ಕರ್ನಾಟಕ

karnataka

ಡಿಕೆ ಶಿವಕುಮಾರ್ ಅವರೊಂದಿಗಿನ ನನ್ನ ಸಂಬಂಧ ಸೌಹಾರ್ದಯುತವಾಗಿದೆ: ಸಿದ್ದರಾಮಯ್ಯ

By

Published : Apr 8, 2023, 9:28 AM IST

Updated : Apr 8, 2023, 9:34 AM IST

ಸಿದ್ದರಾಮಯ್ಯ

ಬೆಂಗಳೂರು: ನನ್ನ ಹುಟ್ಟೂರು ವರುಣಾ ಕ್ಷೇತ್ರ ವ್ಯಾಪ್ತಿಗೆ ಬರುವ ಕಾರಣ ನಾನು ಈ ಬಾರಿಯ ವಿಧಾನಸಭ ಚುನಾವಣೆಗೆ ವರುಣಾ ದಿಂದಲೇ ಸ್ಪರ್ಧೆ ಮಾಡಲಿದ್ದೇನೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿರುವ ಅವರು, ಇದು ನನ್ನ ಕೊನೆಯ ಚುನಾವಣೆಯಾಗಿದೆ. ಅಲ್ಲದೇ ನಾನು ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಹೊರತು ರಾಜಕೀಯದಿಂದ ಅಲ್ಲ ಎಂದು ಸಿದ್ದರಾಮಯ್ಯ ಹೇಳಿದರು. 

ಮುಂದುವರಿದು ಮಾತನಾಡಿ, ಮೀಸಲಾತಿ ಮರು ವಿಂಗಡಣೆ ಸರಿಯಲ್ಲ, ಸಾಂವಿಧಾನಿಕವಲ್ಲ, ಇದು ಮಾನ್ಯವೂ ಅಲ್ಲ. ಒಕ್ಕಲಿಗ ಮತ್ತು ಲಿಂಗಾಯತ ಮೀಸಲಾತಿಯನ್ನು ಹೆಚ್ಚಿಸಲು ನಮ್ಮ ವಿರೋಧವಿಲ್ಲ. ಆದರೆ, ಮುಸ್ಲಿಮರ ಮೀಸಲಾತಿಯನ್ನು ಏಕೆ ರದ್ದುಗೊಳಿಸಿದ್ದು ಎಂದು ಪ್ರಶ್ನಿಸಿದ ಅವರು ಇದು ದ್ವೇಷದ ರಾಜಕಾರಣವನ್ನು ಸ್ಪಷ್ಟವಾಗಿ ತೋರಿಸುತ್ತದೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು. ಬಿಜೆಪಿ ಒಂದು ಮತೀಯ ಪಕ್ಷ, ನಮ್ಮದು ಜಾತ್ಯತೀತ ಪಕ್ಷ. ಕರ್ನಾಟಕದ ಜನರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇರಬಾರದು. ನಾನು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಅಥವಾ ಯಾವುದೇ ಇತರ ಸಮುದಾಯ ಅಥವಾ ಧರ್ಮದವರಾಗಿದ್ದರೂ ಸಮಾನವಾಗಿ ಕಾಣುತ್ತೇನೆ, ಎಲ್ಲರನ್ನೂ ಸಮಾನವಾಗಿ ನೋಡುತ್ತೇನೆ ಎಂದರು.

ಇನ್ನು ಬಸವರಾಜ ಬೊಮ್ಮಾಯಿ ಕನ್ನಡಿಗರ ಹಿತ ಕಾಪಾಡುವಲ್ಲಿ ವಿಫಲರಾಗಿದ್ದಾರೆ. ಅವರಿಗೆ ಸಿಎಂ ಆಗಿ ಮುಂದುವರಿಯುವ ಅಗತ್ಯವಿಲ್ಲ. ಮೋದಿ ಮತ್ತು ಅಮಿತ್​ ಶಾ ನಿರಂತರವಾಗಿ ಕರ್ನಾಟಕಕ್ಕೆ ಮತ ಪಡೆಯಲು ಬರುತ್ತಿದ್ದಾರೆ. ಇಲ್ಲಿಗೆ ಬಂದು ಡಬಲ್ ಇಂಜಿನ್ ಸರ್ಕಾರ ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ಹೇಳಿದರು. ಡಿಕೆಶಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನನ್ನ ಮತ್ತು ಡಿಕೆ ಶಿವಕುಮಾರ್ ಅವರೊಂದಿಗಿನ ಸಂಬಂಧವು ಸೌಹಾರ್ದಯುತವಾಗಿದೆ. ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಪ್ರಜಾಪ್ರಭುತ್ವದಲ್ಲಿ ಸಹಜವಾಗಿಯೇ ಭಿನ್ನಾಭಿಪ್ರಾಯಗಳಿರುತ್ತವೆ ಆದರೆ ಅದು ಪಕ್ಷದ ಹಿತಾಸಕ್ತಿಗೆ ಹಾನಿಕರವಲ್ಲ ಎಂದರು.

ಇದನ್ನೂ ಓದಿ:  ದೆಹಲಿ ತಲುಪಿದ ರಾಜ್ಯ ನಾಯಕರು: ನಡ್ಡಾ ನಿವಾಸದಲ್ಲಿ ಮಹತ್ವದ ಸಭೆ..!

Last Updated : Apr 8, 2023, 9:34 AM IST

ABOUT THE AUTHOR

...view details