ETV Bharat / health

ನೀವು ಸಮುದ್ರಾಹಾರ ಪ್ರಿಯರೇ? ಹಾಗಾದ್ರೆ ಈ ಬಗ್ಗೆ ತಿಳಿಯಿರಿ - Risk of Seafood

author img

By ETV Bharat Karnataka Team

Published : Apr 13, 2024, 12:05 PM IST

ಸಮುದ್ರಾಹಾರಗಳು ಕಡಿಮೆ ಕೊಬ್ಬು ಮತ್ತು ಪೌಷ್ಟಿಕಾಂಶ ಹೊಂದಿರುವ ಆಹಾರ ಎಂದು ಯಥೇಚ್ಛವಾಗಿ ಸೇವಿಸುವ ಮುನ್ನ ಜಾಗೃತೆ ವಹಿಸುವುದು ಅಗತ್ಯ ಎನ್ನುತ್ತಾರೆ ತಜ್ಞರು.

eating seafood lot can risk of exposure to a group of industrial chemicals
eating seafood lot can risk of exposure to a group of industrial chemicals

ನವದೆಹಲಿ: ಒಮೆಗಾ-3 ಪೌಷ್ಟಿಕಾಂಶ ವೃದ್ಧಿಗೆ ಸಮುದ್ರ ಆಹಾರಗಳು ಅತ್ಯುತ್ತಮ. ಅದರಲ್ಲೂ ಲೊಬಸ್ಟರ್​, ಸಿಗಡಿ, ಟ್ಯೂನದಂತಹ ಸಮುದ್ರಾಹಾರವನ್ನು ಸೇರಿಸುವುದರಿಂದ ದೇಹಕ್ಕೆ ಅಗತ್ಯವಾದ ಒಮೆಗಾ -3 ಮಟ್ಟವನ್ನು ಹೆಚ್ಚಿಸಬಹುದು. ಆದರೆ, ಇವುಗಳನ್ನು ಯಥೇಚ್ಛವಾಗಿ ತಿನ್ನುವುದು ಕೂಡ ಅಪಾಯಕಾರಿ. ಇವುಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಕೈಗಾರಿಕ ರಾಸಾಯನಿಕಗಳಾದ ಪರ್ ಮತ್ತು ಪಾಲಿ ಫ್ಲೋರೋಅಲ್ಕೈಲ್ ಪದಾರ್ಥಗಳ ಗುಂಪಿಗೆ ಒಡ್ಡಿಕೊಳ್ಳುವ ಸಾಧ್ಯತೆ ಇದೆ. ಇವುಗಳನ್ನು ಶಾಶ್ವತ ರಾಸಾಯನಿಕ ಎಂದು ಕರೆಯಲಾಗುತ್ತದೆ.

ಯುಕೆಯ ಡಾರ್ಟ್​ಮೌತ್​ ಕಾಲೇಜಿನ ತಜ್ಞರು ಈ ಸಂಬಂಧ ಅಧ್ಯಯನ ಮಾಡಿದ್ದಾರೆ. ಸಮುದ್ರಾಹಾರಗಳನ್ನು ಸೇವಿಸುವ ಸುರಕ್ಷಾ ಮಾರ್ಗಸೂಚಿಯನ್ನು ತಿಳಿಸಿದ್ದಾರೆ. ಅದರ ಅನುಸಾರ ಪಿಎಫ್​ಎಎಸ್​​ ಮತ್ತು ಪಾದರಸ ಇತರೆ ಮಾಲಿನ್ಯಕಾರಕ ಇಲ್ಲದ ಆಹಾರ ಸೇವನೆಗೆ ಒತ್ತು ನೀಡಬೇಕಿದೆ. ಈ ಮೂಲಕ ಸಮುದ್ರಾಹಾರ ಸುರಕ್ಷಾ ಸೇವನೆಯ ಮೂಲಕ ಸಾರ್ವಜನಿಕ ಆರೋಗ್ಯ ಮಾರ್ಗಸೂಚಿಯನ್ನು ಸ್ಥಾಪಿಸುವ ಅಗತ್ಯವನ್ನು ಒತ್ತಿ ಹೇಳಿದ್ದಾರೆ

ಸಮುದ್ರಾಹಾರಗಳು ಲೀನ್​ ಪ್ರೋಟಿನ್​ ಮತ್ತು ಒಮೆಗಾ ಫ್ಯಾಟಿ ಆ್ಯಸಿಡ್​​ನ ಮೂಲವಾಗಿವೆ. ಆದರೆ, ಇದರ ಯಥೇಚ್ಛ ಸೇವನೆಯಿಂದ ಪಿಎಫ್​ಎಎಸ್​​ಗೆ ಒಡ್ಡಿಕೊಳ್ಳುವ ಸಾಧ್ಯತೆ ಇದೆ​​ ಎಂದು ಅಧ್ಯಯನದ ಲೇಖಕರಾದ ಮೇಗನ್​ ರೊಮಾನೊ ತಿಳಿಸಿದ್ದಾರೆ.

ಸಮುದ್ರಾಹಾರ ಸೇವನೆಯನ್ನು ತಮ್ಮ ಡಯಟ್​ನಲ್ಲಿ ಸೇರಿಸುವ ನಿರ್ಧಾರ ಜನರಿಗೆ ಬಿಟ್ಟಿದ್ದು, ಇದರ ಅಪಾಯದ ಕುರಿತು ಅರಿಯಬೇಕಿದೆ. ವಿಶೇಷವಾಗಿ ಗರ್ಭಿಣಿಯರು ಮತ್ತು ಮಕ್ಕಳು, ದುರ್ಬಲ ಜನರ ಪರಿಣಾಮವನ್ನು ಗಮನಿಸುವುದು ಅಗತ್ಯವಾಗಿದೆ.

ಅಧ್ಯಯನ ತಂಡವು ಜನರು ಹೆಚ್ಚು ಸೇವಿಸುವ ಸಮುದ್ರಾಹಾರ ಮಾದರಿಗಳಲ್ಲಿ 26 ವಿಧದ ಎಫ್​ಎಎಸ್​ಎಎಸ್​ ಅನ್ನು ಮಾಪನ ಮಾಡಿದೆ. ಆ ಸಮುದ್ರಾಹಾರಗಳು ಪ್ರಮುಖವಾಗಿ ಕಾಡ್, ಹ್ಯಾಡಾಕ್, ನಳ್ಳಿ, ಸಾಲ್ಮನ್, ಸ್ಕಲ್ಲಪ್, ಸಿಗಡಿ ಮತ್ತು ಟ್ಯೂನ. ಈ ಅಧ್ಯಯನವನ್ನು ಎಕ್ಸ್​ಪೋಸರ್​ ಮತ್ತು ಹೆಲ್ತ್​ನಲ್ಲಿ ಪ್ರಕಟಿಸಲಾಗಿದೆ. ಸಿಗಡಿ ಮತ್ತು ಲೊಬಸ್ಟರ್​​ ಅತಿ ಹೆಚ್ಚಿನ ಸಾಂದ್ರತೆಯನ್ನು ಹೊಂದಿದೆ ಎಂದು ಅಧ್ಯಯನ ತಿಳಿಸಿದೆ.

ಪಿಎಫ್​ಎಎಸ್​​ ಕಾಲ ಕಳೆದಂತೆ ನಿಧಾನವಾಗಿ ಹರಡುತ್ತದೆ. ಇದು ಪರಿಸರದಲ್ಲಿ ಸಾವಿರಾರು ವರ್ಷಗಳ ಕಾಲ ಉಳಿಯಬಹುದು. ಇದು ಜನರು, ವನ್ಯ ಜೀವಿ ಮತ್ತು ಪರಿಸರಕ್ಕೆ ಹಾನಿ ಉಂಟು ಮಾಡಬಹುದು. ಇದರ ಯಥೇಚ್ಛ ಸೇವನೆ ಮಾನ್ಯತೆ ಕ್ಯಾನ್ಸರ್, ಭ್ರೂಣದ ಅಸಹಜತೆಗಳು, ಅಧಿಕ ಕೊಲೆಸ್ಟ್ರಾಲ್ ಮತ್ತು ಥೈರಾಯ್ಡ್, ಯಕೃತ್ತು ಮತ್ತು ಸಂತಾನೋತ್ಪತ್ತಿ ಅಸ್ವಸ್ಥತೆಗಳ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನಗಳು ತೋರ್ಪಡಿಸಿವೆ. (ಐಎಎನ್​ಎಸ್​)

ಇದನ್ನೂ ಓದಿ: ಪ್ರೋಟಿನ್‌ ಪೂರಕ​ಗಳ ಸೇವನೆಯಿಂದ ಗಂಭೀರ ಆರೋಗ್ಯ ಸಮಸ್ಯೆಗೆ ಗುರಿಯಾದೆ: ಸ್ನಾಪ್​ಡೀಲ್​ ಸಹ ಸಂಸ್ಥಾಪಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.