ಕರ್ನಾಟಕ

karnataka

ನೀವು ದೀರ್ಘಾಯುಷಿಯಾಗಬೇಕಂದ್ರೆ ಜಸ್ಟ್​ 7000 ಹೆಜ್ಜೆ..

By

Published : Sep 17, 2021, 10:16 PM IST

walking
ನಡಿಗೆ ()

ದೀರ್ಘ ಕಾಲದಿಂದ ಧೂಮಪಾನ ಮಾಡಿದವರು, ತೂಕ, ಬಿಎಂಐ, ಕೊಲೆಸ್ಟ್ರಾಲ್, ರಕ್ತದ ಗ್ಲೂಕೋಸ್ ಮಟ್ಟ, ಮದ್ಯ ಸೇವನೆ, ರಕ್ತದೊತ್ತಡ, ಹೃದಯ ರಕ್ತನಾಳದ ಕಾಯಿಲೆ ಇತ್ಯಾದಿ ಆರೋಗ್ಯಕ್ಕೆ ಸಂಬಂಧಿಸಿದ ಇತರ ಅಂಶಗಳನ್ನೂ ಮೇಲ್ವಿಚಾರಣಾ ತಂಡ ಗಣನೆಗೆ ತೆಗೆದುಕೊಂಡಿತು..

ಹೈದರಾಬಾದ್​ :ಒಬ್ಬ ವ್ಯಕ್ತಿ ನಿತ್ಯವೂ ಕನಿಷ್ಟ 7000 ಹೆಜ್ಜೆಗಳನ್ನು ನಡೆದರೆ ಅವನು ದೈಹಿಕವಾಗಿ ಸಕ್ರಿಯನಾಗಿರುತ್ತಾನೆ. ಇದು ಅವನ/ಅವಳ ಸಾವಿನ ಅಪಾಯವನ್ನ ಶೇ.50-70ರಷ್ಟು ಕಡಿಮೆ ಮಾಡುತ್ತದೆ ಎಂದು ಜರ್ನಲ್ ಆಫ್ ಅಮೆರಿಕನ್​ ಮೆಡಿಕಲ್ ಅಸೋಸಿಯೇಷನ್ (JAMA)ನಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನ ವರದಿ ತಿಳಿಸಿದೆ.

ಯುವ ವಯಸ್ಕರಲ್ಲಿ ಪರಿಧಮನಿಯ ಅಪಾಯದ ಕುರಿತು ಮಾಡಿರುವ ಅಧ್ಯಯನದಲ್ಲಿ ಯುನೈಟೆಡ್ ಸ್ಟೇಟ್ಸ್​ನ 4 ರಾಜ್ಯಗಳಿಂದ 38 ರಿಂದ 50 ವರ್ಷ ವಯಸ್ಸಿನ ಸುಮಾರು 2,110 ಯುವಜನರನ್ನು ಬಳಸಿಕೊಳ್ಳಲಾಗಿತ್ತು. ಇವರಲ್ಲಿ 1,205 ಮಹಿಳೆಯರು ಮತ್ತು 888 ಜನರು ಕಪ್ಪು ಜನರು ಭಾಗವಹಿಸಿದ್ದರು.

ಜನರನ್ನು 3 ವರ್ಗಗಳಾಗಿ ವಿಂಗಡಿಸಲಾಗಿತ್ತು

  • ಕಡಿಮೆ- ದಿನಕ್ಕೆ 7000 ಹೆಜ್ಜೆಗಳಿಗಿಂತ ಕಡಿಮೆ ನಡೆದವರು.
  • ಸಾಧಾರಣ- ದಿನಕ್ಕೆ 7000-9999 ಹೆಜ್ಜೆಗಳನ್ನು ನಡೆದವರು.
  • ಹೆಚ್ಚು- ಒಂದು ದಿನದಲ್ಲಿ 10,000 ಅಥವಾ ಅದಕ್ಕಿಂತ ಹೆಚ್ಚು ಹೆಜ್ಜೆ ನಡೆದವರು.

ಭಾಗವಹಿಸಿದವರ ವಿವಿಧ ಹಂತಗಳ (3) ಸಂಖ್ಯೆಯನ್ನು ಮೇಲ್ವಿಚಾರಣೆ ಮಾಡುವುದರ ಹೊರತಾಗಿ ಸಂಶೋಧಕರು ಸರಾಸರಿ ವಾಕಿಂಗ್ ವೇಗವನ್ನು ಸಹ ಮೇಲ್ವಿಚಾರಣೆ ಮಾಡಿದರು. ಅಲ್ಲದೇ, ಭಾಗವಹಿಸಿದವರು ಅರ್ಧ ಗಂಟೆಯಲ್ಲಿ ನಡೆಯುವ ದೀರ್ಘ ಹೆಜ್ಜೆಗಳನ್ನು ಗುರುತಿಸಿಕೊಂಡರು. ಒಂದು ನಿಮಿಷಕ್ಕೆ ನೂರಕ್ಕಿಂತ ಹೆಜ್ಜೆಗಳನ್ನು ಹಾಕಿದವರನ್ನು ಟ್ರ್ಯಾಕ್​ ಮಾಡಿಕೊಂಡರು.

ದೀರ್ಘ ಕಾಲದಿಂದ ಧೂಮಪಾನ ಮಾಡಿದವರು, ತೂಕ, ಬಿಎಂಐ, ಕೊಲೆಸ್ಟ್ರಾಲ್, ರಕ್ತದ ಗ್ಲೂಕೋಸ್ ಮಟ್ಟ, ಮದ್ಯ ಸೇವನೆ, ರಕ್ತದೊತ್ತಡ, ಹೃದಯ ರಕ್ತನಾಳದ ಕಾಯಿಲೆ ಇತ್ಯಾದಿ ಆರೋಗ್ಯಕ್ಕೆ ಸಂಬಂಧಿಸಿದ ಇತರ ಅಂಶಗಳನ್ನೂ ಮೇಲ್ವಿಚಾರಣಾ ತಂಡವು ಗಣನೆಗೆ ತೆಗೆದುಕೊಂಡಿತು.

ಒಂದು ದಿನದಲ್ಲಿ 7000 ಹೆಜ್ಜೆ ಅಥವಾ ಅದಕ್ಕಿಂತ ಹೆಚ್ಚು ನಡೆದ ಜನರಿಗೆ ಅವರ ಸಾವಿನ ಅಪಾಯವು ದಿನಕ್ಕೆ 7000 ಹೆಜ್ಜೆಗಳಿಗಿಂತ ಕಡಿಮೆ ನಡೆದವರಿಗಿಂತ ಶೇ.50-70ನಷ್ಟು ಕಡಿಮೆಯಾಗಿದೆ ಎಂದು ತಂಡವು ಕಂಡು ಹಿಡಿದಿದೆ. ಹೀಗಿದ್ದರೂ, ದಿನಕ್ಕೆ 10,000ಕ್ಕಿಂತ ಹೆಚ್ಚು ಹೆಜ್ಜೆಗಳನ್ನು ನಡೆಯುವುದು ಮರಣದ ಅಪಾಯವನ್ನು ಕಡಿಮೆ ಮಾಡಲು ಸಹಾಯಕವಾಗಿಲ್ಲ ಎಂಬುದು ತಿಳಿದು ಬಂದಿದೆ.

ಈ ಬಗ್ಗೆ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಅಭಿಪ್ರಾಯ

ಸಿಡಿಸಿ ಪ್ರಕಾರ ದೈಹಿಕ ಚಟುವಟಿಕೆಗಳ ಪ್ರಯೋಜನಗಳು

ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳ (ಸಿಡಿಸಿ) ಪ್ರಕಾರ, ದೈಹಿಕ ಚಟುವಟಿಕೆಗಳು ನಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಒಳ್ಳೆಯದು.

  • ಮೂಳೆಗಳು ಮತ್ತು ಸ್ನಾಯುಗಳನ್ನು ಬಲಪಡಿಸುತ್ತದೆ.
  • ಹೃದಯ ರೋಗಗಳು ಮತ್ತು ಟೈಪ್ -2 ಮಧುಮೇಹದ ಅಪಾಯ ಕಡಿಮೆಯಾಗುತ್ತದೆ.
  • ಸ್ತನದ ಸಮಸ್ಯೆ, ಕೊಲೊನ್ ಮೊದಲಾದ ಹಲವಾರು ಸಾಮಾನ್ಯ ಕ್ಯಾನ್ಸರ್‌ ಅಪಾಯ ಕಡಿಮೆ ಮಾಡುತ್ತದೆ.
  • ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ.
  • ಖಿನ್ನತೆ ಮತ್ತು ಆತಂಕದ ಅಪಾಯ ಕಡಿಮೆ ಮಾಡುತ್ತದೆ.
  • ಆಲೋಚನೆ ಮತ್ತು ಕಲಿಕಾ ಸಾಮರ್ಥ್ಯ ಸುಧಾರಿಸುತ್ತದೆ.

ಓದಿ:ದಾಂಪತ್ಯದಲ್ಲಿ ಕಾಲಕ್ರಮೇಣ ಭಾವನಾತ್ಮಕತೆ ದೂರವಾಗುವುದು ಏಕೆ? ತಜ್ಞರು ನೀಡುವ ಪರಿಹಾರ ಇಲ್ಲಿದೆ..

ABOUT THE AUTHOR

...view details