ETV Bharat / health

ನೀವು ನಡೆಯುವ ರೀತಿ ನಿಮ್ಮ ವ್ಯಕ್ತಿತ್ವ ಹೇಳುತ್ತೆ: ನಿಮ್ಮ ವಾಕಿಂಗ್​ ಸ್ಟೈಲ್​​​ ಒಮ್ಮೆ ಗಮನಿಸಿ, ವ್ಯಕ್ತಿತ್ವ ತಿಳಿಯಿರಿ! - WALKING STYLE REFLECTS PERSONALITY

author img

By ETV Bharat Karnataka Team

Published : Jun 13, 2024, 7:54 AM IST

Updated : Jun 13, 2024, 8:00 AM IST

ನಡಿಗೆಯ ಶೈಲಿಯು ವ್ಯಕ್ತಿತ್ವದ ಗುಣಲಕ್ಷಣಗಳನ್ನು ಪ್ರತಿಬಿಂಬಿಸುತ್ತದೆ ಎಂಬ ಮಾತಿದೆ. ಇದು ಅಕ್ಷರಶಃ ನಿಜ. ಸಾಮಾನ್ಯವಾಗಿ, ಒಬ್ಬರ ವ್ಯಕ್ತಿತ್ವವನ್ನು ಅವರ ನಡವಳಿಕೆಯಿಂದ ನಿರ್ಣಯಿಸಬಹುದು ಎಂದು ಅನೇಕ ಜನರು ಭಾವಿಸುತ್ತಾರೆ. ವಾಸ್ತವವಾಗಿ ನಮ್ಮ ಪಾತ್ರವನ್ನು ನಡವಳಿಕೆಯಿಂದ ನಿರ್ಧರಿಸಲಾಗುತ್ತದೆ. ವ್ಯಕ್ತಿ ನಡೆದುಕೊಳ್ಳುವ ರೀತಿ ಅವರ ವ್ಯಕ್ತಿತ್ವವನ್ನೂ ತಿಳಿಯಬಹುದು! ಇದು ನಿನಗೆ ಗೊತ್ತೇ

WALKING STYLE REFLECTS PERSONALIT
ವೆರಿ ಇಂಟ್ರೆಸ್ಟಿಂಗ್​: ನೀವು ನಡೆಯುವ ರೀತಿ ನಿಮ್ಮ ವ್ಯಕ್ತಿತ್ವದ ಪ್ರತಿಬಿಂಬ: ಏನು ನಿಮ್ಮ ದೋಷ ಒಮ್ಮೆ ಪರಿಶೀಲಿಸಿ! (ETV Bharat)

YOURS WALKING STYLE YOURS PERSONALITY: ವಾಕಿಂಗ್ ಸ್ಟೈಲ್ ಮೂಲಕ ನಿಮ್ಮ ವ್ಯಕ್ತಿತ್ವವನ್ನು ನೀವು ತಿಳಿದುಕೊಳ್ಳಬಹುದು ಅನ್ನೋದನ್ನು ನೀವು ನಂಬುತ್ತೀರಾ. ಹೌದು ಅಂತಾರೆ ಜರ್ಮನ್ ಮನಶ್ಶಾಸ್ತ್ರಜ್ಞ ವರ್ನರ್ ವುಲ್ಫ್. ನಡಿಗೆಯ ಮೂಲಕ ವ್ಯಕ್ತಿತ್ವದ ಅಭಿವ್ಯಕ್ತಿಯ ಕುರಿತಾದ 1935 ರ ಆರಂಭಿಕ ಅಧ್ಯಯನವು ಈ ಮಾತನ್ನು ದೃಢಪಡಿಸಿದೆ. ಅದನ್ನೇ ಆಧಾರವಾಗಿಟ್ಟುಕೊಂಡು ವರ್ನರ್ ವೋಲ್ಫ್ ಕೆಲವರ ನಡಿಗೆಯ ಶೈಲಿಯನ್ನೂ ಗಮನಿಸಿ ಅವರಲ್ಲಿ ಎಂತಹ ವ್ಯಕ್ತಿತ್ವವಿದೆ ಎಂದು ಹೇಳಿದ್ದರು. ಇನ್ನೇಕೆ ತಡ ನೀವು ನಿಮ್ಮ ಸುತ್ತಲಿರುವವರು ನಡೆದುಕೊಳ್ಳುವ ರೀತಿಯನ್ನು ಗಮನಿಸಿ ಮತ್ತು ಅವರು ಏನಂದು ತಿಳಿಯಿರಿ.

ನಿಧಾನವಾಗಿ ನಡೆಯುವವರ ವ್ಯಕ್ತಿತ್ವದ ಲಕ್ಷಣಗಳು: ನಿಮ್ಮ ನಡಿಗೆ ನಿಧಾನವಾಗಿದ್ದರೆ, ಅಂದರೆ ಸಣ್ಣ ಹೆಜ್ಜೆಗಳನ್ನು ಇಡುತ್ತಿದ್ದರೆ ಮತ್ತು ನೀವು ನಡೆಯುವಾಗ ನಿಮ್ಮ ಭುಜ ಮತ್ತು ತಲೆ ನೇರವಾಗಿದ್ದರೆ ನೀವು ಶಾಂತ ಚಿತ್ತರು ಅಂತಾನೇ ಅರ್ಥ. ಅಷ್ಟೇ ಏಕೆ ಈ ಗುಣಲಕ್ಷಣಗಳು ಇದ್ದರೆ ಆಕರ್ಷಕ ಮತ್ತು ಹಾಸ್ಯದ ವ್ಯಕ್ತಿತ್ವವನ್ನು ಹೊಂದಿರುತ್ತೀರಿ ಎಂದು ಮನಶ್ಶಾಸ್ತ್ರಜ್ಞ ವುಲ್ಫ್ ಹೇಳುತ್ತಾರೆ. ಈ ವಾಕಿಂಗ್ ಶೈಲಿಯನ್ನು ಹೊಂದಿರುವ ಜನರು ಸಾಮಾಜಿಕವಾಗಿ ಇತರರೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತಾರೆ. ಆದರೆ, ಅಂತಹ ಜನರೊಂದಿಗೆ ಸ್ನೇಹ ಮಾಡುವುದು ಅಷ್ಟು ಸುಲಭವಲ್ಲ. ಏಕೆಂದರೆ ಅವರು ಬಹಳ ಚಿಂತನಶೀಲರು ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳಲು ಸಮಯ ತೆಗೆದುಕೊಳ್ಳುತ್ತಾರೆ. ಅದೇ ರೀತಿ ಅವರು ಯಾವಾಗಲೂ ಹೊಸದನ್ನು ಕಲಿಯಲು ಬಯಸುತ್ತಾರೆ ಅನ್ನೋದು ವುಲ್ಫ್​​ ಅವರ ಅಭಿಮತವಾಗಿದೆ. ಹಾಗೆಯೇ ಅವರಿಗೆ ಸ್ವಲ್ಪ ಬೇಜಾರಾಗುತ್ತದೆ, ಅದೇ ತಪ್ಪುಗಳನ್ನು ಪದೇ ಪದೇ ಪುನರಾವರ್ತಿಸಲು ಅವರು ಇಷ್ಟಪಡುವುದಿಲ್ಲ ಎಂದು ಡಾ.ವೋಲ್ಫ್ ಹೇಳುತ್ತಾರೆ.

ಅದೇ.. ತಲೆ ತಗ್ಗಿಸಿ ಮೆಲ್ಲಮೆಲ್ಲನೆ ನಡೆಯುವವರು ಮೇಲಿನದಕ್ಕೆ ವಿರುದ್ಧವಾದ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಅವರು ಅಂತರ್ಮುಖಿ, ಆತಂಕ, ದುರ್ಬಲ ಮನಸ್ಸಿನ, ದುಃಖ, ಭಯ ಮತ್ತು ಆಗಾಗ್ಗೆ ಹಿಂದಿನ ತಪ್ಪುಗಳ ಬಗ್ಗೆ ಯೋಚಿಸುತ್ತಲೇ ಇರುತ್ತಾರಂತೆ. ಸಕಾರಾತ್ಮಕ ಮನೋಭಾವವನ್ನು ಕಾಪಾಡಿಕೊಳ್ಳಲು ಹೆಣಗಾಡುತ್ತಾರೆ. ಇಂತವರು ಆತ್ಮಸ್ಥೈರ್ಯ ಕಳೆದುಕೊಳ್ಳಬಹುದು ಎಂದೂ ಹೇಳಲಾಗುತ್ತದೆ.

ವೇಗದ ನಡಿಗೆ ಮತ್ತು ಅದರ ಲಕ್ಷಣಗಳು: ವೇಗವಾಗಿ ನಡೆಯುವ ಜನರು ಬಹಿರ್ಮುಖಿಗಳು. ಹೊಸ ವಿಷಯಗಳನ್ನು ಕಲಿಯಲು ಸದಾ ಸಿದ್ಧ. ವಿಶೇಷವಾಗಿ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳುವವರು. ಅಲ್ಲದೆ ಸುತ್ತಮುತ್ತಲಿನ ಜನರೊಂದಿಗೆ ಸುಲಭವಾಗಿ ಬೆರೆಯುತ್ತಾರೆ. ದೈನಂದಿನ ಕಾರ್ಯಗಳನ್ನು ತ್ವರಿತವಾಗಿ ಮಾಡಲು ಅವರು ಆಸಕ್ತಿ ತೋರಿಸುತ್ತಾರೆ. ಈ ನಡಿಗೆ ಶೈಲಿ ಹೊಂದಿರುವ ಜನರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ನಾಚಿಕೆ ಅಥವಾ ಹಿಂಜರಿಯುವುದಿಲ್ಲ ಎಂದು ಮನಶ್ಶಾಸ್ತ್ರಜ್ಞ ವೋಲ್ಫ್ ಹೇಳುತ್ತಾರೆ.

ಅದೇ ರೀತಿ.. ಕ್ಷಿಪ್ರವಾಗಿ ನಡೆಯುವವರು ರಿಸ್ಕ್ ತೆಗೆದುಕೊಳ್ಳಲು ಹೆದರುವುದಿಲ್ಲ. ಅವರು ತಮ್ಮ ಗುರಿಗಳನ್ನು ವೇಗವಾಗಿ ತಲುಪಲು ನಿರ್ಧರಿಸುತ್ತಾರೆ. ಅವರು ದಿಟ್ಟ ಮತ್ತು ಮುಕ್ತ ವ್ಯಕ್ತಿತ್ವವನ್ನು ಹೊಂದಿದ್ದಾರೆ. ಅಂತಹವರ ವೇಗವನ್ನು ಗೆಳೆಯರು ಸರಿಗಟ್ಟಲಾರರು. ಈ ಜನರ ನಂಬಿಕೆ ಮತ್ತು ಕ್ರಿಯಾಶೀಲತೆಯಿಂದ ಕೂಡಿರುತ್ತಾರೆ. ನಕಾರಾತ್ಮಕ ಅಂಶಗಳು ಅವರ ಬಳಿಯೂ ಸುಳಿಯುವುದಿಲ್ಲ. 2006 ರಲ್ಲಿ ಜರ್ನಲ್ "ಪರ್ಸನಾಲಿಟಿ ಮತ್ತು ಸೋಶಿಯಲ್ ಸೈಕಾಲಜಿ ಬುಲೆಟಿನ್" ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ವೇಗವಾಗಿ ನಡೆಯುವ ಜನರು ಹೆಚ್ಚು ಆತ್ಮವಿಶ್ವಾಸ ಮತ್ತು ನಕಾರಾತ್ಮಕ ಪ್ರಭಾವಗಳನ್ನು ಎದುರಿಸಲು ಸಿದ್ಧರಾಗಿರುತ್ತಾರೆ.

ಲಾಂಗ್ ಸ್ಟ್ರೈಡ್ಸ್ ವ್ಯಕ್ತಿತ್ವದ ಲಕ್ಷಣಗಳು : ಆತ್ಮವಿಶ್ವಾಸದಿಂದ ದಾಪುಗಾಲು ಹಾಕುವ ಜನರು ತಮ್ಮ ಮುಖದಲ್ಲಿ ಉತ್ಸಾಹವನ್ನು ತೋರಿಸುತ್ತಾರೆ. ನಿಮ್ಮ ವಾಕಿಂಗ್ ಶೈಲಿಯು ನಿಮ್ಮ ಗಮ್ಯಸ್ಥಾನವನ್ನು ತಲುಪುವ ನಿಮ್ಮ ಆಸಕ್ತಿಯನ್ನು ಪ್ರತಿಬಿಂಬಿಸುತ್ತದೆ. ಲಾಂಗ್ ಸ್ಟ್ರೈಡರ್‌ಗಳನ್ನು ಸಮಾಜದಲ್ಲಿ ಹೆಚ್ಚಾಗಿ ಗೌರವಿಸಲಾಗುತ್ತದೆ. ಆದರ್ಶಪ್ರಾಯರಾಗುತ್ತಾರೆ. ಉತ್ಸಾಹದಿಂದ ಇರುತ್ತಾರೆ. ನಿಮ್ಮ ಗುರಿಗಳು ಮತ್ತು ತತ್ವಗಳ ಪಾಲನೆಯನ್ನು ಚಾಲನೆಯಲ್ಲಿಟ್ಟಿರುತ್ತದೆ . ಬೇಗನೆ ಕೋಪಗೊಂಡಾಗ, ಅನ್ಯಾಯವನ್ನು ಗ್ರಹಿಸಿದಾಗ, ಅವರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಾಧ್ಯವಾಗದವರ ಪರವಾಗಿ ನಿಲ್ಲುತ್ತಾರೆ. ಮಲ್ಟಿ ಟಾಸ್ಕಿಂಗ್‌ನಲ್ಲಿಯೂ ಅವರು ಸದಾ ಸಿದ್ಧಹಸ್ತರು ಎಂದು ಮನಶ್ಶಾಸ್ತ್ರಜ್ಞ ವರ್ನರ್ ವೋಲ್ಫ್ ಹೇಳಿದ್ದಾರೆ.

ವಿಶೇಷ ಸೂಚನೆ: ಇಲ್ಲಿ ಒದಗಿಸಲಾದ ಎಲ್ಲಾ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು ಮತ್ತು ತಜ್ಞರ ಸಲಹೆಯ ಆಧಾರದ ಮೇಲೆ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ನೀವೂ ಸಹ ಈ ಬಗ್ಗೆ ಅಧ್ಯಯನ ಮಾಡಿ ಸತ್ಯಾಸತ್ಯತೆಯನ್ನು ಕಂಡುಕೊಳ್ಳಬಹುದಾಗಿದೆ.

ಇದನ್ನು ಓದಿ:ದೇಹದ ತೂಕ ಕಡಿಮೆ ಮಾಡಲು ದಿನವೂ ಕಸರತ್ತು ನಡೆಸಿದ್ದೀರಾ?​​: ಹೀಗೆ ಮಾಡಿದರೆ ವಾರದಲ್ಲೇ ವೇಟ್​ ಲಾಸ್​ ಪಕ್ಕಾ! - Weight Loss Tips

ಊಟ ಮಾಡಿದ್ರೆ ತೂಕ ಹೆಚ್ಚುವ ಭಯವೇ? ಹುಷಾರ್, ಇದು ಗಂಭೀರ ಮಾನಸಿಕ ಸಮಸ್ಯೆಗೆ ಕಾರಣವಾದೀತು! - Eating Disorder

Last Updated : Jun 13, 2024, 8:00 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.