ಕರ್ನಾಟಕ

karnataka

Oral Health: ತಂಬಾಕು ಜಗಿಯುವ ಅಭ್ಯಾಸವಿದೆಯೇ? ಹೌದು, ಎನ್ನುವಿರಾದರೆ ನಿಮಗಿದು ಗೊತ್ತಿರಲೇ ಬೇಕು!

By

Published : Jul 20, 2023, 11:54 AM IST

ನಾವು ಸೇವಿಸುವ ಆಹಾರಗಳು ಬಾಯಿಯ ಮೂಲಕವೇ ದೇಹ ಸೇರುತ್ತವೆ. ಹೀಗಾಗಿ ಬಾಯಿಯ ಆರೋಗ್ಯ ಕಾಪಾಡುವುದು ಅತ್ಯವಶ್ಯಕ.

tobacco negative impact on the oral health
tobacco negative impact on the oral health

ದೀರ್ಘಕಾಲದ ತಂಬಾಕು ಬಳಕೆ ಒಸಡಿನ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಬಾಯಿಯ ಅನಾರೋಗ್ಯ, ಹಲ್ಲಿನ ಬಣ್ಣ ಹಾಗು ಬಾಯಿಯ ಸೋಂಕಿಗೆ ಕಾರಣವಾಗುತ್ತದೆ. ಇನ್ನು, ಬೇರೆ ಚಟಗಳಿಗೆ ಹೋಲಿಕೆ ಮಾಡಿದರೆ ತಂಬಾಕು ಚಟದಿಂದ ಹೊರಬರುವುದು ಸುಲಭದ ಮಾತಲ್ಲ. ಆದರೆ ಇದಕ್ಕೆ ನೀವು ಕೆಲವು ತಜ್ಞರ ಸಹಾಯ ಪಡೆಯಲೇಬೇಕು. ಇದರ ಜೊತೆಗೆ ಬಾಯಿಯ ಸೋಂಕಿನಿಂದ ಮುಕ್ತಿ ಪಡೆಯಲು ಸಲಹೆ ಪಡೆಯಬೇಕು. ತಂಬಾಕು ವ್ಯಸನದಿಂದ ಹೇಗೆ ಹೊರಬರುವುದು ಎಂದು ತಿಳಿಯುವುದು ಅವಶ್ಯಕ. ಐಎಎನ್​ಎಸ್​ ಲೈಫ್​​ ಫಾಂಗ್​​ನ ಸಹ ಸಂಸ್ಥಾಪಕ ಅಂಕಿತ್​ ಅಗರ್​ವಾಲ್ ಬಾಯಿಯ ಆರೋಗ್ಯ ರಕ್ಷಣೆಯ ಕುರಿತು ಉಪಯುಕ್ತ ಸಲಹೆಗಳನ್ನು ನೀಡಿದ್ದಾರೆ.

ಒಸಡಿನ ಆರೋಗ್ಯ:ತಾಂಬಾಕು ಸೇವನೆ ಒಸಡುಗಳ ಆರೋಗ್ಯ ಮೇಲೆ ಗಣನೀಯವಾಗಿ ಪರಿಣಾಮ ಬೀರುತ್ತದೆ. ರೋಗಕ್ಕೂ ಗುರಿಯಾಗುವಂತೆ ಮಾಡುತ್ತದೆ. ತಂಬಾಕಿನಲ್ಲಿರುವ ರಾಸಾಯನಿಕಗಳು ರಕ್ತದ ಹರಿವು ಕಡಿಮೆ ಮಾಡುತ್ತದೆ. ಒಸಡು ಅಂಗಾಂಶ ಕೋಶಗಳ ಸಾಮಾನ್ಯ ಕಾರ್ಯವನ್ನು ದುರ್ಬಲಗೊಳಿಸುತ್ತದೆ. ಅನಾರೋಗ್ಯಕರ ಒಸಡುಗಳು ಹಲ್ಲುಗಳು ಸಡಿಲಗೊಳ್ಳಲು/ ಬೀಳಲು ಕಾರಣವಾಗುತ್ತದೆ.

ತಂಬಾಕು ಬಳಕೆ ಮಾಡುವವರು ಟಾಕ್ಸಿಕ್‌ಮುಕ್ತ ಟೂತ್​ಪೇಸ್ಟ್​ ಬಳಕೆ ಮಾಡುವುದು ಉತ್ತಮ. ಇವು ಉರಿಯೂತದ ಒಸಡಿಗೆ ಪರಿಣಾಮ ಬೀರುತ್ತದೆ. ಮೃದು ಹಲ್ಲಿನ ಬ್ರಾಶ್​​ ಬಳಕೆ ಮಾಡುವುದು ಒಳಿತು.

ಹಲ್ಲಿನ ಕೊಳೆ: ತಂಬಾಕು ಹಲ್ಲಿನ ಕೊಳೆಯನ್ನು ಹಾಗೆಯೇ ಇರಿಸುತ್ತದೆ. ತಂಬಾಕಿನಲ್ಲಿರುವ ಟಾರ್​ ಮತ್ತು ನಿಕೋಟಿನ್​ ಹಲ್ಲಿನ ಬಣ್ಣವನ್ನು ಹಳದಿ ಅಥವಾ ಕಡು ಕೆಂಪಾಗಿಸುತ್ತದೆ. ತಂಬಾಕು ಜಗಿಯುವುದು ಅತ್ಯಂತ ಕೆಟ್ಟ ಹವ್ಯಾಸ. ಇದು ಹಲ್ಲಿನ ಕ್ಯಾವಿಟಿ ನಾಶ ಮಾಡುತ್ತದೆ. ಧೂಮಪಾನಿಗಳು, ತಂಬಾಕು, ಪಾನ್​ ಮಸಾಲ ಜಗಿಯುವವರು ಅವರ ಹಲ್ಲುಗಳನ್ನು ಆರು ತಿಂಗಳಿಗೆ ಒಮ್ಮೆ ಶುಚಿಗೊಳಿಸಬೇಕು. ಟೀತ್​ ವೈಟ್​ನಿಂಗ್​ ಚಿಕಿತ್ಸೆ ಪಡೆಯುವುದು ಸೂಕ್ತ.

ಹಲ್ಲಿನ ಸೋಂಕು: ತಂಬಾಕು ಬಳಕೆ ಹಲವು ವಿಧದ ಕಾಯಿಲೆ ಮತ್ತು ಸೋಂಕನ್ನು ಅಭಿವೃದ್ಧಿ ಪಡಿಸುವ ಸಾಧ್ಯತೆ ಇದೆ. ಅಂಕಿತ್​ ಹೇಳುವ ಪ್ರಕಾರ, ತಂಬಾಕಿನಲ್ಲಿರುವ ರಾಸಾಯನಿಕಗಳು ಬ್ಯಾಕ್ಟೀರಿಯಾದ ವಿರುದ್ಧ ಹೋರಾಡುವ ನಿಮ್ಮ ಬಾಯಿಯ ಸಾಮರ್ಥ್ಯವನ್ನು ದುರ್ಬಲಗೊಳಿಸಬಹುದು, ಇದರಿಂದಾಗಿ ಬಳಕೆದಾರರು ಸೋಂಕುಗಳಿಗೆ ಹೆಚ್ಚು ಒಳಗಾಗುತ್ತಾರೆ. ಇದು ಪರಿದಂತದ ಸೋಂಕುಗಳನ್ನು ಒಳಗೊಂಡಿರುತ್ತದೆ. ಇದು ಹಲ್ಲಿನ ನಷ್ಟ ಮತ್ತು ಮೂಳೆ ಹಾನಿಗೆ ಕಾರಣವಾಗಬಹುದು. ತಂಬಾಕು ಸೇವನೆಯು ಬಾಯಿಯ ಕಾಯಿಲೆಗಳಿಗೆ ಸಂಬಂಧಿಸಿದೆ. ವಸಡು ಕಾಯಿಲೆ ಹೊರತಾಗಿ, ಇದು ಬಾಯಿಯ ಕ್ಯಾನ್ಸರ್ನ ಅಪಾಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ, ಇದು ಜೀವಕ್ಕೆ ಅಪಾಯ ಉಂಟುಮಾಡುತ್ತದೆ.

ಚಟದಿಂದ ದೂರಾಗುವುದು:ತಂಬಾಕು ಚಟದಿಂದ ದೂರಾಗುವುದು ದೊಡ್ಡ ಸವಾಲಿನ ಕೆಲಸ. ಇದಕ್ಕೆ ಹೆಚ್ಚಿನ ಪ್ರೇರಣೆ ಮತ್ತು ಬೆಂಬಲದ ಅವಶ್ಯಕತೆ ಇದೆ. ಇದಕ್ಕಾಗಿ ನಿಕೋಟಿನ್​ನಂತಹ ಬದಲಿ ಚಿಕಿತ್ಸೆಗಳಿಗೆ ಮೊರೆ ಹೋಗಬಹುದು. ನಿಯಮಿತ ಬಾಯಿ ಆರೋಗ್ಯದ ತಪಾಸಣೆಗೆ ಒಳಗಾಗುವ ಮೂಲಕ ಉತ್ತಮ ದಂತ ಸೌಂದರ್ಯವನ್ನು ಪಡೆಯಬಹುದು.

ಇದನ್ನೂ ಓದಿ: Pink Eye: ಮಳೆಗಾಲದಲ್ಲಿ ಹೆಚ್ಚಾಗ್ತಿದೆ ಗುಲಾಬಿ ಕಣ್ಣಿನ ಸಮಸ್ಯೆ; ಏನಿದರ ಲಕ್ಷಣ? ಪರಿಹಾರ ಹೇಗೆ?

ABOUT THE AUTHOR

...view details