ಕರ್ನಾಟಕ

karnataka

ಹದಿಹರೆಯದವರ ತ್ವಚೆ ಆರೈಕೆ ಹೀಗಿರಲಿ..

By

Published : May 18, 2023, 2:38 PM IST

Updated : May 18, 2023, 2:45 PM IST

ಹದಿ ಹರೆಯ ವಯಸ್ಸಿನಲ್ಲಿ ಉಂಟಾಗುವ ಹಾರ್ಮೋನ್​ಗಳ ಬದಲಾವಣೆ, ಶಾಲೆ ಮತ್ತು ಸಾಮಾಜಿಕ ಜೀವನದ ಒತ್ತಡಗಳ ಪರಿಣಾಮ ತ್ವಚೆಯ ಮೇಲೆ ಬೀರುತ್ತದೆ.

Teen skin care should be like this
Teen skin care should be like this

ಬೆಂಗಳೂರು: ಯಾವುದೇ ವಯಸ್ಸಿನಲ್ಲಾಗಲಿ ತ್ವಚೆಯ ದಿನಚರಿಗಳನ್ನು ಪಾಲಿಸಿವುದು ಅಗತ್ಯವಾಗಿದೆ. ತ್ವಚೆ ಆರೈಕೆಯಿಲ್ಲದೇ ಅದರ ಸೌಂದರ್ಯವನ್ನು ಇಮ್ಮಡಿಗೊಳಿಸಲು ಸಾಧ್ಯವಿಲ್ಲ. ಜೊತೆಗೆ ಅದರ ಆರೋಗ್ಯ ಕೂಡ ಹಾಳಾಗುತ್ತದೆ. ಈ ಹಿನ್ನೆಲೆ ಇದಕ್ಕೆ ವಿಶೇಷ ಕಾಳಜಿ ವಹಿಸುವುದು ಅವಶ್ಯ. ಅದರಲ್ಲೂ ಹದಿಹರೆಯದ ವಯುಸ್ಸಿನಲ್ಲಿ ಇದಕ್ಕೆ ಮತ್ತಷ್ಟು ಮಹತ್ವ ನೀಡಬೇಕಾಗುತ್ತದೆ. ಕಾರಣ ಈ ವಯಸ್ಸಿನಲ್ಲಿ ಉಂಟಾಗುವ ಹಾರ್ಮೋನ್​ಗಳ ಬದಲಾವಣೆ, ಶಾಲೆ ಮತ್ತು ಸಾಮಾಜಿಕ ಜೀವನದ ಒತ್ತಡಗಳ ಪರಿಣಾಮ ತ್ವಚೆಯ ಮೇಲೆ ಬೀರುತ್ತದೆ. ನೀವು ತ್ವಚೆಯ ಆರೈಕೆಗೆ ಮುಂದಾಗುವುದಾದರೆ, ಅದನ್ನು ಮೂಲದಿಂದ ಪ್ರಾರಂಭ ಮಾಡಬೇಕುತ್ತದೆ. ಶುಚಿ, ಪೋಣೆ ಮತ್ತು ರಕ್ಷಣೆ (ಸಿಎನ್​ಪಿ) ಅಗತ್ಯವಾಗಿದೆ. ಹದಿಹರೆಯದವರಲ್ಲಿ ಸೂಕ್ಷ್ಮ ಚರ್ಮಗಳು ಬದಲಾಗುತ್ತಿರುವ ಹಿನ್ನೆಲೆ ಇದು ಮುಖ್ಯ.

ತ್ವಚೆಯ ಅಂದವನ್ನು ಹೆಚ್ಚಿಸಬೇಕು ಎಂದರೆ ಮೊದಲು ತ್ವಚೆಯ ಆಳದಲ್ಲಿ ಉಂಟಾಗಿರುವ ಕೊಳೆಯನ್ನು ದೂರಗೊಳಿಸಿ, ಅದಕ್ಕೆ ಮಾಶ್ಚರೈಸ್​ ಮಾಡಿ ಬಳಿಕ ಅದನ್ನು ಸನ್​ಸ್ಕ್ರೀನ್​ನಿಂದ ರಕ್ಷಣೆ ಮಾಡಬೇಕಾಗುತ್ತದೆ. ಇವು ಮೂರು ತ್ವಚೆಯ ಆರೈಕೆಗೆ ಪ್ರಮುಖ ಕಾಳಜಿ ಆಗಿದೆ.

ಇನ್ನು, ಈ ಕುರಿತು ಮಾತನಾಡಿರುವ ಫೇಸ್​ ಸ್ಕೀನ್​ ಕೇರ್​ ಸಹ ಸಂಸ್ಥಾಪಕರಾಗಿರುವ ಸಂಜನಾ ರಘು ಅಂಬೇಕರ್​​, ಹದಿಹರೆಯದವರು ತಮ್ಮ ತ್ವಚೆ ಆರೈಕೆಯನ್ನು ಸರಳವಾಗಿ ಮತ್ತು ಪರಿಣಾಮಕಾರಿಯಾಗಿ ನಡೆಸುವ ಗುರಿ ಹೊಂದಿರಬೇಕು ಎಂದಿದ್ದಾರೆ. ಇದರಿಂದ ಅವರ ತ್ವಚೆ ಆರೋಗ್ಯದ ಜೊತೆಗೆ ಹೊಳೆಯಲು ಸಾಧ್ಯ. ಸ್ಥಿರತೆ, ತಾಳ್ಮೆ ಮತ್ತು ಸರಿಯಾದ ಉತ್ಪನ್ನಗಳ ಬಳಕೆಯಿಂದ ಉತ್ತಮ ಫಲಿತಾಂಶ ಸಾಧ್ಯ ಎಂದಿದ್ದಾರೆ. ಇನ್ನು ಹದಿಹರೆಯದವರಲ್ಲಿ ತಮ್ಮ ದೈನಂದಿನ ತ್ವಚೆ ನಿರ್ವಹಣೆ ಮಾಡಲು ಯಾವ ರೀತಿ ಉತ್ಪನ್ನಗಳ ಬಳಕೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.

ಕ್ಲೇನ್ಸ್​ (ಶುಚಿ): ಮುಖವನ್ನು ಸರಿಯಾದ ರೀತಿಯಲ್ಲಿ ತೊಳೆಯಬೆಕು. ರಾತ್ರಿ ಮತ್ತು ಹಗಲು ಮೃದುವಾದ ಕ್ಲೈನ್ಸರ್​ ಸಹಾಯದಿಂದ ಶುಚಿಗೊಳಿಸಬೇಕು. ಈ ಉತ್ಪನ್ನಗಳ ಆಯ್ಕೆ ಮಾಡುವಾಗ ತ್ವಚೆಯ ಗುಣವನ್ನು ಅರಿತು ಆರಿಸಬೇಕು. ಇದು ಕಟು ರಾಸಾಯನಿಕ ಮುಕ್ತ ಮತ್ತು ಸುಗಂಧವಾಗಿದ್ದರೆ ಉತ್ತಮ

ಪೋಷಣೆ: ಮುಖ ತೊಳೆದ ಬಳಿಕ ಚರ್ಮ ನಿರ್ಜಲೀಕರಣಗೊಳ್ಳದಂತೆ ಮತ್ತು ಆರೋಗ್ಯವಾಗಿರಲು ಮಾಶ್ಚರೈಸರ್​ ಬಳಕೆ ಮಾಡಬೇಕು. ಇದು ಹೈಲುರೊನಿಕ್​ ಆಸಿಡ್​ ಮತ್ತು ಗ್ಲಿಸರಿನ್​ ಇರುವಂತೆ ನೋಡಿಕೊಳ್ಳಿ.

ರಕ್ಷಣೆ:ಬೆಳಗಿನ ಸಮಯದಲ್ಲಿ ಬಿಸಿಲು ಮುಖದ ಮೇಲೆ ಹಾನಿ ಮಾಡಬಹುದು. ಈ ಹಿನ್ನೆಲೆ ಚರ್ಮದ ರಕ್ಷಣೆಗೆ ಎಸ್​ಪಿಎಫ್​ 30 ಸನ್​ಸ್ಕ್ರೀನ್​ ಬಳಕೆ ಮಾಡುವುದು ಉತ್ತಮ. ಇದು ಹಾನಿಕಾರಕ ಯುವಿ ಕಿರಣದಿಂದ ನಿಮ್ಮನ್ನು ರಕ್ಷಿಸುತ್ತದೆ. ಈ ಉತ್ಪನ್ನಗಳ ಆಯ್ಕೆ ವೇಳೆ ಎಣ್ಣೆರಹಿತ ಉತ್ಪನ್ನ ಆರಿಸುವುದು ಉತ್ತಮ.

ಸೌಂದರ್ಯವರ್ಧಕ ಉತ್ಪನ್ನಗಳನ್ನು ಆಯ್ಕೆ ಮಾಡುವಾಗ ಅದರಲ್ಲಿನ ಪದಾರ್ಥಗಳ ಪಟ್ಟಿಯನ್ನು ಓದುವುದು ಅವಶ್ಯವಾಗಿರುತ್ತದೆ. ನಿಮ್ಮ ಚರ್ಮಕ್ಕೆ ಹೊಮದಿಕೆಯಾಗುವ, ಹೀರಿಕೊಳ್ಳುವ ವಸ್ತುಗಳ ಆಯ್ಕೆ ಮಾಡುವುದು ಉತ್ತಮ. ಕೃತಕ ಸುಗಂಧಗಳು ಮತ್ತು ವಿಷಕಾರಿ ರಾಸಾಯನಿಕಗಳಿಂದ ದೂರ ಇರುವುದು ಉತ್ತಮ.

ಇದನ್ನೂ ಓದಿ: ಆರೋಗ್ಯಯುತವಾಗಿ ಹೆಚ್ಚು ಕಾಲ ಜೀವಿಸಲು ಜಪಾನ್​​​ ಆಹಾರ ಪದ್ದತಿ​ ಬೆಸ್ಟ್​​

Last Updated : May 18, 2023, 2:45 PM IST

ABOUT THE AUTHOR

...view details