ಕರ್ನಾಟಕ

karnataka

ನಾಡಿನಾದ್ಯಂತ ಸಂಭ್ರಮದ ಶ್ರೀ ರಾಮನವಮಿ ಆಚರಣೆ - Ram Navami Celebration

By ETV Bharat Karnataka Team

Published : Apr 17, 2024, 6:34 PM IST

Updated : Apr 17, 2024, 11:08 PM IST

ರಾಜ್ಯಾದ್ಯಂತ ಇಂದು ಸಂಭ್ರಮದಿಂದ ಶ್ರೀರಾಮ ನವಮಿಯನ್ನು ಆಚರಿಸಲಾಗಿದೆ.

ನಾಡಿನಾದ್ಯಂತ ಸಂಭ್ರಮದ ಶ್ರೀ ರಾಮನವಮಿ ಆಚರಣೆ
ನಾಡಿನಾದ್ಯಂತ ಸಂಭ್ರಮದ ಶ್ರೀ ರಾಮನವಮಿ ಆಚರಣೆ

ನಾಡಿನಾದ್ಯಂತ ಸಂಭ್ರಮದ ಶ್ರೀ ರಾಮನವಮಿ ಆಚರಣೆ

ಬೆಂಗಳೂರು:ಇಂದು ನಾಡಿನೆಲ್ಲೆಡೆ ಶ್ರೀರಾಮ ನವಮಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ನಗರದಲ್ಲಿನ ದೇವಸ್ಥಾನಗಳಲ್ಲಿ ಬೆಳಗ್ಗೆಯೇ ಶ್ರೀರಾಮನನ್ನು ವಿವಿಧ ಹೂಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.

ವಿಷ್ಣುವಿನ 7ನೇ ಅವಾತರವಾದ ಶ್ರೀ ರಾಮನ ಜನನವಾದ ದಿನವಿದು. ಚೈತ್ರ ಮಾಸದ ಒಂಬತ್ತನೇ ದಿನದಂದು ಶ್ರೀರಾಮನ ಜನನವಾಗಿತ್ತು. ಈ ಹಿನ್ನೆಲೆಯಲ್ಲಿ ಅತ್ಯಂತ ವಿಜೃಂಭಣೆಯಿಂದ ಶ್ರೀ ರಾಮ ನವಮಿಯನ್ನು ಆಚರಿಸಲಾಗುತ್ತಿದೆ. ಬೆಳಗಿಂದಲೇ ರಾಜಾಜಿನಗರದಲ್ಲಿರುವ ರಾಮ ಮಂದಿರಕ್ಕೆ ಸಾಕಷ್ಟು ಭಕ್ತರು ಆಗಮಿಸಿ ಶ್ರೀರಾಮನ ಕೃಪೆಗೆ ಪಾತ್ರರಾದರು. ಇದೇ ವೇಳೆ ಶ್ರೀ ರಾಮನ ರಥೋತ್ಸವವು ಸಹ ಜರುಗಿತು.

ಈ ವರ್ಷ ವಿಶೇಷವಾಗಿ ರಾಮ, ಲಕ್ಷ್ಮಣ, ಭರತ ಹಾಗೂ ಶತ್ರುಜ್ಞರ ಪ್ರತಿರೂಪವನ್ನು ತೊಟ್ಟಿಲಿನಲ್ಲಿರಿಸಿ ತೊಟ್ಟಿಲು ಶಾಸ್ತ್ರವನ್ನು ನೆರವೇರಿಸಲಾಗಿದೆ ಎಂದು ರಾಮಮಂದಿರ ದೇವಾಸ್ಥಾನದ ಅಧ್ಯಕ್ಷ ಶ್ರೀಧರ್ ಹೇಳಿದ್ದಾರೆ.

ಬೇಸಿಗೆ ಕಾಲವಾಗಿರುವುದರಿಂದ ಮತ್ತು ದೇಹದಲ್ಲಿ ಉಷ್ಣಾಂಶವು ಹೆಚ್ಚಾಗಿರುವುದರಿಂದ ಶ್ರಿರಾಮ ನವಮಿಗೆ ಪಾನಕ, ಮಜ್ಜಿಗೆ, ಕೊಸಂಬರಿಯನ್ನು ಪ್ರಸಾದದ ರೂಪದಲ್ಲಿ ನಗರದೆಲ್ಲೆಡೆ ಹಂಚಲಾಗುತ್ತಿದೆ. ಆಟೋ ಸ್ಟ್ಯಾಂಡ್, ಬಸ್ ಸ್ಟ್ಯಾಂಡ್, ಹೋಟೆಲ್‌ಗಳ ಮುಂಭಾಗ ಹೀಗೆ ಹಲವು ಕಡೆ ಯುವಕರು ಹಂಚುತ್ತಿದ್ದಾರೆ.

ಸಾಂಸ್ಕೃತಿಕ ನಗರಿಯಲ್ಲೂ ಅದ್ಧೂರಿ ಆಚರಣೆ

ಮೈಸೂರು: ನಗರದಲ್ಲಿ ಸಂಭ್ರಮದ ಶ್ರೀರಾಮನವಮಿಯನ್ನು ಆಚರಿಸಲಾಯಿತು. ಬೆಳಗ್ಗೆಯಿಂದಲೇ ನಗರದ ಶ್ರೀರಾಮ ಮಂದಿರದಲ್ಲಿ ವಿಶೇಷ ಪೂಜೆ ಹಾಗೂ ಭಕ್ತರಿಗೆ ಪಾನಕ, ಮಜ್ಜಿಗೆ ಕೋಸಂಬರಿಯನ್ನ ವಿತರಿಸಲಾಯಿತು. ನಗರದ ಶಿವರಾಂಪೇಟೆಯಲ್ಲಿನ ಪುರಾತನ ರಾಮಮಂದಿರದಲ್ಲಿ ದೇವರಿಗೆ ಅಭಿಷೇಕ ಮಾಡಲಾಯಿತು.

ಬೆಣ್ಣೆನಗರಿಯಲ್ಲಿ ಸಂಭ್ರಮದ ರಾಮನವಮಿ

ದಾವಣಗೆರೆ:ನಗರದಲ್ಲಿ ಇಂದುಸಂಭ್ರಮದ ಶ್ರೀರಾಮ ನವಮಿ ಆಚರಣೆ ಮಾಡಲಾಯಿತು. ನಗರದಂತ್ಯ ಶ್ರೀರಾಮನ ಪೋಟೊಗೆ ಪೂಜೆ ಸಲ್ಲಿಸಿ ಪಾನಕ, ಕೋಸಂಬರಿ, ಮಜ್ಜಿಗೆ ವಿತರಣೆ ಮಾಡಲಾಯಿತು. ದಾವಣಗೆರೆ ಪಿ.ಜೆ. ಬಡವಣೆಯಲ್ಲಿರುವ ಶ್ರೀರಾಮನ ದೇವಸ್ಥಾನದಲ್ಲು ಕೂಡ ಶ್ರೀರಾಮನಿ ನಿಮಿತ್ತ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ದಾವಣಗೆರೆ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್ ಪಿ.ಜೆ. ಬಡಾವಣೆಯ ಶ್ರೀರಾಮನ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಹಾವೇರಿಯಲ್ಲಿ ಶ್ರೀರಾಮನವಮಿ ಸಡಗರ: ನಗರದಲ್ಲಿ ರಾಮನ ಹುಟ್ಟಿದ ದಿನವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಹಾವೇರಿಯ 130 ವರ್ಷದ ಹಳೇಯ ಶ್ರೀರಾಮಮಂದಿರದಲ್ಲಿ ಮರ್ಯಾದಾ ಪುರಷೋತ್ತಮನಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಮುಂಜಾನೆ ರುದ್ರಾಭಿಷೇಕ ಸೇರಿದಂತೆ ವಿವಿಧ ಪೂಜಾ ವಿಧಿವಿಧಾನಗಳನ್ನು ಅನುಸರಿಸಲಾಯಿತು. ಶ್ರೀರಾಮ, ಲಕ್ಷ್ಮಣ, ಸೀತಾಮಾತೆ ಮತ್ತು ಆಂಜನೇಯ ಮೂರ್ತಿಗಳಿಗೆ ವಿವಿಧ ದ್ರವ್ಯಗಳಿಂದ ಅಭಿಷೇಕ ನಡೆಸಲಾಯಿತು. ನಂತರ ವಿವಿಧ ವೇಷಭೂಷಣಗಳ ಆಭರಣಗಳ ಪುಷ್ಪಮಾಲೆಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಲಾಯಿತು. ಇದೇ ವೇಳೆ ಸರಿಯಾಗಿ 12:30 ನಿಮಿಷಕ್ಕೆ ಬಾಲಶ್ರೀರಾಮನ ಮೂರ್ತಿಯನ್ನು ತೊಟ್ಟಿಲಲ್ಲಿಟ್ಟು ಪೂಜೆ ಸಲ್ಲಿಸಲಾಯಿತು.

ಇದನ್ನೂ ಓದಿ:ಅಯೋಧ್ಯೆಯಲ್ಲಿ ರಾಮ ನವಮಿ ಸಂಭ್ರಮ: ಹಳದಿ ಬಣ್ಣ ಅಲಂಕರಿಸುವ ಬಾಲಕ ರಾಮ; 'ದಿವ್ಯ ಅಭಿಷೇಕ' - Ram Navami Celebrations in Ayodhya

Last Updated : Apr 17, 2024, 11:08 PM IST

ABOUT THE AUTHOR

...view details