ಕರ್ನಾಟಕ

karnataka

ತಾಯಿ - ಮಕ್ಕಳ ಆರೋಗ್ಯ ರಕ್ಷಣೆಗೆ 2 ನೂತನ ತಂತ್ರಜ್ಞಾನ ಅನುಷ್ಠಾನ

By ETV Bharat Karnataka Team

Published : Feb 22, 2024, 9:07 AM IST

ತಾಯಿ ಮತ್ತು ನವಜಾತ ಶಿಶುಗಳ ಆರೈಕೆಗಾಗಿ ಎರಡು ಹೊಸ ತಂತ್ರಜ್ಞಾನಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಅನುಷ್ಠಾನಗೊಳಿಸುತ್ತಿದೆ.

Implementation of 2 new technologies for mother-child health care
ತಾಯಿ-ಮಕ್ಕಳ ಆರೋಗ್ಯ ರಕ್ಷಣೆಗೆ 2 ನೂತನ ತಂತ್ರಜ್ಞಾನ ಅನುಷ್ಠಾನ

ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು: ರಾಜ್ಯದಲ್ಲಿ ತಾಯಿ ಮತ್ತು ಮಕ್ಕಳ ಆರೈಕೆಗಾಗಿ ಇನ್ಫೋಸಿಸ್ ಫೌಂಡೇಶನ್​ನ ಸಿ.ಎಸ್.ಆರ್ ಫಂಡ್ ನೆರವಿನೊಂದಿಗೆ ಆರೋಗ್ಯ ಇಲಾಖೆ ಎರಡು ನೂತನ ತಂತ್ರಜ್ಞಾನಗಳನ್ನ ಸರ್ಕಾರಿ ಆಸ್ಪತ್ರೆಗಳಲ್ಲಿ ಅನುಷ್ಠಾನಗೊಳಿಸುತ್ತಿದೆ. ನೂತನ ಯೋಜನೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಬುಧವಾರದಂದು ಇನ್ಫೋಸಿಸ್ ಫೌಂಡೇಶನ್ ಹಾಗೂ ಸಿ. ಕ್ಯಾಂಪ್ ಅವರೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದರು.

ಈ ವೇಳೆ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್​​, ಪ್ರಾಯೋಗಿಕವಾಗಿ 3 ಜಿಲ್ಲೆಗಳಲ್ಲಿ ತಂತ್ರಜ್ಞಾನ ಅಳವಡಿಕೆ ಕಾರ್ಯ ಆರಂಭವಾಗಿದೆ. ಧಾರವಾಡ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಜಿಲ್ಲಾಸ್ಪತ್ರೆ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ 'fetal monitoring technology' ಮತ್ತು ''CPAP'' ತಂತ್ರಜ್ಞಾನಗಳನ್ನು ಅಳವಡಿಸಲಾಗುತ್ತಿದೆ ಎಂದು ತಿಳಿಸಿದರು.

ಸಚಿವ ದಿನೇಶ್ ಗುಂಡೂರಾವ್

ಹಂತ ಹಂತವಾಗಿ ನಾಲ್ಕು ವರ್ಷಗಳಲ್ಲಿ ಒಟ್ಟು 8 ಜಿಲ್ಲೆಗಳ ಜಿಲ್ಲಾಸ್ಪತ್ರೆ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತಂತ್ರಜ್ಞಾನ ಅಳವಡಿಕೆ ಕಾರ್ಯ ನೆಡೆಯಲಿದೆ. ಈ ತಂತ್ರಜ್ಞಾನಗಳ ಅಳವಡಿಕೆಗೆ ಇನ್ಫೋಸಿಸ್ ಫೌಂಡೇಶನ್ ಸಿಎಸ್​ಆರ್ ಯೋಜನೆಯಡಿ ಹಣಕಾಸಿನ ನೆರವು ಒದಗಿಸಲು ಮುಂದೆ ಬಂದಿದ್ದು, ಯೋಜನೆ ಅನುಷ್ಠಾನದಲ್ಲಿ ಸಿ - ಕ್ಯಾಂಪ್ ಅಗತ್ಯ ವೇದಿಕೆ ಕಲ್ಪಿಸಿದೆ. ಎರಡು ತಂತ್ರಜ್ಞಾನಗಳು ತಾಯಿ ಮತ್ತು ಮಕ್ಕಳ ಆರೋಗ್ಯದ ಜೊತೆಗೆ, ನವಜಾತ ಶಿಶುಗಳ ಆರೋಗ್ಯ ರಕ್ಷಣೆಯಲ್ಲಿ ಸಹಕಾರಿಯಾಗಿವೆ ಎಂದು ತಿಳಿಸಿದರು.

ತಂತ್ರಜ್ಞಾನಗಳನ್ನ ಸುಲಭವಾಗಿ ನರ್ಸ್​​ಗಳು ಸಹ ಬಳಕೆ ಮಾಡಬಹುದು. ಫೆಟಲ್​​ ಮಾನಿಟರಿಂಗ್​​ ತಂತ್ರಜ್ಞಾನ ಗರ್ಭಿಣಿಯರ ಆರೋಗ್ಯ ಮೇಲ್ವಿಚಾರಣೆಗೆ ಹೆಚ್ಚು ಸಹಕಾರಿ ಆಗಿದೆ. ಸಿ.ಪಿ.ಎ.ಪಿ ತಂತ್ರಜ್ಞಾನ ಉಸಿರಾಟದ ಸಮಸ್ಯೆ ಹೊಂದಿರುವ ನವಜಾತ ಶಿಶುಗಳ ಆರೈಕೆಗೆ ಅನುಕೂಲ ಆಗಲಿದೆ ಎಂದು ತಂತ್ರಜ್ಞಾನಗಳ ಬಗ್ಗೆ ವಿವರಿಸಿದರು.

ಇದನ್ನೂ ಓದಿ:ವೇಣೂರು ಬಾಹುಬಲಿ ಮಹಾಮಸ್ತಕಾಭಿಷೇಕ: ಇಂದಿನಿಂದ ಶತಮಾನದ ಮೂರನೇ ಮಹಾಮಜ್ಜನ

ಶಿಶು ಮರಣ ಪ್ರಮಾಣವನ್ನು ಇಳಿಕೆ ಮಾಡುವುದು ನಮ್ಮ ಗುರಿಯಾಗಿದೆ. ಈ ನಿಟ್ಟಿನಲ್ಲಿ ಹೊಸ ಹೊಸ ತಂತ್ರಜ್ಞಾನಗಳನ್ನು ಆರೋಗ್ಯ ಇಲಾಖೆ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಅಳವಡಿಸುತ್ತಿದೆ. ಈ ತಂತ್ರಜ್ಞಾನದಿಂದಾಗಿ ಒಂದು ಲಕ್ಷಕ್ಕೂ ಹೆಚ್ಚು ಗರ್ಭಿಣಿಯರ ಆರೋಗ್ಯ ಮೇಲ್ವಿಚಾರಣೆಗೆ ಅನುಕೂಲ ಆಗಲಿದೆ. ಜೊತೆಗೆ, ಸಾವಿರಾರು ನವಜಾತ ಶಿಶುಗಳ ಆರೋಗ್ಯ ಆರೈಕೆಗೆ ಸಹಕಾರಿ ಆಗಲಿದೆ. ನೂತನ ಯೋಜನೆಗೆ ಹಣಕಾಸಿನ ನೆರವು ಒದಗಿಸಲು ಮುಂದೆ ಬಂದಿರುವ ಇನ್ಫೋಸಿಸ್ ಫೌಂಡೇಶನ್ ಅವರಿಗೆ ಸಚಿವರು ಧನ್ಯವಾದ ತಿಳಿಸಿದರು. ಈ ಸಂದರ್ಭದಲ್ಲಿ ಸಿ-ಕ್ಯಾಂಪ್​ನ ಸಿಇಒ ತಸ್ಲಿಮರಿಫ್ ಹಾಗೂ ಇನ್ಫೋಸಿಸ್ ಫೌಂಡೇಷನ್ ಪ್ರಮುಖರು ಉಪಸ್ಥಿತರಿದ್ದರು.

ಇದನ್ನೂ ಓದಿ:ತಿರುವನಂತಪುರ ಕಾಸರಗೋಡು ವಂದೇ ಭಾರತ್ ಎಕ್ಸ್​ಪ್ರೆಸ್ ಮಂಗಳೂರುವರೆಗೆ ವಿಸ್ತರಣೆ

ABOUT THE AUTHOR

...view details