ETV Bharat / sukhibhava

ಆರೋಗ್ಯಯುತವಾಗಿ ಹೆಚ್ಚು ಕಾಲ ಜೀವಿಸಲು ಜಪಾನ್​​​ ಆಹಾರ ಪದ್ದತಿ​ ಬೆಸ್ಟ್​​

author img

By

Published : May 16, 2023, 2:24 PM IST

ಜಪಾನಿನ ಆಹಾರ ಪದ್ದತಿ ಆರೋಗ್ಯ ಪ್ರಯೋಜನಗಳನ್ನು ಸಂಶೋಧನೆಗಳಲ್ಲಿ ದೃಢಪಡಿಸಿದೆ. ಇತ್ತೀಚಿನ ದಿನಗಳಲ್ಲಿ ಜಪಾನಿನ ಡಯಟ್​​ ಜಾಗತಿಕವಾಗಿ ಎಲ್ಲೆಡೆ ಟ್ರೆಂಡ್​​ ಆಗಿದೆ.

Japanese diet is best for healthy long life
Japanese diet is best for healthy long life

ಹೈದರಾಬಾದ್​: ಇತ್ತೀಚಿನ ಅಧ್ಯಯನ ಪ್ರಕಾರ, ಜಪಾನಿನ ಆಹಾರ ಪದ್ದತಿಯೂ ಜನರಲ್ಲಿ ಆಲ್ಕೋಹಾಲಿಕ್​​ ಫ್ಯಾಟಿ ಲಿವರ್​ ಸಮಸ್ಯೆ (ಎನ್​ಎಎಫ್​ಎಲ್​ಡಿ) ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ ಎಂದು ಅಧ್ಯಯನ ತಿಳಿಸಿದೆ. ಈ ಸಂಬಂಧ ಎಂಡಿಪಿಐನಲ್ಲಿ ಪ್ರಕಟಿಸಲಾಗಿದೆ. ಈ ಆಹಾರ ಪದ್ಧತಿಯಲ್ಲಿ ಜಪಾನಿನ ಆಹಾರಗಳಾದ ಸೋಯಾ, ಸಮುದ್ರಾಹಾರ ಮತ್ತು ಸಮುದ್ರ ಉತ್ಪನ್ನಗಳು ಇರುತ್ತದೆ. ಇದು ಯಕೃತ್​ ಫೈಬ್ರೊಸಿಸ್​ ಸಮಸ್ಯೆಯನ್ನು ಹಂತ ಹಂತವಾಗಿ ನಿವಾರಣೆ ಮಾಡುತ್ತದೆ. ಈ ಸಂಬಂಧ ಜಪಾನಿನ ಒಸ್ಕಾ ಮೆಟ್ರೊಪಾಲಿಟನ್​ ಯುನಿವರ್ಸಿಟಿ ಆಸ್ಪತ್ರೆಯಲ್ಲಿ ಎನ್​ಎಎಫ್​ಎಲ್​ಡಿ ಹೊಂದಿರುವ 136 ಮಂದಿ ಭಾಗಿದಾರರನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು.

ಜಪಾನಿ ಆಹಾರ
ಜಪಾನಿ ಆಹಾರ

ಅಧ್ಯಯನದ ಅನುಸಾರ, ಭಾಗಿದಾರರಿಗೆ 12 ಉತ್ಪನ್ನಗಳನ್ನು ಒಳಗೊಂಡ ಡಯಟ್​ ಬಾಕ್ಸ್​ ಅನ್ನು ನೀಡಲಾಗಿದೆ. ಜಪಾನಿನ ಡಯಟ್​ನಲ್ಲಿನ ಈ 12 ರೀತಿಯ ಆಹಾರಗಳಲ್ಲಿ ಅನ್ನ, ಮಿಸೊ ಸೂಪ್​, ಉಪ್ಪಿನಕಾಯಿ, ಸೋಯಾ ಉತ್ಪನ್ನ, ಹಸಿರು ಮತ್ತು ಹಳದಿ ತರಕಾರಿ, ಹಣ್ಣು, ಸಮುದ್ರಾಹಾರ, ಮಶ್ರೂಮ್​, ಸಮುದ್ರಹಾರ, ಗ್ರೀನ್​ ಟೀ, ಕಾಫಿ, ಬೀಫ್​ ಮತ್ತು ಫೋರ್ಕ್​ ಸೇರಿಸಲಾಗಿದೆ. ಸೋಯಾ, ಸಮುದ್ರಾಹಾರ ಮತ್ತು ಕಡಲ ಆಹಾರಗಳ ಸೇವನೆಯಿಂದ​ ಆಲ್ಕೊಹಾಲ್​ ಯುಕ್ತವಲ್ಲದ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆಯೊಂದಿಗೆ ಯಕೃತ್ತಿನ ಫೈಬ್ರೋಸಿಸ್ನ ನಿಧಾನಗತಿಯ ಪ್ರಗತಿಯನ್ನು ಹೊಂದಿದೆ ಎಂದು ಫಲಿತಾಂಶದಲ್ಲಿ ತೋರಿಸಿದೆ.

ಜಪಾನಿ ಆಹಾರ
ಜಪಾನಿ ಆಹಾರ

ಇದರ ಹೊರತಾಗಿ, ಜಪಾನಿನ ಆಹಾರ ಪದ್ದತಿ ಆರೋಗ್ಯ ಪ್ರಯೋಜನಗಳನ್ನು ಅನೇಕ ಇತರ ಸಂಶೋಧನೆಗಳಲ್ಲಿ ದೃಢಪಡಿಸಿದೆ. ಇತ್ತೀಚಿನ ದಿನಗಳಲ್ಲಿ ಜಪಾನಿನ ಡಯಟ್​​ ಜಾಗತಿಕವಾಗಿ ಎಲ್ಲೆಡೆ ಟ್ರೆಂಡ್​​ ಆಗಿದೆ. ಸುಶಿ, ಮಿಸೊ ಸೂಪ್​, ತರಕಾರಿ ಉಪ್ಪಿನಕಾಯಿ, ಟೊಫುನಿಂದ ಮಾಡಿದ ಆಹಾರ, ಜಪಾನಿನ ಶೈಲಿಯ ಮೀನು ಮತ್ತು ಇತರ ಜಪಾನಿ ಆಹಾರಗಳು ಜಗತ್ತಿನಾದ್ಯಂತ ಹೆಚ್ಚು ಇಷ್ಟಪಡುತ್ತಾರೆ. ಇದರಿಂದಾಗಿ ಜಪಾನ್ ಡಯಟ್​ ಆರೋಗ್ಯದ ಹೊರತಾಗಿ ರುಚಿಯಿಂದಲೂ ಸೆಳೆದಿದೆ.

ಜಪಾನಿ ಆಹಾರ
ಜಪಾನಿ ಆಹಾರ

ಜಪಾನೀಯರ ಜೀವನಶೈಲಿ ಮತ್ತು ಡಯಟ್​​ ಹಾಗೂ ಡಯಟರಿ ಉತ್ಪನ್ನಗಳು ಜಪಾನಿ ಜನರು ದೀರ್ಘ ಜೀವತಾವಧಿಗೆ ಕೊಡುಗೆ ಹೊಂದಿದೆ. 2019ರ ಅನುಸಾರ ಜಾಗತಿಕವಾಗಿ ಜಪಾನಿಯ ಜೀವಿತಾವಧಿ ಅತಿ ಹೆಚ್ಚಿದೆ. ಅಂಕಿ - ಅಂಶಗಳ ಅನುಸಾರ ಜಪಾನ್​ನಲ್ಲಿ 90 ವರ್ಷಕ್ಕೆ ಮೀರಿದ ಜನಸಂಖ್ಯೆ 23 ಲಕ್ಷ ಇದ್ದರೆ, 100 ವರ್ಷಕ್ಕೆ ಮೇಲ್ಪಟ್ಟು 71 ಸಾವಿರ ಜನರು ಇದ್ದಾರೆ.

ಜಪಾನಿ ಆಹಾರ
ಜಪಾನಿ ಆಹಾರ

ಈ ಕುರಿತು ವಿವರಣೆ ನೀಡಿರುವ ನವದೆಹಲಿಯ ಡಯಟೀಷಿಯನ್​ ಡಾ ದಿವ್ಯಾ ಶರ್ಮಾ ಮತ್ತು ಮುಂಬೈನ ಜಪಾನಿ ಶೈಲಿ ಆಹಾರ ಶೆಫ್​​ ಮನವ್​ ಬಿಜಲ್ನಿ, ಜಪಾನಿ ಆಹಾರಗಳು ಆರೋಗ್ಯಯುತ ಪ್ರಯೋಜನ ಹೊಂದಿದೆ. ಜಪಾನಿನ ಆಹಾರ ಅದರಲ್ಲೂ ವಿಶೇಷವಾಗಿ ದೈನಂದಿನ ಸೇವನೆ ಆಹಾರಗಳು ಸರಳ, ತಾಜಾ ಮತ್ತು ರುಚಿ ತಕ್ಕ ಸಮತೋಲನ ಹೊಂದಿದೆ. ಅವರ ಡಯಟ್​ನಲ್ಲಿ ವಿವಿಧ ರೀತಿಯಲ್ಲಿ ತರಕಾರಿಗಳನ್ನು ಸೇರಿಸುವುದರ ಜೊತೆಗೆ ಬೇಯಿಸುವ ವಿಧಾನದಲ್ಲಿ ವಿಶೇಷ ಕಾಳಜಿ ವಹಿಸುತ್ತಾರೆ.

ಜಪಾನಿ ಆಹಾರ
ಜಪಾನಿ ಆಹಾರ

ಸಸ್ಯಾಹಾರಿ ಇರಲಿ ಅಥವಾ ಮಾಂಸಹಾರಿ ಆಹಾರ ಇರಲಿ, ತಾಜಾ ಉತ್ಪನ್ನಗಳ ಬಳಕೆ ಮಾಡುತ್ತಾರೆ. ಜೊತೆಗೆ ಹಬೆ, ಬೇಯಿಸುವುದು ಅಥವಾ ರೋಸ್ಟ್​ ಮೂಲಕ ಅವುಗಳ ಸೇವನೆ ಮಾಡಲಾಗುವುದು. ಇದರಿಂದ ಅವುಗಳನ್ನು ಪೋಷಕಾಂಶಗಳು ಮತ್ತೆ ಸೇರುತ್ತದೆ. ಅವರ ಡಯಟ್​ನಲ್ಲಿ ಮಾಂಸ, ಸಕ್ಕರೆ, ಆಲೂಗಡ್ಡೆ ಮತ್ತು ಡೈರಿ ಉತ್ಪನ್ನಗಳನ್ನು ಕಡಿಮೆ ಬಳಕೆ ಮಾಡುತ್ತಾರೆ.

ಜಪಾನಿ ಆಹಾರ
ಜಪಾನಿ ಆಹಾರ

ಡಯಟ್​​ ಮಾತ್ರವಲ್ಲದೇ, ಆರೋಗ್ಯವಾಗಿರುವತ್ತ ಕೂಡ ಅವರ ಆಹಾರದ ಶಿಸ್ತು ಸಹಾಯ ಮಾಡುತ್ತದೆ. ಜಪಾನಿಯರು ತಮ್ಮ ಆಹಾರ ಸೇವನೆಯಲ್ಲಿ ಶೇ 80ರಷ್ಟು ಶಿಸ್ತನ್ನು ಪಾಲನೆ ಮಾಡುತ್ತಾರೆ. ಶೇ 80ರಷ್ಟು ಹೊಟ್ಟೆ ತುಂಬಿದ್ದಂತೆ ಅವರು ತಿನ್ನುವುದನ್ನೇ ನಿಲ್ಲಿಸುತ್ತಾರೆ. ಇದರಿಂದ ತೂಕ ನಿರ್ವಹಣೆಗೂ ಸಹಾಯವಾಗುತ್ತದೆ.

ಡಾ ದಿವ್ಯಾ ಶರ್ಮಾ ತಿಳಿಸುವಂತೆ, ಜಪಾನಿಯರ ಆಹಾರ ಪದ್ಧತಿ ಸಮತೋಲಿತವಾಗಿದೆ. ಅವರ ಡಯಟ್​ ಪರಿಸರ, ಹವಾಮಾನ ಮತ್ತು ವಸ್ತುಗಳ ಲಭ್ಯತೆ ಅನುಸಾರವಾಗಿ ಇರುತ್ತದೆ. ಅವರು ಆಹಾರವನ್ನು ತಯಾರಿಸುವ ವಿಧ ಆರೋಗ್ಯಕ್ಕೆ ಹೆಚ್ಚು ಲಾಭವಾಗುತ್ತದೆ. ಇನ್ನು ಜಪಾನಿ ಆಹಾರದಲ್ಲಿರುವ ಕೆಲವು ಅಗತ್ಯ ಪದಾರ್ಥಗಳಿಂದ ಆಗುವ ಲಾಭಗಳು ಇಂತಿವೆ.

ಸಮುದ್ರ ಆಹಾರ: ಇದರಲ್ಲಿ ಒಮೆಗಾ 3 ಫ್ಯಾಟಿ ಆಮ್ಲ, ಡಿ ಮತ್ತು ಬಿ2 ವಿಟಮಿನ್​, ಕ್ಯಾಲ್ಸಿಯಂ ಮತ್ತು ಫಾಸ್ಪರಸ್​​, ಕಬ್ಬಿಣ, ಜಿಂಕ್​, ಐಯೊಡಿನ್​, ಮೆಗ್ನಿಶಿಯಂ ಮತ್ತು ಪೊಟಾಶಿಯಂನಂತಹ ಮಿನರಲ್ಸ್​ ಅಂಶಗಳು ಸಮುದ್ರಾಹಾರ ವಿಶೇಷವಾಗಿ ಮೀನಿನಲ್ಲಿರುತ್ತದೆ.

ಸೀವೀಡ್​: ಜಪಾನಿ ಆಹಾರದಲ್ಲಿ ಇದು ಹೆಚ್ಚಿನ ಮಹತ್ವ ಹೊಂದಿದೆ. ಇದರಲ್ಲಿ ಕೂಡ ಮಿನರಲ್ಸ್​, ವಿಟಮಿನ್​ ಬಿ12 ಮತ್ತು ಕೆ ಹಾಗೂ ಒಮೆಗಾ-3 ಫ್ಯಾಟಿ ಆ್ಯಸಿಡ್​ ಹೆಚ್ಚಿರುತ್ತದೆ.

ಸೋಯಾಬೀನ್​: ಜಪಾನಿ ಆಹಾರದಲ್ಲಿ ಸೋಯಾಬೀನ್​ ಯಥೇಚ್ಛವಾಗಿದೆ. ಸೋಯಾ ಹಾಲು, ಸೋಯಾದಿಂದ ಮಾಡಿದ ಚೀಸ್​​, ಸೂಪ್​ ಅನ್ನು ಡೈರಿ ಉತ್ಪನ್ನಗಳ ಬದಲಾಗಿ ಹೆಚ್ಚು ಬಳಕೆ ಮಾಡಲಾಗುವುದು. ಈ ಸೋಯಾದಲ್ಲಿ ಫೈಬರ್​​ ಆಧಾರಿತ ಪ್ರೊಟೀನ್​, ವಿಟಮಿನ್​ ಬಿ6, ಬಿ12, ಕ್ಯಾಲ್ಸಿಯಂ, ಮೆಗ್ನಿಶಿಯಂ, ಪೊಟಾಶಿಯಂ ಮತ್ತು ಐರನ್​ ಹಾಗೂ ಎಲ್ಲ ರೀತಿಯ ಅಮಿನೊ ಆಸಿಡ್​ ಇರುತ್ತದೆ.

ಹುದುಗಿಸಿದ ಆಹಾರ: ಜಪಾನ್​ ಡಯಟ್​ನಲ್ಲಿ ಹುದುಗಿಸುವ ಆಹಾರ ಬಳಕೆ ಮಾಡಲಾಗುವುದು. ಇದು ಕರುಳಿನ ಆರೋಗ್ಯಕ್ಕೆ ಹೆಚ್ಚು ಉಪಯುಕ್ತವಾಗುತ್ತದೆ. ಜೊತೆಗೆ ಉತ್ತಮ ಬ್ಯಾಕ್ಟೀರಿಯಾ ಉತ್ಪಾದನೆ ಮಾಡುತ್ತದೆ. ಇದರಿಂದ ಗ್ಯಾಸ್​, ಮಲಬದ್ದತೆ, ಆಸಿಡಿಟಿ ಸಮಸ್ಯೆ ನಿವಾರಣೆ ಆಗುತ್ತದೆ. ತೂಕ ನಷ್ಟ, ಚಯಾಪಚಯ ಕ್ರಿಯೆಗೆ ಇದು ಸಹಾಯವಾಗುತ್ತದೆ.

ಗ್ರೀನ್​ ಟೀ: ವಿವಿಧ ರೀತಿಯ ಹೂವು, ಹಣ್ಣು ಮತ್ತು ಔಷಧ ಬೇರುಗಳಿಂದ ಮಾಡಿದ ಗ್ರೀನ್​ ಟೀಯನ್ನು ಅವರು ಹೆಚ್ಚು ಸೇವಿಸುತ್ತಾರೆ. ಇದರಿಂದ ಆ್ಯಂಟಿ ಆಕ್ಸಿಡೆಂಟ್​ ಸಿಗುತ್ತದೆ. ಒತ್ತಡ ನಿವಾರಣೆಗೆ ಸಹಾಯ ಮಾಡುವ ಗ್ರೀನ್​ ಟೀ ಮನಸ್ಸನ್ನು ಶಾಂತಗೊಳಿಸಿ ಸಂತಸವಾಗಿಡುತ್ತದೆ. ಜೀರ್ಣಕ್ರಿಯೆಗೆ ಸಹಾಯ ಮಾಡಿ ಚರ್ಮ ಬೇಗ ಸುಕ್ಕುಗಟ್ಟದಂತೆ ತಡೆಯುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.