ಕರ್ನಾಟಕ

karnataka

ಪ್ರೊ ಕಬಡ್ಡಿ ಪ್ಲೇ ಆಫ್: ಫೈನಲ್ ಪಂದ್ಯಗಳಿಗೆ ಹೈದರಾಬಾದ್ ಆತಿಥ್ಯ

By ETV Bharat Karnataka Team

Published : Feb 1, 2024, 5:07 PM IST

Pro Kabaddi 10: ಪ್ರೊ ಕಬಡ್ಡಿ 10ರ ಪ್ಲೇ ಆಫ್ ಹಾಗೂ ಫೈನಲ್ ಪಂದ್ಯಗಳು ಹೈದರಾಬಾದ್​ನಲ್ಲಿ ನಡೆಯಲಿವೆ.

hyderabad-to-hosts-play-offs-and-finals-of-pro-kabaddi-season-ten
ಪ್ರೊ ಕಬಡ್ಡಿ ಪ್ಲೇ ಆಫ್, ಫೈನಲ್ ಪಂದ್ಯಗಳಿಗೆ ಹೈದರಾಬಾದ್ ಆತಿಥ್ಯ

ಬೆಂಗಳೂರು/ಮುಂಬೈ :ಪ್ರೊ ಕಬಡ್ಡಿ ಲೀಗ್ 10 ನೇ ಆವೃತ್ತಿಯ ಪ್ಲೇ ಆಫ್ ಮತ್ತು ಫೈನಲ್ ಪಂದ್ಯಗಳಿಗೆ ಹೈದರಾಬಾದ್ ಆತಿಥ್ಯ ವಹಿಸಲಿದೆ. ಫೆಬ್ರವರಿ 26 ರಿಂದ ಮಾರ್ಚ್ 1 ರವರೆಗೆ ಹೈದರಾಬಾದ್‌‌ನ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಅಂತಿಮ ಸುತ್ತಿನ ಪಂದ್ಯಗಳು ನಡೆಯಲಿವೆ ಎಂದು ಪ್ರೊ ಕಬಡ್ಡಿ ಲೀಗ್ ಸಂಘಟಕರಾದ ಮಶಾಲ್ ಸ್ಪೋರ್ಟ್ಸ್ ತಿಳಿಸಿದೆ.

ಲೀಗ್ ಹಂತದ ಎರಡು ಅಗ್ರ ತಂಡಗಳು ನೇರವಾಗಿ ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿವೆ. ಮೂರು, ನಾಲ್ಕು, ಐದು ಮತ್ತು ಆರನೇ ತಂಡಗಳು ಫೆಬ್ರವರಿ 26 ರಂದು ಎಲಿಮಿನೇಟರ್ ಪಂದ್ಯಗಳಲ್ಲಿ ಮುಖಾಮುಖಿ ಆಗಲಿವೆ. ಮೂರನೇ ಸ್ಥಾನ ಪಡೆಯುವ ತಂಡ ಎಲಿಮಿನೇಟರ್ 1 ರಲ್ಲಿ ಆರನೇ ಸ್ಥಾನ ಪಡೆಯುವ ತಂಡವನ್ನು ಎದುರಿಸಲಿದೆ. ನಾಲ್ಕನೇ ಸ್ಥಾನ ಪಡೆದ ಟೀಂ ಎಲಿಮಿನೇಟರ್ 2ರಲ್ಲಿ ಐದನೇ ಸ್ಥಾನ ಪಡೆದಿರುವ ತಂಡದ ವಿರುದ್ಧ ಕಣಕ್ಕಿಳಿಯಲಿದೆ.

ಎಲಿಮಿನೇಟರ್ 1 ರ ವಿಜೇತ ತಂಡ ಸೆಮಿಫೈನಲ್ 1 ರಲ್ಲಿ ಟೇಬಲ್ ಟಾಪರ್ಸ್ ವಿರುದ್ಧ ಸೆಣಸಾಡಲಿದೆ. ಮತ್ತು ಎಲಿಮಿನೇಟರ್ 2ರ ವಿಜೇತ ತಂಡ ಫೆಬ್ರವರಿ 28 ರಂದು ಸೆಮಿಫೈನಲ್​ ಹಣಾಹಣಿಯಲ್ಲಿ ಎರಡನೇ ಸ್ಥಾನ ಪಡೆದ ತಂಡವನ್ನು ಎದುರಿಸಲಿದೆ. ವಿಜೇತ ತಂಡಗಳು ಚಾಂಪಿಯನ್ ಪಟ್ಟಕ್ಕಾಗಿ ಮಾರ್ಚ್ 1 ರಂದು ಫೈನಲ್‍ನಲ್ಲಿ ಕಾದಾಡಲಿವೆ.

ಇದನ್ನೂ ಓದಿ:ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯ; ಗೆಲುವಿನ ಆತ್ಮವಿಶ್ವಾಸದಲ್ಲಿ ಭಾರತ

ಈ‌ ಕುರಿತು ಮಾತನಾಡಿದ ಪ್ರೊ ಕಬಡ್ಡಿ ಲೀಗ್‌ ಆಯುಕ್ತ ಅನುಪಮ್ ಗೋಸ್ವಾಮಿ "ಪಿಕೆಎಲ್ 10ನೇ ಆವೃತ್ತಿಯು ಲೀಗ್​ನಲ್ಲಿ ಸ್ಪರ್ಧೆಯ ಗುಣಮಟ್ಟ, ಅಭಿಮಾನಿಗಳು ಮತ್ತು ವೀಕ್ಷಕರ ಪಾಲ್ಗೊಳ್ಳುವಿಕೆಯು ಉತ್ತಮವಾಗಿದೆ. ಈ ಸೀಸನ್‌ನ ಪ್ಲೇ ಆಫ್ಸ್ ಮತ್ತು ಫಿನಾಲೆಗೆ ಹೈದರಾಬಾದ್‌‌ನಲ್ಲಿ ಕಬಡ್ಡಿ ಪ್ರೇಮಿಗಳಿಂದ ಅದ್ಭುತ ಬೆಂಬಲ ಸಿಗಲಿದೆ ಎಂಬ ನಂಬಿಕೆಯಿದೆ'' ಎಂದಿದ್ದಾರೆ.

ಎಲಿಮಿನೇಟರ್ಸ್ ಪಂದ್ಯಗಳು - ಫೆಬ್ರವರಿ 26

ಸೆಮಿಫೈನಲ್ ಪಂದ್ಯಗಳು - ಫೆಬ್ರವರಿ 28

ಫೈನಲ್ ಪಂದ್ಯ - ಮಾರ್ಚ್ 1

ಇದನ್ನೂ ಓದಿ:ಯುಪಿ ಯೋಧಾಸ್​ಗೆ ಗುದ್ದಿದ ಬುಲ್ಸ್​: 38-36 ಅಂಕಗಳಿಂದ ಮೊದಲ ಗೆಲುವು ಕಂಡ ಬೆಂಗಳೂರು

ABOUT THE AUTHOR

...view details