ಕರ್ನಾಟಕ

karnataka

ಮೆಕ್ಸಿಕೋ ಚಿತ್ರೋತ್ಸವದಲ್ಲಿ ಬಿಗ್​ ಬಾಸ್​ ವಿಜೇತ ಕಾರ್ತಿಕ್ ನಟನೆಯ 'ಡೊಳ್ಳು' ಪ್ರದರ್ಶನ

By ETV Bharat Karnataka Team

Published : Feb 28, 2024, 3:23 PM IST

ಮೆಕ್ಸಿಕೋದಲ್ಲಿ ನಡೆಯಲಿರುವ ಚಿತ್ರೋತ್ಸವದಲ್ಲಿ 'ಡೊಳ್ಳು' ಸಿನಿಮಾ ಪ್ರದರ್ಶನ ಕಾಣಲಿದೆ.

'Dollu' movie at Mexico Film Festival
ಮೆಕ್ಸಿಕೋ ಚಿತ್ರೋತ್ಸವದಲ್ಲಿ 'ಡೊಳ್ಳು' ಸಿನಿಮಾ

ಪವನ್ ಒಡೆಯರ್ ನಿರ್ಮಾಣದ ಮೊದಲ ಸಿನಿಮಾ 'ಡೊಳ್ಳು' ಈಗಾಗಲೇ ಪ್ರಪಂಚಕ್ಕೆ ಒಂದು ಸುತ್ತು ಹೊಡೆದಿದೆ. ಪ್ರತಿಷ್ಟಿತ ಬರ್ಲಿನ್ ಅಂತಾರಾಷ್ಟ್ರೀಯ ಚಿತ್ರೋತ್ಸವ, ಅಂತಾರಾಷ್ಟ್ರೀಯ ಢಾಕಾ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿರುವ ಈ ಸಿನಿಮಾ, ಎರಡು ರಾಷ್ಟ್ರಪ್ರಶಸ್ತಿಗಳನ್ನೂ ಗೆದ್ದುಕೊಂಡಿದೆ. ಇದೀಗ ಚಿತ್ರ ಮತ್ತೊಂದು ಅಂತಾರಾಷ್ಟ್ರೀಯ ಮನ್ನಣೆಗೆ ಭಾಜನವಾಗುತ್ತಿದೆ.

ಮೆಕ್ಸಿಕೋದಲ್ಲಿ ನಡೆಯಲಿರುವ ಚಿತ್ರೋತ್ಸವದಲ್ಲಿ ಡೊಳ್ಳು ಪ್ರದರ್ಶನ ಕಾಣಲಿದೆ. ಆಸ್ಕರ್ ಪ್ರಶಸ್ತಿ ಗೆದ್ದಿರುವ ಎಸ್.ಎಸ್.ರಾಜಮೌಳಿ ನಿರ್ದೇಶನದ ಬ್ಲಾಕ್​ಬಸ್ಟರ್ ಸಿನಿಮಾ ಆರ್​ಆರ್​ಆರ್,​ ದೀಪಿಕಾ ಪಡುಕೋಣೆ ಹಾಗೂ ರಣ್​ಬೀರ್​​​ ಸಿಂಗ್ ನಟನೆಯ ಬಾಜಿರಾವ್ ಮಸ್ತಾನಿ, ಸೂರ್ಯ ನಟನೆಯ ಸೂರರೈ ಪೊಟ್ರು, ಅಜಯ್ ದೇವಗನ್ ನಟನೆಯ ತನ್ಹಾಜಿ ಚಿತ್ರಗಳೊಂದಿಗೆ ಕನ್ನಡದ 'ಡೊಳ್ಳು' ಕೂಡ ಪ್ರದರ್ಶನ ಕಾಣುತ್ತಿದೆ.

'ಡೊಳ್ಳು' ಶೀರ್ಷಿಕೆಯೇ ಹೇಳುವಂತೆ ಡೊಳ್ಳು ಕುಣಿತದ ಸುತ್ತ ಹಾಗೂ ಕನ್ನಡ ನಾಡಿದ ಜಾನಪದ ಸೊಗಡು ಆಧರಿಸಿದ ಕಥೆ. ಸಾಗರ್ ಪುರಾಣಿಕ್ ನಿರ್ದೇಶನದಲ್ಲಿ ಮೂಡಿಬಂದಿದ್ದ ಈ ಚಿತ್ರದಲ್ಲಿ ಕಾರ್ತಿಕ್ ಮಹೇಶ್, ನಿಧಿ ಹೆಗ್ಡೆ ನಟಿಸಿದ್ದಾರೆ. ಬಾಬು ಹಿರಣ್ಣಯ್ಯ, ಚಂದ್ರ ಮಯೂರ್, ಶರಣ್ಯ ಸುರೇಶ್ ಸೇರಿದಂತೆ ಹಲವು ಕಲಾವಿದರು ಸಿನಿಮಾದ ಭಾಗವಾಗಿದ್ದಾರೆ.

ಸ್ಯಾಂಡಲ್​ವುಡ್​ನಲ್ಲಿ ಹಲವು ಯಶಸ್ವಿ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ಪವನ್ ಒಡೆಯರ್ ತಮ್ಮದೇ ಹೋಂ ಬ್ಯಾನರ್ ಒಡೆಯರ್ ಮೂವೀಸ್​ನಲ್ಲಿ ಪತ್ನಿ ಅಪೇಕ್ಷಾ ಜೊತೆಗೂಡಿ ಡೊಳ್ಳು ಸಿನಿಮಾ ನಿರ್ಮಾಣ ಮಾಡಿದ್ದಾರೆ. ನಿರ್ದೇಶಕ ಪವನ್ ಒಡೆಯರ್ ಅವರು ಗೂಗ್ಲಿ, ರಣವಿಕ್ರಮ, ನಟಸಾರ್ವಭೌಮ ಸೇರಿದಂತೆ ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ನಿರ್ದೇಶನ, ಬರವಣಿಗೆಯ ಜೊತೆಗೆ ನಿರ್ಮಿಸಿರುವ ಮೊದಲ ಚಿತ್ರದ ಮೂಲಕವೇ ಪವನ್ ಸಂಚಲನ ಸೃಷ್ಟಿಸಿದ್ದಾರೆ.

ಇದನ್ನೂ ಓದಿ:'ಕ್ಯಾಂಡಿ ಕ್ರಷ್' ಸೆಟ್‌ನಲ್ಲಿ ಚಂದನ್ ಶೆಟ್ಟಿ-ನಿವೇದಿತಾ ಗೌಡ ವಿವಾಹ ವಾರ್ಷಿಕೋತ್ಸವ

ಚಿತ್ರರಂಗದಲ್ಲಿ ಹೊಸತನ ಮೂಡುತ್ತಿದೆ. ವಿವಿಧ ಪ್ರಕಾರಗಳ ಚಿತ್ರಗಳು ಯಶಸ್ಸು ಕಾಣುತ್ತಿವೆ. ಮಾಸ್​ ಆ್ಯಕ್ಷನ್​ ಸಿನಿಮಾ ಜೊತೆ ಜೊತೆಗೆ ಕಂಟೆಂಟ್​​​ ಆಧಾರಿತ ಚಿತ್ರಗಳೂ ಕೂಡ ಪ್ರೇಕ್ಷಕರ ಗಮನ ಸೆಳೆಯುತ್ತಿವೆ. ಕಂಟೆಂಟ್​ಗೆ ವೀಕ್ಷಕರು ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ. 2021ರಲ್ಲಿ ತೆರೆಕಂಡ ಈ ಚಿತ್ರ ಯಶಸ್ವಿಯಾಗಿ ಹಲವು ಪ್ರತಿಷ್ಟಿತ ಪ್ರಶಸ್ತಿಗಳಿಗೆ ಭಾಜನವಾಗಿದೆ.

ಇದನ್ನೂ ಓದಿ:ಅನೂಪ್ ರೇವಣ್ಣ ನಟನೆಯ 'ಹೈಡ್ ಅಂಡ್ ಸೀಕ್‌' ಟ್ರೇಲರ್​ ಅನಾವರಣಗೊಳಿಸಿದ ರಾಮಲಿಂಗಾರೆಡ್ಡಿ

ABOUT THE AUTHOR

...view details