ಕರ್ನಾಟಕ

karnataka

"ಉಡುಪಿ‌ ಚಿಕ್ಕಮಗಳೂರು ಟಿಕೆಟ್ ಕುರಿತು ನನ್ನನ್ನು ಯಾರೂ ಸಂಪರ್ಕಿಸಿಲ್ಲ": ಕೋಟ ಶ್ರೀನಿವಾಸ ಪೂಜಾರಿ

By ETV Bharat Karnataka Team

Published : Mar 12, 2024, 3:29 PM IST

ನನಗೆ ಟಿಕೆಟ್​ ನೀಡುವ ವಿಚಾರ ಅಥವಾ ಬೇರೆ ಅಭ್ಯರ್ಥಿಗಳ ಬಗ್ಗೆ ಪಕ್ಷ ಯಾವ ನಿರ್ಧಾರ ತೆಗೆದುಕೊಳ್ಳುತ್ತದೋ ಗೊತ್ತಿಲ್ಲ. ಅದನ್ನು ನೋಡಿ ನಂತರ ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತೇನೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

Former minister Kota Srinivasa Pujari
ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ

ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ

ಮಂಗಳೂರು: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಸಿಗಲಿದೆ ಎಂಬ ಸುದ್ದಿಯ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಕೋಟ ಶ್ರೀನಿವಾಸ್​ ಪೂಜಾರಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. "ಮಾಧ್ಯಮದಲ್ಲಿ ಈ ಬಗ್ಗೆ ಸುದ್ದಿ ಬಿತ್ತರವಾಗಿದ್ದನ್ನು ನಾನು ಗಮನಿಸಿದೆ. ಪಕ್ಷ ಏನು ನಿರ್ಧಾರ ಕೈಗೊಳ್ಳುತ್ತದೋ ಎಂದು ಯೋಚನೆ ಮಾಡುತ್ತಿದ್ದೇನೆ" ಎಂದು ಹೇಳಿದರು.

"ರಾತ್ರಿಯಿಂದ ಒಂದಷ್ಟು ವಿಚಾರದಲ್ಲಿ ಬ್ಯುಸಿಯಾಗಿದ್ದೆ. ಬರುವಾಗ ತಡವಾಗಿತ್ತು. ಆದರೆ ಈವರೆಗೆ ನನ್ನನ್ನು ಯಾರೂ ಸಂಪರ್ಕಿಸಿಲ್ಲ. ಸಂಘಟನಾತ್ಮಕ ವಿಚಾರವಾಗಿ ಬೆಂಗಳೂರು, ದೆಹಲಿ ಕಚೇರಿಗಳಿಂದ ಕರೆಗಳು ಬರುತ್ತಿರುತ್ತದೆ. ಏನೆಂದು ಗೊತ್ತಿಲ್ಲ, ನೋಡಿ ಆಮೇಲೆ ನಿಮಗೆ ಹೇಳ್ತೇನೆ." ಎಂದು ಹೇಳಿದರು.

ಟಿಕೆಟ್ ಕೊಟ್ಟರೆ ಚುನಾವಣೆ ಎದುರಿಸುತ್ತೀರಾ ಎಂಬ ಪ್ರಶ್ನೆಗೆ, "ಟಿಕೆಟ್ ವಿಚಾರಕ್ಕೆ, ಅಥವಾ ಅಭ್ಯರ್ಥಿ ವಿಚಾರಕ್ಕೆ ಪಕ್ಷ ಏನು ನಿರ್ದೇಶನ ನೀಡುತ್ತದೋ ಗೊತ್ತಿಲ್ಲ. ಮಾಧ್ಯಮದಲ್ಲಿ ಯಾರು ಯಾರಿಗೆ ಟಿಕೆಟ್ ಎಂಬ ಘೋಷಣೆಗಳು ಆಗುತ್ತಿದೆ. ಪಾರ್ಟಿ ನಿರ್ಧಾರವೇನು ಎಂಬುದು ಖಚಿತವಾಗಿ ನನಗೆ ಗೊತ್ತಿಲ್ಲ. ಏನು ಹೇಳುತ್ತದೆ ಎಂದು ನೋಡಿ ಮತ್ತೆ ಪ್ರತಿಕ್ರಿಯೆ ಕೊಡುತ್ತೇನೆ" ಎಂದು ಕೋಟ ಶ್ರೀನಿವಾಸ ಪೂಜಾರಿ ಉತ್ತರಿಸಿದರು.

ಇದನ್ನೂ ಓದಿ:ಬಿಜೆಪಿ ಪಡಸಾಲೆಯಲ್ಲಿ ಹರಿದಾಡುತ್ತಿದೆ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ

ABOUT THE AUTHOR

...view details