ಕರ್ನಾಟಕ

karnataka

ನೇಹಾ ಹತ್ಯೆ ಪ್ರಕರಣ: ಮಗ ಮಾಡಿದ ತಪ್ಪಿಗೆ ಕ್ಷಮೆ ಕೋರುತ್ತೇನೆ ಎಂದ ಆರೋಪಿಯ ತಾಯಿ - Faiyaz Mother Apologized

By ETV Bharat Karnataka Team

Published : Apr 20, 2024, 1:16 PM IST

Updated : Apr 20, 2024, 2:01 PM IST

ನೇಹಾ ಹಿರೇಮಠ ಹತ್ಯೆ ಪ್ರಕರಣದ ಆರೋಪಿ​​​​​​​​​ ಫಯಾಜ್​ ತಾಯಿ ನೇಹಾ ಪೋಷಕರಿಗೆ ಮತ್ತು ನಾಡಿನ ಜನತೆಯ ಕ್ಷಮೆಯಾಚಿಸಿದ್ದಾರೆ. ಮಗನ ಕೃತ್ಯ ಕ್ಷಮೆಗೆ ಅರ್ಹವಾದುದಲ್ಲ, ಈ ನೆಲದ ಕಾನೂನಿನಂತೆ ಶಿಕ್ಷೆ ಆಗಲಿ ಎಂದು ಹೇಳಿದ್ದಾರೆ.

ಮಗ ಮಾಡಿದ ತಪ್ಪಿಗೆ ಕ್ಷಮೆ ಕೋರಿದ ಆರೋಪಿ ತಾಯಿ
ಮಗ ಮಾಡಿದ ತಪ್ಪಿಗೆ ಕ್ಷಮೆ ಕೋರಿದ ಆರೋಪಿ ತಾಯಿ

ನೇಹಾ ಹತ್ಯೆ ಪ್ರಕರಣ: ಮಗ ಮಾಡಿದ ತಪ್ಪಿಗೆ ಕ್ಷಮೆ ಕೋರಿದ ಆರೋಪಿ ತಾಯಿ

ಧಾರವಾಡ: ಪಾಲಿಕೆ ಸದಸ್ಯ ನಿರಂಜನಯ್ಯ ಹಿರೇಮಠ ಪುತ್ರಿ ಕೊಲೆ ಪ್ರಕರಣ ರಾಜ್ಯಾದ್ಯಂತ ಸದ್ದು ಮಾಡುತ್ತಿದೆ. ಫಯಾಜ್​ ಎಂಬ ಯುವಕ ಬಿವಿಬಿ ಕಾಲೇಜು ಕ್ಯಾಂಪಸ್​ನಲ್ಲಿ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಘಟನೆ ಬಗ್ಗೆ ಮಾತನಾಡಿರುವ ಕೊಲೆಯಾದ ನೇಹಾ ತಂದೆ ನಿರಂಜನಯ್ಯ ಬರ್ಬರವಾಗಿ ಕೊಲೆ ಮಾಡಿದ ಆರೋಪಿಯನ್ನು ಗಲ್ಲಿಗೇರಿಸಿದರೆ ನನ್ನ ಮಗಳ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದು ಹೇಳಿದ್ದಾರೆ.

ಇನ್ನು ಹತ್ಯೆ ಪ್ರಕರಣ ಸಂಬಂಧ ಗೃಹ ಸಚಿವ ಪರಮೇಶ್ವರ್ ಹೇಳಿಕೆ ಖಂಡಿಸಿ ಎಬಿವಿಪಿ ಪ್ರತಿಭಟನೆ ನಡೆಸುತ್ತಿದೆ. ಮತ್ತೊಂದು ಕಡೆ ಗೃಹ ಸಚಿವರು, ತಮ್ಮ ಹೇಳಿಕೆಯಿಂದ ನೇಹಾ ತಂದೆ ತಾಯಿಯ ಮನಸ್ಸಿಗೆ ನೋವಾಗಿದ್ದರೆ, ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಹೇಳಿದ್ದಾರೆ.

ರಾಜ್ಯದ ಜನರ ಕ್ಷಮೆ ಕೋರಿದ ಫಯಾಜ್​ ತಾಯಿ: ಇನ್ನೊಂದು ಕಡೆ, ನೇಹಾ ಹಿರೇಮಠ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಫಯಾಜ್ ತಾಯಿ ಮಮ್ತಾಜ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. "ನನ್ನ ಮಗ ಮಾಡಿದ ತಪ್ಪಿಗೆ ನಾನು ಕರ್ನಾಟಕದ ಸಮಸ್ತ ಜನತೆಗೆ ಮತ್ತು ನೇಹಾಳ ತಂದೆ, ತಾಯಿಗೂ ಕ್ಷಮೆಯಾಚಿಸುತ್ತೇನೆ. ನೇಹಾಳ ಪೋಷಕರಿಗೆ ಆದಷ್ಟೇ ನೋವು ನನಗೂ ಆಗಿದೆ‘‘ ಎಂದಿದ್ದಾರೆ.

"ಅವಳೂ ನನ್ನ ಮಗಳು ಇದ್ದಹಾಗೆ. ನನ್ನ ಮಗ ಮಾಡಿದ್ದು ತಪ್ಪು. ಫಯಾಜ್​ ಐಎಎಸ್​ ಅಧಿಕಾರಿ ಆಗಬೇಕೆಂದು ನಾನು ಕನಸುಕಂಡಿದ್ದೆ, ಆದರೇ ಈ ರೀತಿ ಆಗಿದ್ದು ಬಹಳ ಸಂಕಟ ಆಗುತ್ತಿದೆ. ನೇಹಾ ಸಹ ತುಂಬಾ ಒಳ್ಳೆಯ ಹುಡುಗಿ. ಶಿಕ್ಷಕಿಯಾಗಿ ನೂರಾರು ಮಕ್ಕಳಿಗೆ ನಾನು ಶಿಕ್ಷಣ ಕೊಡ್ತೀನಿ. ಕಾನೂನಿನ ಪ್ರಕಾರ ಆತ ಮಾಡಿದ ತಪ್ಪಿಗೆ ಈ ನೆಲದ ಕಾನೂನಿನಂತೆ ಸರಿಯಾದ ಶಿಕ್ಷೆಯಾಗಲಿ" ಎಂದು ಮಾಧ್ಯಮಗಳ ಮುಂದೆ ದುಃಖ ಭರಿತರಾಗಿ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.

ಪ್ರಕರಣದ ಹಿನ್ನೆಲೆ: ಏ.18ರಂದು ಪಾಲೀಕೆ ಸದಸ್ಯ ನಿರಂಜನಯ್ಯ ಹಿರೇಮಠ ಅವರ ಪುತ್ರಿ ನೇಹಾ ಹಿರೇಮಠ ಅವರನ್ನು ಕಾಲೇಜಿನ ಕ್ಯಾಂಪಸ್​ನಲ್ಲಿ ಆರೋಪಿ ಫಯಾಜ್​ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದ. ಪರೀಕ್ಷೆಗೆಂದು ಕಾಲೇಜಿಗೆ ತೆರಳಿದ್ದ ನೇಹಾ ಮೇಲೆ ಆರೋಪಿ ಫಯಾಜ್​ ಏಕಾಎಕಿ ದಾಳಿ ನಡೆಸಿ ಚಾಕುನಿಂದ ಇರೀದಿದ್ದ. ಗಂಭೀರವಾಗಿ ಗಾಯಗೊಂಡಿದ್ದ ನೇಹಾರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲೇ ಅವರು ಸಾವನ್ನಪ್ಪಿದ್ದರು. ಆರೋಪಿ ಫಯಾಜ್​ನ ಈ ಕೃತ್ಯ ಕಾಲೇಜು ಆವರಣದಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಘಟನೆ ಬಳಿಕ ಅದೇ ದಿನ ಹುಬ್ಬಳ್ಳಿ - ಧಾರವಾಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.

ಇದನ್ನೂ ಓದಿ:ಹುಬ್ಬಳ್ಳಿಯ ಕಾಲೇಜು ಕ್ಯಾಂಪಸ್​ನಲ್ಲಿ ಯುವತಿಯ ಭೀಕರ ಕೊಲೆ; ಯುವಕನ ಬಂಧನ - Corporator Daughter Murder

ನನ್ನ ಪುತ್ರಿಯನ್ನು ಕೊಲೆ ಮಾಡಿದ ಆರೋಪಿಯನ್ನು ಗಲ್ಲಿಗೇರಿಸಿ: ನಿರಂಜನಯ್ಯ ಹಿರೇಮಠ - Neha Hiremath Murder Case

ಹುಬ್ಬಳ್ಳಿ ಕಾಲೇಜು‌ ಕ್ಯಾಂಪಸ್​ನಲ್ಲಿ ಯುವತಿಯ ಕೊಲೆ: ಪೊಲೀಸ್ ಕಮೀಷನರ್ ಹೇಳಿದ್ದೇನು? - College Girl Murder

Last Updated : Apr 20, 2024, 2:01 PM IST

ABOUT THE AUTHOR

...view details