - Three People Commit Suicide

Last Updated :Mar 25, 2024, 3:11 PM IST

ABOUT THE AUTHOR

...view details