ಕರ್ನಾಟಕ

karnataka

ಹೈದರಾಬಾದ್‌ ರನ್‌ ಸುನಾಮಿಗೆ ತತ್ತರಿಸಿದ ಡೆಲ್ಲಿ; ಸನ್‌ರೈಸರ್ಸ್‌ಗೆ ಸತತ 4ನೇ ಗೆಲುವು, ಅಂಕಪಟ್ಟಿಯಲ್ಲಿ 2ನೇ ಸ್ಥಾನ - DC vs SRH

By PTI

Published : Apr 21, 2024, 7:28 AM IST

ಟಿ20 ಪಂದ್ಯದ ಇನಿಂಗ್ಸ್‌ವೊಂದರ ಪವರ್‌ಪ್ಲೇಯಲ್ಲಿ ಇದೇ ಮೊದಲ ಬಾರಿಗೆ ತಂಡವೊಂದು 125 ರನ್‌ ಪೇರಿಸಿತು!. ಕೇವಲ 6 ಓವರ್‌ಗಳಲ್ಲಿ ಇಷ್ಟೊಂದು ರನ್ ಕಲೆ ಹಾಕಿದ ಉದಾಹರಣೆ ಟಿ20 ಕ್ರಿಕೆಟ್‌ ಇತಿಹಾಸದಲ್ಲಿ ಇಲ್ಲ. ಇಂಥದ್ದೊಂದು ವಿಕ್ರಮವನ್ನು ನಿನ್ನೆ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸನ್‌ರೈಸರ್ಸ್‌ ಹೈದರಾಬಾದ್ ಬ್ಯಾಟರ್‌ಗಳು ಸಾಧಿಸಿದರು. ಟ್ರಾವಿಸ್ ಹೆಡ್‌ 32 ಎಸೆತಗಳಲ್ಲಿ 89 ರನ್‌ ಬಾರಿಸಿದರೆ, ಅಭಿಷೇಕ್ ಶರ್ಮಾ 12 ಎಸೆತಗಳಲ್ಲಿ 46 ರನ್ ಗಳಿಸಿದರು.!

Etv Bharat
Etv Bharat

ನವದೆಹಲಿ:ಇಂಡಿಯನ್ ಪ್ರೀಮಿಯರ್‌ ಲೀಗ್‌ನಲ್ಲಿ (ಐಪಿಎಲ್‌) ಶನಿವಾರ ನಡೆದ ರೋಚಕ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ (ಡಿಸಿ) ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್(ಎಸ್‌ಆರ್‌ಎಚ್‌) ಗೆಲುವು ಸಾಧಿಸಿತು. ಈ ಋತುವಿನಲ್ಲಿ ನಾಲ್ಕನೇ ವಿಜಯ ಸಾಧಿಸುವ ಮೂಲಕ ಎಸ್‌ಆರ್‌ಎಚ್ ತನ್ನ ಅಭಿಯಾನ ಮುಂದುವರಿಸಿದೆ.

ಮೊದಲು ಬ್ಯಾಟಿಂಗ್‌ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 266 ರನ್‌ಗಳ ಬೃಹತ್ ಸ್ಕೋರ್ ದಾಖಲಿಸಿತು. ಇದರೊಂದಿಗೆ ಸತತ ಮೂರು ಪಂದ್ಯಗಳಲ್ಲಿ 250ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು. ಟಿ20ಯಲ್ಲಿ 250 ಪ್ಲಸ್ ಸ್ಕೋರ್ ದಾಖಲಿಸಿದ ತಂಡಗಳ ಪಟ್ಟಿಯಲ್ಲಿ ಎಸ್‌ಆರ್‌ಎಚ್‌ ಅಗ್ರಸ್ಥಾನದಲ್ಲಿದೆ. ಈ ಋತುವಿನಲ್ಲಿ ಎಸ್‌ಆರ್‌ಎಚ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ 277 ರನ್ ಮತ್ತು ಆರ್‌ಸಿಬಿ ವಿರುದ್ಧ 287 ರನ್ ಗಳಿಸಿದೆ.

ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ ಅಬ್ಬರದ ಆಟ:ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಅಬ್ಬರದ ಆಟವಾಡಿದರು. ಪವರ್‌ಪ್ಲೇಯಲ್ಲಿ ಇವರಿಬ್ಬರನ್ನು ತಡೆಯಲು ಡೆಲ್ಲಿ ಬೌಲರ್‌ಗಳಿಗೆ ಸಾಧ್ಯವಾಗಲಿಲ್ಲ. ಈ ಜೋಡಿ 131 ರನ್‌ಗಳ ಬೃಹತ್ ಜೊತೆಯಾಟ ನೀಡಿತು.

ಪವರ್ ಪ್ಲೇಯಲ್ಲಿ ಹೊಸ ದಾಖಲೆ: ಹೆಡ್ ಕೇವಲ 32 ಎಸೆತಗಳಲ್ಲಿ 11 ಬೌಂಡರಿ ಮತ್ತು 6 ಸಿಕ್ಸರ್‌ಗಳೊಂದಿಗೆ 89 ರನ್ ಗಳಿಸಿದರೆ, ಅಭಿಷೇಕ್ ಕೇವಲ 12 ಎಸೆತಗಳಲ್ಲಿ 2 ಬೌಂಡರಿ ಮತ್ತು 6 ಸಿಕ್ಸರ್‌ಗಳೊಂದಿಗೆ 46 ರನ್ ಪೇರಿಸಿದರು. ಇವರಿಬ್ಬರ ಅಬ್ಬರದಾಟದ ಬಲದಿಂದ ಸನ್‌ರೈಸರ್ಸ್ ಪವರ್‌ಪ್ಲೇನಲ್ಲಿ (6 ಓವರ್‌ಗಳಲ್ಲಿ) 125 ರನ್ ಗಳಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿತು!. ಈ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಪವರ್ ಪ್ಲೇನಲ್ಲಿ ಗರಿಷ್ಠ ಸ್ಕೋರ್ ಗಳಿಸಿದ ತಂಡವೆಂಬ ಹೆಗ್ಗಳಿಕೆ ಸನ್‌ರೈಸರ್ಸ್ ತಂಡದ್ದಾಯಿತು. ಈ ಹಿಂದೆ ಕೆಕೆಆರ್ (2017- 106 ರನ್) ಐಪಿಎಲ್‌ನಲ್ಲಿ ಪವರ್‌ಪ್ಲೇನಲ್ಲಿ ಅತಿ ಹೆಚ್ಚು ಸ್ಕೋರ್ ಗಳಿಸಿದ ತಂಡವಾಗಿತ್ತು. ಇದೀಗ ಈ ದಾಖಲೆಯನ್ನು ಸನ್‌ರೈಸರ್ಸ್ ತಂಡ ಮುರಿದಿದೆ.

ಇದನ್ನೂ ಓದಿ:ನಿಧಾನಗತಿ ಬೌಲಿಂಗ್​: ರಾಹುಲ್​, ಋತುರಾಜ್​​ಗೆ ₹12 ಲಕ್ಷ ರೂ. ದಂಡ: ನಾಯಕರಿಬ್ಬರಿಗೆ ಪೆನಾಲ್ಟಿ ಇದೇ ಮೊದಲು - slow over rate fined

ABOUT THE AUTHOR

...view details