ಕರ್ನಾಟಕ

karnataka

74ನೇ ಗಣರಾಜ್ಯೋತ್ಸವ: ರಾಷ್ಟ್ರಧ್ವಜಕ್ಕೆ ಸೆಲ್ಯೂಟ್​ ಹೊಡೆದ ದೇವಸ್ಥಾನದ ಆನೆ

By

Published : Jan 26, 2023, 9:41 PM IST

Updated : Feb 3, 2023, 8:39 PM IST

ತಿರುನಲ್ವೇಲಿ (ತಮಿಳುನಾಡು): ಇಂದು 74ನೇ ಗಣರಾಜ್ಯೋತ್ಸವವನ್ನು ದೇಶದೆಲ್ಲೆಡೆ ಅದ್ಧೂರಿಯಾಗಿ ಆಚರಿಸಲಾಗಿದೆ. ಹಾಗೆಯೇ  ತಮಿಳುನಾಡಿನಲ್ಲಿ ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ದೇವಾಲಯಗಳು ಗಣರಾಜ್ಯೋತ್ಸವವನ್ನು ದೇವಾಲಯಗಳ ನಿಯಮದಂತೆ ಆಚರಿಸಿದವು.

ಇಲ್ಲಿನ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ತಿರುನಲ್ವೇಲಿ ನೆಲ್ಲೈಯಪ್ಪರ್ ದೇವಾಲಯದಲ್ಲಿ 74ನೇ ಗಣರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ದೇವಸ್ಥಾನದ ಮುಂಭಾಗದಲ್ಲಿ ದೇವಾಲಯದ ಆಡಳಿತಾಧಿಕಾರಿ ಅಯ್ಯರ್​ ಶಿವಮಣಿ ಧ್ವಜಾರೋಹಣ ನೆರವೇರಿಸಿದರು.

ಈ ವೇಳೆ ಧ್ವಜಾರೋಹಣದಲ್ಲಿ ಭಾಗವಹಿಸಿದ್ದ ದೇವಾಲಯ ಗಾಂಧಿಮತಿ ಎಂಬ ಆನೆಯು ತನ್ನ ಸೊಂಡಿಲಿನ ಮೂಲಕ ರಾಷ್ಟ್ರ ಧ್ವಜಕ್ಕೆ ಸೆಲ್ಯೂಟ್​ ಹೊಡೆದು ಗಮನಸೆಳೆಯಿತು. ಬಳಿಕ ದೇವಸ್ಥಾನದ ಅರ್ಚಕರು ರಾಷ್ಟ್ರಧ್ವಜಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ  ಜನರಿಗೆ ಸಿಹಿ ತಿಂಡಿ ವಿತರಿಸಲಾಯಿತು.

ಇದನ್ನೂ ನೋಡಿ :Watch.. ಶ್ರೀನಗರದ ಲಾಲ್​ಚೌಕ್​ ಕ್ಲಾಕ್​ ಟವರ್​ ಮೇಲೆ ಹಾರಾಡಿದ ತ್ರಿವರ್ಣ ಧ್ವಜ​

Last Updated : Feb 3, 2023, 8:39 PM IST

ABOUT THE AUTHOR

...view details