ಕರ್ನಾಟಕ

karnataka

ನಿಮ್ಮ ಮುದ್ದು ಕಂದನ ತ್ವಚೆ ಬಗ್ಗೆ ಇರಲಿ ಕಾಳಜಿ; ಚಳಿಗಾಲದ ಆರೈಕೆ ಹೀಗಿರಲಿ

By ETV Bharat Karnataka Team

Published : Nov 8, 2023, 1:29 PM IST

Child Skin Care: ಚಳಿಗಾಲದಲ್ಲಿ ತ್ವಚೆ ಬೇಗ ತೇವಾಂಶವನ್ನು ಕಳೆದುಕೊಳ್ಳುತ್ತದೆ. ಅದರಲ್ಲೂ ಮಕ್ಕಳ ತ್ವಚೆ ಹೆಚ್ಚು ಸೂಕ್ಷ್ಮವಾಗಿದ್ದು, ಅದಕ್ಕೆ ಅಗತ್ಯ ಆರೈಕೆ ಬೇಕಾಗುತ್ತದೆ.

take care of your baby sensitive skin in winter
take care of your baby sensitive skin in winter

ಪುಟ್ಟ ಮಗುವೊಂದು ಮನೆ ತುಂಬಿದಾಗ ಕೇವಲ ಸಂತಸ ಮಾತ್ರವಲ್ಲ. ಅಲ್ಲಿ ಜವಾಬ್ದಾರಿಯು ದುಪ್ಪಟ್ಟಾಗುತ್ತದೆ. ಶಿಶುಗಳ ಆರೈಕೆ ಸುಲಭದ ಮಾತಲ್ಲ. ಕಣ್ಣಲ್ಲಿ ಕಣ್ಣಿಟ್ಟು ಮಕ್ಕಳನ್ನು ಜೋಪಾನ ಮಾಡುವಾಗ ಹಲವು ವಿಚಾರಗಳ ಕುರಿತು ಗಮನ ಹರಿಸಬೇಕಾಗುತ್ತದೆ. ಅದರಲ್ಲೂ ಮಗುವಿನ ತ್ವಚೆಯ ವಿಷಯದಲ್ಲಿ ಹೆಚ್ಚಿನ ಕಾಳಜಿ ಹೊಂದಿರುವುದು ಅವಶ್ಯ. ಮಗುವಿನ ನಾಜೂಕು ತ್ವಚೆ ಬಗ್ಗೆ ಗಮನವಹಿಸದೇ ಹೋದಲ್ಲಿ ಅದು ಬಿರುಸು, ಕೆರೆತ ಮತ್ತು ಸೋಂಕಿಗೆ ಕಾರಣವಾಗುವ ಸಾಧ್ಯತೆ ಇದೆ. ಇನ್ನು, ಚಳಿಗಾಲದಲ್ಲಿ ಮಗುವಿನ ತ್ವಚೆ ಬಗ್ಗೆ ಹೆಚ್ಚಿನ ನಿಗಾ ನೀಡುವುದು ಅವಶ್ಯವಾಗಿದೆ.

ಮಾಶ್ಚರೈಸರ್​ ಮರೆಯಬೇಡಿ: ಮಕ್ಕಳ ತ್ವಚೆ ಮೃದುವಾಗಿದ್ದು, ಶೀಘ್ರವಾಗಿ ಮಾಶ್ಚರೈಸರ್​ ಅನ್ನು ಕಳೆದುಕೊಳ್ಳುತ್ತದೆ. ಇದೇ ಕಾರಣಕ್ಕೆ ಉತ್ತಮ ಗುಣಮಟ್ಟದ ಮಾಶ್ಚರೈಸರ್​ ಅನ್ನು ಮಗುವಿನ ಸ್ನಾನವಾದ ಕೂಡಲೇ ಹಚ್ಚಬೇಕು. ಮಾಶ್ಚರೈಸರ್​ ಆಯ್ಕೆ ಮಾಡುವಾಗ ಅದು ಅಲರ್ಜಿ ಆಗದಂತಹ ಮತ್ತು ಸುವಾಸನೆ ರಹಿತವಾಗಿರುವುದನ್ನು ಆರಿಸುವುದು ಉತ್ತಮ. ಮಗುವಿಗೆ ಪೆಟ್ರೋಲಿಯಂ ಜೆಲ್ಲಿ ಮತ್ತು ತೆಂಗಿನ ಎಣ್ಣೆಯನ್ನು ಆಯ್ಕೆ ಮಾಡಬಹುದಾಗಿದೆ. ಮಕ್ಕಳ ಉತ್ಪನ್ನಗಳಲ್ಲಿ ಸುವಾಸನೆ, ಬಣ್ಣ ಮತ್ತು ಆಲ್ಕೋಹಾಲ್​ ಅಂಶದ ಬಗ್ಗೆ ಎಚ್ಚರವಹಿಸುವುದು ಅಗತ್ಯ. ಯಾಕೆಂದರೆ ಇದು ಮಗುವಿನ ತ್ವಚೆಗೆ ಕಿರಿಕಿರಿ ಮಾಡುತ್ತದೆ.

ಒರಟಾದ ವಸ್ತುಗಳ ಆಯ್ಕೆ ಬೇಡ: ಮಕ್ಕಳಲ್ಲಿ ಕೊಳಕು ಮತ್ತು ಬೆವರುವಿಕೆ ಆಗುವ ಸಾಧ್ಯತೆ ಕಡಿಮೆ ಇರುತ್ತದೆ. ಇದೇ ಕಾರಣಕ್ಕೆ ಅವರಿಗೆ ಪದೇ ಪದೇ ಸ್ನಾನ ಮಾಡಿಸುವುದು, ಸೋಪ್​ ಬಳಕೆ ಮಾಡಬಾರದು. ಇದರಿಂದ ಮಗುವಿನಲ್ಲಿರುವ ನೈಸರ್ಗಿಕ ಎಣ್ಣೆ ಅಂಶ ಹೋಗಿ ತ್ವಚೆ ಬಿರುಸಾಗುತ್ತದೆ. ಮಗುವಿನ ಡೈಪರ್​ ಪ್ರದೇಶದಲ್ಲಿ ಕೊಳಕು ಎಂದು ಎನಿಸಿದರೆ, ಅದನ್ನು ಬೆಚ್ಚಗಿನ ನೀರಿನಲ್ಲಿ ಕ್ಲೆನ್ಸರ್​ ಅಥವಾ ಮೃದು ಸಾಬೂನಿನಲ್ಲಿ ಶುಚಿಗೊಳಿಸಿ. ಇದಾದ ಬಳಿಕ ಮೃದು ಟವೆಲ್​ನಲ್ಲಿ ಒರೆಸಿ. ದೊಡ್ಡವರು ಬಳಕೆ ಮಾಡುವ ಟಾಲ್ಕ್​ ಅಂಡ್​ ಪೌಡರ್​ ಅನ್ನು ಮಗುವಿಗೆ ಬಳಕೆ ಮಾಡಬಾರದು. ಇದರಿಂದ ತ್ವಚೆಯಲ್ಲಿ ಸೋಂಕು ಆಗುವ ಸಾಧ್ಯತೆ ಇರುತ್ತದೆ.

ಕಲೆಗಳು ಸಾಮಾನ್ಯ: ಮಕ್ಕಳು ಹೆಚ್ಚಾಗಿ ಮಲಗಿಕೊಂಡಿರುತ್ತಾರೆ. ಹೀಗಾಗಿ ಅವುಗಳ ಬಂಪ್​ ಭಾಗದ ಮೇಲೆ ಕಲೆಗಳು ಉಂಟಾಗುವುದು ಸಾಮಾನ್ಯ. ಇದನ್ನು ಕ್ರೆಡಲ್​ ಕ್ಯಾಪ್​ (ತೊಟ್ಟಿಲ ಕಲೆ) ಎಂದು ಕರೆಯುತ್ತಾರೆ. ಇವು ಅಪಾಯಕಾರಿಯಲ್ಲ. ಆದರೆ ಇದು ಮಕ್ಕಳಲ್ಲಿ ಕಿರಿಕಿರಿಗೆ ಕಾರಣವಾಗಬಹುದು. ಈ ವೇಳೆ ಆಲಿವ್​ ಎಣ್ಣೆಯನ್ನು ಹಚ್ಚಿ, ಕೆಲ ಕಾಲ ಬಿಟ್ಟು ಮಗುವಿಗೆ ಸ್ನಾನ ಮಾಡಿಸಬಹುದು.

ಇದನ್ನೂ ಓದಿ: ನವಜಾತ ಶಿಶುವಿನ ಆರೈಕೆ ಹೇಗೆ?.. ಇಲ್ಲಿವೆ ಉಪಯುಕ್ತ ಸಲಹೆಗಳು

ABOUT THE AUTHOR

...view details