ಕರ್ನಾಟಕ

karnataka

384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ಕೆಪಿಎಸ್‌ಸಿ ಅಧಿಸೂಚನೆ: ಅರ್ಹತೆ, ಅರ್ಜಿ ಸಲ್ಲಿಕೆಯ ಸಂಪೂರ್ಣ ವಿವರ

By ETV Bharat Karnataka Team

Published : Feb 26, 2024, 10:53 PM IST

Updated : Feb 27, 2024, 5:24 PM IST

ಕರ್ನಾಟಕ ಗೆಜೆಟೆಡ್ ಪ್ರೊಬೇಷನರಿ ಗ್ರೂಪ್ ಎ, ಗ್ರೂಪ್ ಬಿ ಸೇರಿ ಒಟ್ಟು 384 ಹುದ್ದೆಗಳ ನೇಮಕಾತಿಗೆ ಕೆಪಿಎಸ್‌ಸಿ ಅಧಿಸೂಚನೆ ಹೊರಡಿಸಿದೆ.

KPSC Office
ಕರ್ನಾಟಕ ಲೋಕಸೇವಾ ಆಯೋಗದ ಕಚೇರಿ

ಬೆಂಗಳೂರು: ಗೆಜೆಟೆಡ್ ಪ್ರೊಬೇಷನರಿ ಗ್ರೂಪ್ ಎ ವೃಂದದ 159 ಹುದ್ದೆಗಳು ಮತ್ತು ಗ್ರೂಪ್ ಬಿ ವೃಂದದ 225 ಹುದ್ದೆಗಳು ಸೇರಿ ಒಟ್ಟು 384 ಹುದ್ದೆಗಳ ನೇಮಕಾತಿಗೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಅಧಿಸೂಚನೆ ಹೊರಡಿಸಿದೆ.

ವಯೋಮಿತಿ: ಕನಿಷ್ಠ 21 ವರ್ಷ. ಸಾಮಾನ್ಯ ವರ್ಗದವರಿಗೆ ಗರಿಷ್ಠ 38 ವರ್ಷ. ಹಿಂದುಳಿದ ವರ್ಗದವರಿಗೆ ಗರಿಷ್ಠ 41 ವರ್ಷ. ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಪ್ರವರ್ಗ-1 ಅಭ್ಯರ್ಥಿಗಳಿಗೆ 43 ವರ್ಷ.

ವಿದ್ಯಾರ್ಹತೆ:ಯಾವುದೇ ಪದವಿ.

ಅರ್ಜಿ ಸಲ್ಲಿಕೆ: ಅರ್ಜಿ ಸಲ್ಲಿಕೆ ಮಾರ್ಚ್ 4ರಂದು ಪ್ರಾರಂಭ. ಏಪ್ರಿಲ್ 4 ಅಂತಿಮ ದಿನ.

ಆಸಕ್ತರು ಕೆಪಿಎಸ್‌ಸಿ ವೆಬ್‌ಸೈಟ್ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಮೊದಲ ಹಂತದಲ್ಲಿ ಅಭ್ಯರ್ಥಿಗಳು ತಮ್ಮ ವಿವರ, ಶೈಕ್ಷಣಿಕ ಅರ್ಹತೆ ಮತ್ತಿತರೆ ಮಾಹಿತಿಯನ್ನು ಭರ್ತಿ ಮಾಡಬೇಕು. ಎರಡನೇ ಹಂತದಲ್ಲಿ ಇಲಾಖೆ ಕೇಳುವ ಇತರೆ ವಿವರ ನೀಡಿ ಅರ್ಜಿ ತುಂಬಬೇಕು. ಮೂರನೇ ಹಂತದಲ್ಲಿ ಶುಲ್ಕ ಪಾವತಿಸಬೇಕು.

ಅರ್ಜಿ ಶುಲ್ಕ:ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 600 ರೂ, ಇತರೆ ಹಿಂದುಳಿದ ಎಲ್ಲ ವರ್ಗದ ಅಭ್ಯರ್ಥಿಗಳಿಗೆ 300 ರೂ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ 50 ರೂ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಅರ್ಜಿ ಶುಲ್ಕದ ಜೊತೆಗೆ ಎಲ್ಲಾ ಅಭ್ಯರ್ಥಿಗಳು ಪ್ರೋಸೆಸಿಂಗ್ ಚಾರ್ಜ್ 35 ರೂ ಪಾವತಿಸಬೇಕು ಎಂದು ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂಓದಿ:ನಾಳೆ ರಾಜೀವ್ ​ಗಾಂಧಿ ಆರೋಗ್ಯ ವಿವಿ ಘಟಿಕೋತ್ಸವ: 52,650 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

Last Updated :Feb 27, 2024, 5:24 PM IST

ABOUT THE AUTHOR

...view details