ಕರ್ನಾಟಕ

karnataka

ಉಕ್ರೇನ್​ ಬಂದರು ಪ್ರದೇಶದಲ್ಲಿ ರಷ್ಯಾ ಕ್ಷಿಪಣಿ ದಾಳಿ: ಐವರು ಸಾವು, 30 ಮಂದಿಗೆ ಗಾಯ - Russian Missile Attack

By ETV Bharat Karnataka Team

Published : May 1, 2024, 12:49 PM IST

ಉಕ್ರೇನ್​ ಬಂದರು ಪ್ರದೇಶವೊಂದರಲ್ಲಿ ರಷ್ಯಾ ಕ್ಷಿಪಣಿ ದಾಳಿ ನಡೆಸಿದ್ದು,ಇದರಲ್ಲಿ 5 ಜನ ಸಾವನ್ನಪ್ಪಿದ್ದಾರೆ.

ಉಕ್ರೇನ್​ ಬಂದರು ಪ್ರದೇಶದಲ್ಲಿ ರಷ್ಯಾ ಕ್ಷಿಪಣಿ ದಾಳಿ
ಉಕ್ರೇನ್​ ಬಂದರು ಪ್ರದೇಶದಲ್ಲಿ ರಷ್ಯಾ ಕ್ಷಿಪಣಿ ದಾಳಿ

ಒಡೆಸಾ (ಉಕ್ರೇನ್​): ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಆರಂಭವಾಗಿ 26 ತಿಂಗಳೇ ಗತಿಸಿವೆ. ಆದರೂ ಯುದ್ಧ ನಿಲ್ಲುವ ಲಕ್ಷಣಗಳು ಮಾತ್ರ ಗೋಚರಿಸುತ್ತಿಲ್ಲ. ಮೊತ್ತೊಮ್ಮೆ ರಷ್ಯಾ, ಉಕ್ರೇನ್​ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಇದರಲ್ಲಿ ಕನಿಷ್ಠ 5 ಜನ ಸಾವನ್ನಪ್ಪಿದ್ದು, 30 ಮಂದಿ ಗಾಯಗೊಂಡಿದ್ದಾರೆ ಎಂದು ಉಕ್ರೇನಿಯನ್ ಅಧಿಕಾರಿಗಳು ಖಚಿತಪಡಿಸಿದ್ದಾರೆ ಎಂದು ಸ್ಥಳೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಮಾಧ್ಯಮ ವರದಿಗಳ ಪ್ರಕಾರ, ಒಡೆಸಾದ ಬಂದರು ನಗರವಾದ ಬ್ಲಾಕ್​ ಸಿ ಪೋರ್ಟ್​ ಎಂಬ ಪ್ರದೇಶದಲ್ಲಿ ಕ್ಷಿಪಣಿ ದಾಳಿ ನಡೆದಿದೆ. ಕನಿಷ್ಠ ಐದು ಜನರು ಸಾವನ್ನಪ್ಪಿದ್ದು ಜತೆಗೆ ಹಲವಾರು ವಸತಿ ಕಟ್ಟಡಗಳು ಸೇರಿದಂತೆ ನಾಗರಿಕ ಮೂಲಸೌಕರ್ಯಗಳು ಹಾನಿಗೊಳಗಾಗಿವೆ ಎಂದು ತಿಳಿಸಿದೆ.

ಉಕ್ರೇನ್‌ನ ಪ್ರಾಸಿಕ್ಯೂಟರ್ ಜನರಲ್ ದಾಳಿಯ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ಸಮುದ್ರ ತೀರದಲ್ಲಿ ಒಂದರ ಹಿಂದೆ ಒಂದರಂತೆ ಹಲವಾರು ಸ್ಫೋಟಗಳು ಹೇಗೆ ನಡೆದವು ಎಂಬುದನ್ನು ಇದರಲ್ಲಿ ಕಾಣಬಹುದಾಗಿದೆ. ವರದಿಗಳ ಪ್ರಕಾರ, ರಷ್ಯಾದ ದಾಳಿಯಲ್ಲಿ ಧ್ವಂಸಗೊಂಡ ಕಟ್ಟಡಗಳ ಪೈಕಿ ಒಂದು ಶಿಕ್ಷಣ ಸಂಸ್ಥೆಯೂ ಸೇರಿದೆ ಎನ್ನಲಾಗಿದೆ.

ಇಸ್ಕಾಂಡರ್ ಬ್ಯಾಲಿಸ್ಟಿಕ್ ಕ್ಷಿಪಣಿಯಿಂದ ದಾಳಿ ನಡೆಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕ್ಷಿಪಣಿ ಅವಶೇಷಗಳು ಮತ್ತು ಲೋಹದ ತುಣುಕುಗಳನ್ನು ವಶಪಡಿಸಿಕೊಳ್ಳಲಾಗಿದೆ. ದುರಂತವೆಂದರೆ ದಾಳಿಯಲ್ಲಿ ಇಬ್ಬರು ಮಕ್ಕಳು ಸೇರಿ ಓರ್ವ ಗರ್ಭಿಣಿ ಗಾಯಗೊಂಡಿದ್ದಾಳೆ ಎಂದು ಪ್ರಾಸಿಕ್ಯೂಟರ್ ಜನರಲ್ ತಿಳಿಸಿದ್ದಾರೆ.

ಇದಲ್ಲದೇ, ದಾಳಿಯಿಂದ ಸುಮಾರು 20 ವಸತಿ ಕಟ್ಟಡಗಳು ಮತ್ತು ಪ್ರಮುಖ ಮೂಲ ಸೌಕರ್ಯಗಳಿಗೆ ಹಾನಿಯಾಗಿದೆ. ಇದರಿಂದ ಆ ಪ್ರದೇಶದಲ್ಲಿ ಜನ ಜೀವನ ಅಸ್ತವ್ಯಸ್ಥವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಮತ್ತೊಂದೆಡೆ ರಷ್ಯಾದ ಕ್ರಿಮಿಯಾದಲ್ಲಿ ಉಕ್ರೇನ್ ನಡೆಸಿದ ಕ್ಷಿಪಣಿ ಮತ್ತು ಡ್ರೋನ್ ದಾಳಿಯನ್ನು ತಡೆಯುವಲ್ಲಿ ರಷ್ಯಾದ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ:ಹೆದ್ದಾರಿ ಕುಸಿದು ಚೀನಾದಲ್ಲಿ 19 ಮಂದಿ ಸಾವು: 30ಕ್ಕೂ ಹೆಚ್ಚು ಮಂದಿಗೆ ಗಾಯ - China Highway Collapse

ABOUT THE AUTHOR

...view details