ಕರ್ನಾಟಕ

karnataka

ದೇಶದ ಮೇಲೆ ಹೆಚ್ಚುತ್ತಿದೆ ಎನ್​ಸಿಡಿ ರೋಗಗಳ ಹೊರೆ; ಕಾರಣ ಇದು - A RISING TREND OF DISEASES

By ETV Bharat Karnataka Team

Published : Apr 13, 2024, 5:18 PM IST

ಭಾರತದಲ್ಲಿ ಯುವ ಜನತೆ ಆರೋಗ್ಯದ ಮೇಲೆ ಅನಾರೋಗ್ಯದ ಹೊರೆ ಹೆಚ್ಚಳ ಕಾಣುತ್ತಿದೆ. ಎನ್​ಸಿಡಿ ರೋಗಗಳ ಪ್ರಕರಣಗಳು ಏರಿಕೆ ಕಂಡಿವೆ.

surging cases of diseases in India
surging cases of diseases in India

ನವದೆಹಲಿ: ಜೀವನದಲ್ಲಿ ಹೆಚ್ಚುತ್ತಿರುವ ಒತ್ತಡ ಮತ್ತು ಜಡತ್ವ ಜೀವನಶೈಲಿ ಜೊತೆಗೆ ಜಂಕ್​ಫುಡ್​​, ಧೂಮಪಾನ, ತಂಬಾಕು ಮತ್ತು ಆಲ್ಕೋಹಾಲ್​ ಸೇವನೆಯು ದೇಶದಲ್ಲಿ ರೋಗದ ಹೊರೆಯ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.

ಭಾರತದಲ್ಲಿ ಮೂರರಲ್ಲಿ ಒಬ್ಬರು ಪೂರ್ವ ಮಧುಮೇಹ ಹೊಂದಿದ್ದು, ಮೂರರಲ್ಲಿ ಎರಡು ಮಂದಿ ಪೂರ್ವ ಅಧಿಕ ರಕ್ತದೊತ್ತಡ ಮತ್ತು 10ರಲ್ಲಿ ಒಂದು ಮಂದಿ ಖಿನ್ನತೆಯಿಂದ ಬಳಲುತ್ತಿರುತ್ತಾರೆ ಎಂಬುದು ಇತ್ತೀಚಿನ ಅಪೋಲೋ ಆಸ್ಪತ್ರೆಯ ಹೆಲ್ತ್​​ ಆಫ್​ ನೇಷನ್​​ ವರದಿಯಲ್ಲಿ ಪ್ರಕಟವಾಗಿದೆ.

ಸಾಂಕ್ರಾಮಿಕೇತರ ಸೋಂಕುಗಳಾದ (ಎನ್​ಸಿಡಿ) ಕ್ಯಾನ್ಸರ್​​​, ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ರಕ್ತನಾಳ ರೋಗ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳು ಗಂಭೀರ ಮಟ್ಟದಲ್ಲಿ ಹೆಚ್ಚಿದ್ದು, ಇದು ರಾಷ್ಟ್ರೀಯ ಆರೋಗ್ಯದ ವಿಚಾರ ಕುರಿತು ಎಚ್ಚರಿಕೆಯನ್ನು ನೀಡುತ್ತಿದೆ.

ಭಾರತದಲ್ಲಿ 1.4 ಬಿಲಿಯನ್​ ಜನರು ಗಂಭೀರ ಆರೋಗ್ಯ ಸಮಸ್ಯೆಗಳಾದ ಅಂದರೆ, ಫ್ಯಾಟಿ ಲಿವರ್​ ಸಮಸ್ಯೆ, ಸ್ಥೂಲಕಾಯ, ಮಧುಮೇಹ, ಅಪಧಮನಿ ರೋಗಗಳನ್ನು ಯುವ ಜನತೆಯನ್ನು ಕಾಣಬಹುದಾಗಿದೆ. ಸಮಾಜದ ಪ್ರತಿಯೊಂದು ವರ್ಗದ ಮೇಲೆ ಅನೇಕ ಅಂಗಗಳ ಮಾರಣಾಂತಿಕತೆ ಸಮಸ್ಯೆ ಪರಿಣಾಮ ಕಾಣಬಹುದಾಗಿದೆ, ಯುವ ಪೀಳಿಗೆಯಲ್ಲಿ ಹೃದಯಾಘಾತ ಮತ್ತು ಪಾರ್ಶ್ವವಾಯು ಪ್ರಕರಣಗಳು ಆತಂಕಕಾರಿ ಆಗಿದ್ದು, ಆರೋಗ್ಯದ ಪ್ರವೃತ್ತಿಗಳು ಬದಲಾಗುತ್ತಿರುವುದು ಹೆಚ್ಚು ಸ್ಪಷ್ಟವಾಗಿದೆ ಎಂದು ಶ್ರೀ ಗಂಗಾ ರಾಮ್​ ಆಸ್ಪತ್ರೆಯ ಗ್ಯಾಸ್ಟ್ರೊಎಟರ್ನಾಲಾಜಿ ಮುಖ್ಯಸ್ಥ ಡಾ ಅನಿಲ್​ ಆರೋರಾ ತಿಳಿಸಿದ್ದಾರೆ.

ಒತ್ತಡದ ಜೀವನ ಮತ್ತು ಜಡತ್ವದ ಜೀವನ ಶೈಲಿಯ ಸಂಯೋಜನೆಯು ಹೊಸ ಅನಾರೋಗ್ಯ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ. ಅದರಲ್ಲೂ ಇದು ಯುವಜನತೆಯಲ್ಲಿ ಈ ಹೊರೆ ಹೆಚ್ಚು ಕಾಣುತ್ತಿರುವುದಾಗಿ ವಿವರಿಸಿದ್ದಾರೆ. ಜೀವನಶೈಲಿಯ ಮಾರ್ಪಾಡಣೆಯು ಯುವ ಪೀಳಿಗೆಯನ್ನು ಹೆಚ್ಚೆಚ್ಚು ರೋಗಕ್ಕೆ ಒಡ್ಡಿಕೊಳ್ಳುವಂತೆ ಮಾಡಿದೆ ಎಂದು ಸೋಂಕು ರೋಗ ತಜ್ಞ ಡಾ ಈಶ್ವರ್​​ ಗಿಲಡ್​ ತಿಳಿಸಿದ್ದಾರೆ.

ನಮ್ಮ ಯುವ ಜನತೆ ಜಂಕ್​ ಆಹಾರ, ಧೂಮಪಾನ, ತಂಬಾಕು ಮತ್ತು ಆಲ್ಕೋಹಾಲ್​ ಸೇವನೆಗೆ ಒಳಗಾಗುವ ಮೂಲಕ ರೋಗಗಳನ್ನು ಆಹ್ವಾನಿಸುತ್ತಿದ್ದಾರೆ. ಜೊತೆಗೆ ಹೆಚ್ಚುತ್ತಿರುವ ವರ್ಕ್​ ಫ್ರಂ ಹೋಮ್​ ಸಂಸ್ಕೃತಿ ಕೂಡ ಇದರ ಹಿಂದೆ ಪರೋಕ್ಷವಾಗಿ ಪರಿಣಾಮ ಹೊಂದಿದೆ ಎಂದರು.

ಕೋವಿಡ್​ 19 ಬಳಿಕವು ಇಂದಿಗೂ ಅನೇಕ ಸಂಸ್ಥೆಗಳಲ್ಲಿ ಮನೆಯಿಂದ ಕೆಲಸ ಮಾಡುವ ಪದ್ಧತಿ ಮುಂದುವರೆದಿದೆ. ಇದನ್ನು ನಿಲ್ಲಿಸಬೇಕಿದೆ. ಕಾರಣ ಜನರು ಮನೆಯಿಂದ ಕೆಲಸ ಮಾಡಿದುವಾಗ ಯಾವುದೇ ವ್ಯಾಯಾಮ ಅಥವಾ ವಾಕ್​ನಂತಹ ಚಟುವಟಿಕೆ ನಡೆಸುವುದಿಲ್ಲ. ಇದು ಕೂಡ ಸಮಸ್ಯೆಗೆ ಕಾರಣವಾಗುತ್ತದೆ ಎಂದರು.

ಜನರು ತಮ್ಮ ಆರೋಗ್ಯ ಜವಾಬ್ದಾರಿಯನ್ನು ತಾವೇ ನಡೆಸಬೇಕಿದೆ. ಪ್ರತಿಯೊಬ್ಬರು ಅವರ ಆರೋಗ್ಯದ ಬಗ್ಗೆ ಹೊಣೆಗಾರಿಕೆ ಹೊಂದಬೇಕು. ಈ ಬಗ್ಗೆ ಸರ್ಕಾರ ಅಥವಾ ಸಂಘಟನೆಗಳ ಮೇಲೆ ಅವಲಂಬಿಸಬಾರದು. ತಂಬಾಕು ಅಭ್ಯಾಸಗಳನ್ನು ನಿಲ್ಲಿಸಬೇಕು. ಧೂಮಪಾನವನ್ನು ತ್ಯಜಿಸಬೇಕು, ಆಲ್ಕೊಹಾಲ್ ಸೇವನೆ ನಿಲ್ಲಿಸಬೇಕು. ಸರಿಯಾದ ಆಹಾರ ಮತ್ತು ವ್ಯಾಯಾಮಗಳೊಂದಿಗೆ ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸಬೇಕು ಎಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ:ನೀವು ಸಮುದ್ರಾಹಾರ ಪ್ರಿಯರೇ? ಹಾಗಾದ್ರೆ ಈ ಬಗ್ಗೆ ತಿಳಿಯಿರಿ

ABOUT THE AUTHOR

...view details