ದಾಂಪತ್ಯದಲ್ಲಿ ಕಾಲಕ್ರಮೇಣ ಭಾವನಾತ್ಮಕತೆ ದೂರವಾಗುವುದು ಏಕೆ? ತಜ್ಞರು ನೀಡುವ ಪರಿಹಾರ ಇಲ್ಲಿದೆ..

author img

By

Published : Sep 12, 2021, 10:18 PM IST

why-married-couples-become-emotionally-distant-with-time

ಮದುವೆಯಾದ ಕೆಲವು ವರ್ಷಗಳ ನಂತರ ಅನೇಕ ಬಾರಿ ದಂಪತಿ ಭಾವನಾತ್ಮಕವಾಗಿ ದೂರವಾಗಲು ಪ್ರಾರಂಭಿಸುತ್ತಾರೆ. ಪರಸ್ಪರರ ನಡುವೆ ನಂಬಿಕೆ ಮತ್ತು ತಿಳುವಳಿಕೆ ಕಡಿಮೆಯಾಗಲು ಶುರುವಾಗುತ್ತದೆ. ಪರಿಣಾಮ ಇದು ಜಗಳ, ವಾದಕ್ಕೂ ದಾರಿಯಾಗುತ್ತದೆ.

ದೀರ್ಘಕಾಲದ ಸಂಬಂಧದಲ್ಲಿ ದಂಪತಿಯ ನಡುವೆ ಭಾವನಾತ್ಮಕತೆ ದೂರವಾಗುತ್ತದೆ. ಈ ಮೂಲಕ ಪರಸ್ಪರರ ನಡುವೆ ಪ್ರೀತಿ ಕಡಿಮೆಯಾಗುತ್ತದೆ ಎಂಬ ಅಂಶ ಅಧ್ಯಯನದಿಂದ ಗೊತ್ತಾಗಿದೆ.

ಹೀಗಿದ್ದರೂ, ದಂಪತಿ ಒಬ್ಬರಿಗೊಬ್ಬರು ಒಟ್ಟಿಗಿರಲು, ಜೀವನ ಮತ್ತು ಕುಟುಂಬದ ಎಲ್ಲಾ ಜವಾಬ್ದಾರಿಗಳನ್ನು ಒಟ್ಟಾಗಿ ನಿರ್ವಹಿಸಲು ಒಗ್ಗಿಕೊಳ್ಳುತ್ತಾರೆ. ಆದರೆ, ಅವರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವ ಅಗತ್ಯತೆಯ ಕಡೆಗೆ ಗಮನಹರಿಸುವುದಿಲ್ಲ. ಇದರ ಪರಿಣಾಮವಾಗಿ ಅತೃಪ್ತಿ, ಹತಾಶೆ ಮತ್ತು ಏಕತಾನತೆಯು ಸಂಬಂಧಗಳಲ್ಲಿ ಬೆಳೆಯುತ್ತವೆ.

ಮದುವೆಯಾದ ಕೆಲವು ವರ್ಷಗಳ ನಂತರ ಅನೇಕ ಬಾರಿ ದಂಪತಿ ಭಾವನಾತ್ಮಕವಾಗಿ ದೂರವಾಗುತ್ತಾರೆ. ಪರಸ್ಪರರ ನಡುವೆ ನಂಬಿಕೆ, ತಿಳುವಳಿಕೆ ಕಡಿಮೆಯಾಗುತ್ತದೆ. ಪರಿಣಾಮ ಇದು ಜಗಳ, ವಾದಕ್ಕೂ ದಾರಿಯಾಗುತ್ತದೆ.

ಗಂಡ ಮತ್ತು ಹೆಂಡತಿ ಇಬ್ಬರೂ ತಮ್ಮ ಸಂಗಾತಿ ತಮ್ಮಂತೆ ಯೋಚಿಸುವಂತೆ, ವರ್ತಿಸುವಂತೆ ಬಯಸಿದಾಗ ಸಂಬಂಧದಲ್ಲಿ ಅನೇಕ ಸಮಸ್ಯೆಗಳು ಏರ್ಪಡುತ್ತವೆ ಎಂದು ಸಂಬಂಧ ಸಲಹೆಗಾರ ರಚನಾ ಮಹೇಶ್ವರಿ ಹೇಳುತ್ತಾರೆ.

ಮದುವೆಯಾದ ಆರಂಭದ ವರ್ಷಗಳಲ್ಲಿ ಜವಾಬ್ದಾರಿಗಳು ಕಡಿಮೆ ಇರುತ್ತವೆ. ದಂಪತಿ ಪರಸ್ಪರರ ನಡುವೆ ವಿಚಾರ ವಿನಿಮಯಕ್ಕೆ ಸಾಕಷ್ಟು ಸಮಯ ಪಡೆಯುತ್ತಾರೆ. ಈ ಸಮಯದಲ್ಲಿ ಅವರು ಹೆಚ್ಚು ಲೈಂಗಿಕವಾಗಿ ಸಕ್ರಿಯರಾಗಿರುತ್ತಾರೆ. ಆದರೆ, ಸಮಯ ಕಳೆದಂತೆ ದಿನನಿತ್ಯದ ಜೀವನದ ಜವಾಬ್ದಾರಿಗಳು, ಮಕ್ಕಳನ್ನು ಬೆಳೆಸುವುದು ಮತ್ತು ಸಂಬಂಧಿಕರೊಂದಿಗೆ ಸಂಬಂಧಗಳನ್ನು ಕಾಪಾಡಿಕೊಳ್ಳುವುದು ಸವಾಲಾಗುತ್ತದೆ.

ಸಮಯದೊಂದಿಗೆ ಸಂಬಂಧ ಬದಲಾಗುತ್ತದೆ:

ಮದುವೆಯಾದ ಹೊಸತರಲ್ಲಿ ದಂಪತಿ ತಮ್ಮ ನಡುವೆ ಪರಸ್ಪರರ ಇಷ್ಟ ಮತ್ತು ಇಷ್ಟಪಡದಿರುವಿಕೆ ಮತ್ತು ಪರಸ್ಪರ ಬಾಂಧವ್ಯವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವು ವರ್ಷಗಳ ನಂತರ ಅವರಿಗೆ ಎಲ್ಲವೂ ಅರ್ಥಹೀನವೆಂದು ತೋರುತ್ತದೆ. ಇದು ಕ್ರಮೇಣ ಅವರ ನಡುವಿನ ಭಾವನಾತ್ಮಕ ಅಂತರವನ್ನು ರೂಪಿಸಬಲ್ಲದು.

ಸಂಗಾತಿ ತಮ್ಮ ಬಗ್ಗೆ ಗಮನ ಹರಿಸುವುದಿಲ್ಲ ಎಂಬುದು ಇತ್ತೀಚಿಗೆ ಹೆಚ್ಚಾಗಿ ಕೇಳಿ ಬರುತ್ತಿರುವ ದೂರು. ಇದರಿಂದಾಗಿ ಪರಸ್ಪರರ ನಡುವೆ ಭಾವನಾತ್ಮಕತೆ ಕಡಿಮೆಯಾಗಿದೆ ಎಂದು ದಂಪತಿ ಹೇಳುತ್ತಾರೆ ಎಂದು ರಚನಾ ಮಹೇಶ್ವರಿ ಅವರ ಅಭಿಪ್ರಾಯ.

ವಿವಾಹದ ಆರಂಭದಲ್ಲಿ ಇಬ್ಬರೂ ಭಾವನಾತ್ಮಕವಾಗಿ ಹತ್ತಿರವಾಗುತ್ತಾರೆ. ಪರಸ್ಪರರ ಆಯ್ಕೆಗಳನ್ನು ಗೌರವಿಸುತ್ತಾರೆ. ನಂತರ ಅವರ ನಡವಳಿಕೆ ಬದಲಾದಾಗ, ಅವರು ನೋವು ಅನುಭವಿಸಲು ಪ್ರಾರಂಭಿಸುತ್ತಾರೆ. ಇದರಿಂದಾಗಿ ದಂಪತಿ ತಮ್ಮ ವೈಯಕ್ತಿಕ ವ್ಯವಹಾರಗಳಲ್ಲಿ ತೊಡಗುತ್ತಾರೆ.

ಸಂವಹನ ಅತೀ ಅಗತ್ಯ:

ಯಾವುದೇ ಸಂಬಂಧವನ್ನು ಕಾಪಾಡಿಕೊಳ್ಳಲು ಸರಿಯಾದ ಸಂವಹನ ಮತ್ತು ಸಂಭಾಷಣೆಗಳನ್ನು ಹೊಂದುವುದು ಬಹಳ ಮುಖ್ಯ. ಒಬ್ಬ ವ್ಯಕ್ತಿಯು ಯೋಚಿಸುವ ರೀತಿಯನ್ನು ಅರ್ಥಮಾಡಿಕೊಳ್ಳಲು ಇಬ್ಬರೂ ಪ್ರಯತ್ನಿಸಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.

ಗಂಡ-ಹೆಂಡತಿ ಇಬ್ಬರೂ ಎಲ್ಲದರ ಬಗ್ಗೆ ಮುಕ್ತವಾಗಿ ಮಾತನಾಡಿದರೆ, ಅವರ ದಾಂಪತ್ಯದಲ್ಲಿನ ಸಮಸ್ಯೆಗಳು ಸ್ವಲ್ಪಮಟ್ಟಿಗೆ ಕಡಿಮೆಯಾಗಬಹುದು ಮತ್ತು ಸುಲಭವಾಗಿಯೂ ಪರಿಹಾರ ಕಾಣಬಹುದು.

ಯಾವುದೇ ವಿವಾಹದ ಯಶಸ್ಸಿಗೆ ಪ್ರೀತಿ ಮತ್ತು ವಿಶ್ವಾಸದೊಂದಿಗೆ ಪರಸ್ಪರ ಸಾಮರಸ್ಯ ಕೂಡ ಬಹಳ ಮುಖ್ಯ ಎಂಬುದು ನಿಜ. ದಂಪತಿ ಪರಸ್ಪರರ ಆಲೋಚನೆ ಮತ್ತು ವರ್ತನೆ/ನಡವಳಿಕೆಯನ್ನು ಅರ್ಥಮಾಡಿಕೊಳ್ಳಬೇಕು.

ಸರಿಯಾದ ಸಂವಹನದ ಜೊತೆಗೆ ಪರಸ್ಪರರನ್ನು ಸಮಾನವಾಗಿ ಪರಿಗಣಿಸುವುದು ಮುಖ್ಯ. ನಿಮ್ಮ ಸಂಗಾತಿಯ ಆದ್ಯತೆಯನ್ನು ಅರ್ಥಮಾಡಿಕೊಳ್ಳಿ. ಅವರೊಂದಿಗೆ ಸಹಕರಿಸಲು ಪ್ರಯತ್ನಿಸಿ. ಹಾಗೆಯೇ, ನಿಮ್ಮ ಸಂಗಾತಿ ಮಾಡುತ್ತಿರುವ ಪ್ರಯತ್ನಗಳನ್ನು ಪ್ರಶಂಸಿಸಿ. ನಿಮ್ಮ ಜೀವನದಲ್ಲಿ ಅವರ ಪ್ರಾಮುಖ್ಯತೆಯನ್ನು ಅವರು ಅನುಭವಿಸುವಂತೆ ಮಾಡಿ. ಎರಡೂ ಕಡೆಯಿಂದ ಸಣ್ಣ ಪ್ರಯತ್ನಗಳು ಯಶಸ್ವಿ ದಾಂಪತ್ಯಕ್ಕೆ ಕೊಡುಗೆ ನೀಡುತ್ತವೆ.

ಇದನ್ನೂ ಓದಿ: ಈ ವ್ಯಾಯಾಮಗಳನ್ನು ಮಾಡಿದ್ರೆ 40ರ ಪ್ರಾಯದಲ್ಲೂ 10 ವರ್ಷ ಚಿಕ್ಕವರಾಗ್ತೀರಿ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.