ಕರ್ನಾಟಕ

karnataka

ಮೊದಲ ದಿನದ ವಿಧಾನಸಭಾ ಅಧಿವೇಶನ: ಎತ್ತಿನ ಗಾಡಿಯಲ್ಲಿ ಆಗಮಿಸಿದ ನೂತನ ಶಾಸಕರು- ವಿಡಿಯೋ

By

Published : May 22, 2023, 12:53 PM IST

ಎತ್ತಿನ ಗಾಡಿಯಲ್ಲಿ ಬಂದ ನೂತನ ಶಾಸಕರು

ಬೆಂಗಳೂರು: ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರುವ ವಿಧಾನಸಭೆ ಅಧಿವೇಶನದಲ್ಲಿ ಭಾಗವಹಿಸಲು ಕಾಂಗ್ರೆಸ್​​ನ ಕೆಲ ನೂತನ ಶಾಸಕರು ಎತ್ತಿಗಾಡಿ ಮೂಲಕ ವಿಧಾನಸೌಧಕ್ಕೆ ಆಗಮಿಸಿ ಗಮನ ಸೆಳೆದರು. 'ಮಣ್ಣಿನ ಮಕ್ಕಳು ವಿಧಾನಸೌಧಕ್ಕೆ ಪ್ರವೇಶಿಸುತ್ತಿದ್ದಾರೆ. ರೈತ ಪರ ಸರ್ಕಾರ ರಚನೆಯಾಗಿದೆ' ಎನ್ನುವುದಕ್ಕೆ ಸಾಂಕೇತಿಕವಾಗಿ ಎತ್ತಿನ ಗಾಡಿ ರೈಡ್ ಮಾಡಿದರು.

ಮಂಡ್ಯ ಕಾಂಗ್ರೆಸ್ ಶಾಸಕ ರವಿಕುಮಾರ್ ಗೌಡ ಗಾಣಿಗ ಸೇರಿದಂತೆ ಹಲವು ಶಾಸಕರು ವಿಧಾನಸೌಧದ ಕೆಂಗಲ್ ಗೇಟ್ ದ್ವಾರದ ಮುಖ್ಯ ಗೇಟ್ ಮೂಲಕ ಪಶ್ಚಿಮ ದ್ವಾರಕ್ಕೆ ಎತ್ತಿನ ಗಾಡಿಯಲ್ಲಿ ಆಗಮಿಸಿದರು. ಈ ಹಿಂದೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ಖಂಡಿಸಿ ಕಾಂಗ್ರೆಸ್ ನಾಯಕರು ಅಧಿವೇಶನದಲ್ಲಿ ಭಾಗವಹಿಸಲು ಎತ್ತಿನ ಬಂಡಿಯಲ್ಲಿ ವಿಧಾನಸೌಧ ಪ್ರವೇಶಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ವಿಧಾನಸೌಧದ ಮೆಟ್ಟಿಲಿಗೆ ನಮಸ್ಕಾರ ಮಾಡಿದ ನೂತನ ಶಾಸಕಿ ಭಾಗೀರತಿ ಮುರಳ್ಯ ವಿಧನಸೌಧ ಪ್ರವೇಶಕ್ಕೆ ಮುಂದಾದರು. ಇದೇ ವೇಳೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದು ನಂತರ ವಿಧಾನಸೌಧ ಪ್ರವೇಶ ಮಾಡಿದರು. ಇವರ ಜತೆ ಸದನಕ್ಕೆ ಆಗಮಿಸುತ್ತಿರುವ ನೂತನ ಶಾಸಕರು ಸಹ ಮೆಟ್ಟಿಲಿಗೆ ನಮಸ್ಕಾರ ಮಾಡಿ ವಿಧಾನಸೌಧ ಪ್ರವೇಶ ಮಾಡಿದರು.

ಇದನ್ನೂ ಓದಿ:ನಾಳೆಯಿಂದ 3 ದಿನ ಕರ್ನಾಟಕ ವಿಧಾನಸಭೆ ಅಧಿವೇಶನ

ABOUT THE AUTHOR

...view details