ಕರ್ನಾಟಕ

karnataka

5 ಕೋಟಿ ಹಣ ಸಾಗಣೆ ಪ್ರಕರಣ; ಬಿಜೆಪಿ ಮನಿ ಲಾಂಡರಿಂಗ್ ಮಾಡುತ್ತಿದೆ: ರಣದೀಪ್ ಸುರ್ಜೇವಾಲಾ - Lok Sabha Election 2024

By ETV Bharat Karnataka Team

Published : Apr 21, 2024, 8:05 PM IST

5 ಕೋಟಿ ಹಣ ನಿನ್ನೆ ಬೆಂಗಳೂರಲ್ಲಿ ಸೀಜ್ ಮಾಡಲಾಗಿದ್ದು ಅದನ್ನು ಚಾಮರಾಜನಗರ, ಮೈಸೂರಿಗೆ ಸಾಗಿಸಲಾಗುತ್ತಿತ್ತು. ಕಾರಿನಲ್ಲಿ ಎರಡು ಪತ್ರಗಳು ಕೂಡ ಲಭ್ಯವಾಗಿದ್ದು ಬಿಜೆಪಿಗೆ ಸಂಬಂಧಿಸಿವೆ ಎಂದು ಕರ್ನಾಟಕ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಆರೋಪಿಸಿದ್ದಾರೆ.

Karnataka in charge Randeep Surjewala spoke.
ಕರ್ನಾಟಕ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಮಾತನಾಡಿದರು.

ಚಾಮರಾಜನಗರ:ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಪಂಚ ಯೋಜನೆಗಳನ್ನು ಜನರಿಗೆ ತಲುಪಿಸಿದೆ.ಕಾಂಗ್ರೆಸ್ ಪಾರ್ಟಿ ರಾಷ್ಟ್ರೀಯ ಮಟ್ಟದಲ್ಲೂ ಗ್ಯಾರಂಟಿ ಯೋಜನೆ ತರಲು ನಿರ್ಧರಿಸಿದೆ. ಆದರೆ ಬಿಜೆಪಿ ಮನಿ ಲಾಂಡರಿಂಗ್ ಮಾಡುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಆರೋಪಿಸಿದರು.

5 ಕೋಟಿ ಜಪ್ತಿ: ಚಾಮರಾಜನಗರದ ಖಾಸಗಿ ಹೋಟೆಲ್​ನಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, 5 ಕೋಟಿ ಹಣವನ್ನು ಶನಿವಾರ ಬೆಂಗಳೂರಲ್ಲಿ ಸೀಜ್ ಮಾಡಲಾಗಿದ್ದು, ಅದನ್ನು ಚಾಮರಾಜನಗರ, ಮೈಸೂರಿಗೆ ಸಾಗಣೆ ಮಾಡಲಾಗುತ್ತಿತ್ತು. ಎರಡು ಪತ್ರಗಳು ಕೂಡ ಕಾರಿನಲ್ಲಿ ಲಭ್ಯವಾಗಿದ್ದು, ಬಿಜೆಪಿಗೆ ಸಂಬಂಧಿಸಿವೆ ಎಂದು ದೂರಿದರು.

''ಕೋದಂಡ ಎಂಬ ವ್ಯಕ್ತಿಯ ಹೆಸರಿನಡಿ ಕೆನರಾ ಬ್ಯಾಂಕ್ ಬ್ರ್ಯಾಂಚ್​ನ 5 ಕೋಟಿ ಹಣವನ್ನು ಮಾರ್ಚ್ 27 ರಂದು ಹಣವನ್ನು ವಿಥ್ ಡ್ರಾ ಮಾಡಲಾಗಿದೆ. ಆದರೆ ಬ್ಯಾಂಕ್​​​ನಿಂದ ಹಣವನ್ನು ಸಾಗಣೆ ಮಾಡಲು 1 ತಿಂಗಳು ಬೇಕಾ?'' ಎಂದು ಪ್ರಶ್ನಿಸಿದರು.

''50 ಸಾವಿರಕ್ಕೂ ಹೆಚ್ಚು ಹಣ ಸಾಗಿಸಿದ್ರೆ ಎಲೆಕ್ಷನ್ ಕಮೀಷನ್ ಸೀಜ್ ಮಾಡುತ್ತೆ, ಬಿಜೆಪಿ ಕೋಟಿ ಕೋಟಿ ಹಣವನ್ನು ಸಾಗಿಸುತ್ತಿದೆ, ನಾನು ಮೋದಿ, ಬಿಎಸ್ ವೈ, ಬಿ ವೈ ವಿಜಯೇಂದ್ರ, ಆರ್ ಅಶೋಕ್ ಅವರನ್ನು ಪ್ರಶ್ನೆ ಮಾಡ್ತೀನಿ? ವಿಥ್ ಡ್ರಾ ಮಾಡಿದ ಹಣವನ್ನು 10 ಕಿ ಮೀ ಸಾಗಿಸಲು ಒಂದು ತಿಂಗಳು ಬೇಕಾಗಿತ್ತಾ?'' ಎಂದು ಕಿಡಿಕಾರಿದರು.

''ಎಲೆಕ್ಷನ್ ಕಮಿಷನ್ ಯಾಕೆ ವಿಜಯೇಂದ್ರ ಹಾಗೂ ಆರ್ ಅಶೋಕ್ ವಿರುದ್ಧ ಕ್ರಮ ತೆಗೆದುಕೊಳ್ಳಬಾರದು? ಆದರೆ ಐಟಿ ಇಲಾಖೆ ಈ ಸಂದರ್ಭದಲ್ಲಿ ಬಿಜೆಪಿಯನ್ನು ಉಳಿಸಲು ಎಂಟ್ರಿಯಾಗಿತ್ತು. ರಾತ್ರೋರಾತ್ರಿ ಇನ್ನೊಂದು ಆದೇಶ ಕೂಡ ಪಾಸ್ ಅಗುತ್ತೆ, ಈ ಹಣವನ್ನು ಬ್ಯಾಂಕ್​​​ನಿಂದ ವಿಥ್ ಡ್ರಾ ಮಾಡಲಾಗಿದೆ. ಅದನ್ನು ಬಿಜೆಪಿಗೆ ಹಿಂದಿರುಗಿಸಿ, ಇಲ್ಲಿ ಯಾವ ರೀತಿಯ ಮನಿ ಲಾಂಡ್​ರಿಂಗ್​ ನಡೀತಿದೆ. ಬಿಜೆಪಿ ನಾಯಕರೇ ಉತ್ತರ ಕೊಡಿ'' ಎಂದು ಒತ್ತಾಯಿಸಿದರು.

ಕೇಂದ್ರ ಸರ್ಕಾರದ ಚೊಂಬು ಮಾಡೆಲ್ :ಮೋದಿ ಸರ್ಕಾರ ಸಾಧನೆ ಮಾಡಿರೋದು ಚೊಂಬು ಮಾಡೆಲ್, ನಾವು ಕೇಂದ್ರ ಸರ್ಕಾರಕ್ಕೆ 100 ರೂ. ಕೊಟ್ರೆ ₹ 13 ಕೊಡ್ತಾರೆ, ನಾವು ಅದನ್ನು ಕೇಳಿದ್ರೆ ಚೊಂಬು ತಗೋಳಿ ಅಂತಾರೆ, ಉದ್ಯೋಗ ಕೇಳಿದ್ರೆ ಮೋದಿ ಹೇಳೋದು ಚೊಂಬು ತಗೋಳಿ,
ಒಟ್ಟಾರೆ ಮೋದಿ ಸರ್ಕಾರ ಖಾಲಿ ಚೊಂಬು ಕೊಟ್ಟಿದೆ ಎಂದು ಸುರ್ಜೇವಾಲಾ ಖಾಲಿ ಚೊಂಬು ಪ್ರದರ್ಶಿಸಿದರು. ಇನ್ನು, ಮಾಧ್ಯಮಗೋಷ್ಟಿ ನಡೆಸುವ ವೇಳೆ ವೇದಿಕೆ ಮೇಲೆ ಖಾಲಿ ಚೊಂಬುಗಳನ್ನು ಇಡಲಾಗಿತ್ತು.

ಇದನ್ನೂಓದಿ:ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಹೆಚ್​ಡಿಕೆ ವಿರುದ್ಧ ಎಫ್ಐಆರ್ - H D Kumaraswamy

ABOUT THE AUTHOR

...view details