ಕರ್ನಾಟಕ

karnataka

ಮಲ್ಪೆ ಬಂದರಿನಲ್ಲಿ ರಕ್ಕಸ ಗಾತ್ರದ ಮೀನು ಬಲೆಗೆ... ಮಾರಾಟವಾಗಿದ್ದು ಎಷ್ಟಕ್ಕೆ ಗೊತ್ತಾ!?

By

Published : May 11, 2019, 11:06 PM IST

Updated : May 11, 2019, 11:35 PM IST

ಮಲ್ಪೆ ಬಂದರಿನಲ್ಲಿ ಭಾರೀ ಗಾತ್ರದ ಅಪರೂಪದ ಮೀನು ಬಲೆಗೆ ಸಿಲುಕಿದೆ. ಆಳ ಸಮುದ್ರ ಮೀನುಗಾರಿಕೆ ನಡೆಸುವ ದಿವ್ಯಾಂಶಿ ಎಂಬ ಹೆಸರಿನ ಬೋಟಿಗೆ ಇಂದು ಬಂಪರ್ ಡ್ರಾ ಹೊಡೆದಿದೆ. ಬಲೆಗೆ ಸಿಕ್ಕ ತೊರಕೆ ಜಾತಿಯ ರಕ್ಕಸ ಗಾತ್ರದ ಮೀನು ಬರೋಬ್ಬರಿ 1200 ಕೆಜಿಗೂ ಅಧಿಕ ಭಾರವಿದೆ. ಮಿಥುನ್ ಕುಂದರ್ ಈ ಬೋಟಿನ ಮಾಲೀಕರು. ಕ್ರೈನ್​ ಸಹಾಯದಿಂದ ಎತ್ತಿ ಮಲ್ಪೆ ಬಂದರಿಗೆ ಸಾಗಿಸಲಾಯ್ತು. ಉಡುಪಿಯ ಮಾರುಕಟ್ಟೆಗೆ ಈ ಮೀನು ಸೇಲ್ ಆಗಿದೆ. ಭಾರೀ ಗಾತ್ರದ ಮೀನನ್ನು ಕತ್ತರಿಸಿ ಕೆಜಿಗೆ 50 ರೂಪಾಯಿಯಂತೆ ಮಾರಾಟ ಮಾಡಲಾಯಿತು. ಈ ಒಂದು ಮೀನಿನ ಬೆಲೆ ಅಂದಾಜು 60 ಸಾವಿರ ಇರಬಹುದು ಎಂದು ಅಂದಾಜಿಸಲಾಗಿದೆ.
Last Updated :May 11, 2019, 11:35 PM IST

TAGGED:

ABOUT THE AUTHOR

...view details