ETV Bharat / bharat

ನವಜಾತ ಶಿಶುವಿನ ಆರೈಕೆ ಹೇಗೆ?.. ಇಲ್ಲಿವೆ ಉಪಯುಕ್ತ ಸಲಹೆಗಳು

author img

By

Published : Nov 21, 2020, 12:43 AM IST

ಜಾಗತಿಕವಾಗಿ ನವಜಾತ ಶಿಶುಗಳ ಸಾವು ಅಂದರೆ ಐದು ವರ್ಷದೊಳಗಿನ ಮಕ್ಕಳಲ್ಲಿ ಶೇ. 45ರಷ್ಟು ಇದ್ದು, ಇದರ ಪರಿಣಾಮ ಪ್ರತಿವರ್ಷ 2.7 ದಶಲಕ್ಷ ಮಕ್ಕಳು ಸಾಯುತ್ತಿದ್ದಾರೆ. ಇದಲ್ಲದೆ ಗರ್ಭಧಾರಣೆಯ ಕೊನೆಯ 3 ತಿಂಗಳುಗಳಲ್ಲಿ ಅಥವಾ ಹೆರಿಗೆಯ ಸಮಯದಲ್ಲಿ (ಹೆರಿಗೆ) 2.6 ಮಿಲಿಯನ್ ಶಿಶುಗಳು ಸಾಯುತ್ತಿವೆ. ಪ್ರತಿ ವರ್ಷ 303,000 ತಾಯಂದಿರೂ ಸಾವಿಗೀಡಾಗುತ್ತಿದ್ದಾರೆ.

ನವಜಾತ ಶಿಶು
ನವಜಾತ ಶಿಶು

ನವಜಾತ ಶಿಶು ಜನಸಿದಾಕ್ಷಣ ಆ ಕುಟುಂಬಕ್ಕೆ ಅಪಾರ ಸಂತೋಷ ತರುತ್ತದೆ. ಆದರೆ ಅದರೊಂದಿಗೆ ಸಾಕಷ್ಟು ಜವಾಬ್ದಾರಿಗಳು ಬರುತ್ತವೆ. ಶಿಶುಗಳು ಏನನ್ನೂ ವ್ಯಕ್ತಪಡಿಸಲು ಅಥವಾ ಹೇಳಲು ಸಾಧ್ಯವಾಗುವುದಿಲ್ಲ. ಹಾಗಾಗಿ ಅವುಗಳತ್ತ ಅಪಾರ ಗಮನ ಹರಿಸುವುದು ಅಗತ್ಯವಾಗಿದೆ. ಶಿಶುಗಳ ಆರೈಕೆ ಮಾಡುವ ಕುರಿತು ಅರಿವು ಮೂಡಿಸುವ ಸಲುವಾಗಿ ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ 15ರಿಂದ 21ರವರೆಗೆ ಶಿಶುವಿನ ಉಳಿವು ಮತ್ತು ಬೆಳವಣಿಗೆ, ಕಾಳಜಿಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು 'ನವಜಾತ ಶಿಶುಗಳ ಸಪ್ತಾಹ' ಆಚರಿಸಲಾಗುತ್ತದೆ.

'ನವಜಾತ ಶಿಶುವಿನ ಅವಧಿ (ಜೀವನದ ಮೊದಲ 28 ದಿನಗಳು) ಮಕ್ಕಳ ಉಳಿವಿಗಾಗಿ ಬಹಳ ನಿರ್ಣಾಯಕವಾಗಿದೆ. ಈ ಅವಧಿಯಲ್ಲಿ ಶಿಶುವು ಬಾಲ್ಯದಲ್ಲಿ ಬರಬಹುದಾದ ಯಾವುದೇ ಹೆಚ್ಚಿನ ಸಾವಿನ ಅಪಾಯ ಹೊಂದಿರುತ್ತದೆ. ಜೀವನದ ಮೊದಲ ತಿಂಗಳು ಜೀವಮಾನದ ಆರೋಗ್ಯ ಮತ್ತು ಅಭಿವೃದ್ಧಿಗೆ ಒಂದು ಅಡಿಪಾಯದ ಅವಧಿಯಾಗಿದೆ. ಆರೋಗ್ಯವಂತ ಶಿಶುಗಳು ಆರೋಗ್ಯವಂತ ವಯಸ್ಕರಾಗಿ ಬೆಳೆಯುತ್ತಾರೆ. ಅವರು ತಮ್ಮ ಸಮುದಾಯ ಮತ್ತು ಸಮಾಜಗಳ ಅಭಿವೃದ್ಧಿಗೆ ಕೊಡುಗೆ ನೀಡಬಹುದು' ಎಂದು ಭಾರತದ ರಾಷ್ಟ್ರೀಯ ಆರೋಗ್ಯ ಪೋರ್ಟಲ್ (ಎನ್‌ಎಚ್‌ಪಿ) ಹೇಳುತ್ತದೆ.

ಅಂಕಿ-ಅಂಶಗಳು:

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಪ್ರಕಾರ, ಜಾಗತಿಕವಾಗಿ ನವಜಾತ ಶಿಶುಗಳ ಸಾವು 1990ರಲ್ಲಿ 5 ಮಿಲಿಯನ್‌ ಇದ್ದು, 2019ರಲ್ಲಿ ಇದು 2.4 ಮಿಲಿಯನ್‌ಗೆ ಇಳಿದಿದೆ. ಮಕ್ಕಳು ಹುಟ್ಟಿದ ಮೊದಲ 28 ದಿನಗಳಲ್ಲಿ ಹೆಚ್ಚಿನ ಅಪಾಯವನ್ನು ಎದುರಿಸುತ್ತಾರೆ.

ಜಾಗತಿಕವಾಗಿ ನವಜಾತ ಶಿಶುಗಳ ಸಾವು ಅಂದರೆ ಐದು ವರ್ಷದೊಳಗಿನ ಮಕ್ಕಳಲ್ಲಿ ಶೇ. 45ರಷ್ಟು ಇದ್ದು, ಇದರ ಪರಿಣಾಮ ಪ್ರತಿವರ್ಷ 2.7 ದಶಲಕ್ಷ ಮಕ್ಕಳು ಸಾಯುತ್ತಿದ್ದಾರೆ. ಇದಲ್ಲದೆ ಗರ್ಭಧಾರಣೆಯ ಕೊನೆಯ 3 ತಿಂಗಳುಗಳಲ್ಲಿ ಅಥವಾ ಹೆರಿಗೆಯ ಸಮಯದಲ್ಲಿ (ಹೆರಿಗೆ) 2.6 ಮಿಲಿಯನ್ ಶಿಶುಗಳು ಸಾಯುತ್ತಿವೆ. ಪ್ರತಿ ವರ್ಷ 303,000 ತಾಯಂದಿರೂ ಸಾವಿಗೀಡಾಗುತ್ತಿದ್ದಾರೆ.

2016ರಲ್ಲಿ 2.6 ಮಿಲಿಯನ್ ಮಕ್ಕಳು ಜನನದ ಸಮಯದಲ್ಲಿ ಗುಣಮಟ್ಟದ ಆರೈಕೆಯ ಕೊರತೆ, ಅಥವಾ ಜನನದ ನಂತರ ನುರಿತ ಆರೈಕೆ ಮತ್ತು ಚಿಕಿತ್ಸೆಯಿಲ್ಲದೇ ಇತರೆ ಕಾಯಿಲೆಗಳಿಂದ ಮೃತಪಟ್ಟಿದ್ದಾರೆ.

ನವಜಾತ ಶಿಶುವಿನ ಮರಣಕ್ಕೆ ಕಾರಣಗಳು:

ನವಜಾತ ಶಿಶುಗಳ ಹೆಚ್ಚಿನ ಸಾವುಗಳು ಹುಟ್ಟಿದ ಮೊದಲ 28 ದಿನಗಳಲ್ಲಿ ಸಂಭವಿಸುತ್ತವೆ. ಇದಕ್ಕೆ ಮುಖ್ಯ ಕಾರಣಗಳು ಇಂತಿವೆ:

ಅವಧಿಪೂರ್ವ ಅಥವಾ ಅಕಾಲಿಕ ಜನನ

ಡೆಲವರಿಯ ಸಮಯದಲ್ಲಿ ಆಗುವ ತೊಂದರೆ

ನವಜಾತ ಶಿಶುವಿಗೆ ಸೋಂಕು ತಗುಲುವುದು

ಇಂಟ್ರಾಪಾರ್ಟಮ್-ಸಂಬಂಧಿತ ತೊಡಕುಗಳು

ನವಜಾತ ಶಿಶುವಿನ ಅವಧಿಯ ಅಂತ್ಯದಿಂದ ಮತ್ತು ಜೀವನದ ಮೊದಲ 5 ವರ್ಷಗಳಲ್ಲಿ ನ್ಯುಮೋನಿಯಾ, ಅತಿಸಾರ, ಜನ್ಮ ದೋಷಗಳು ಮತ್ತು ಮಲೇರಿಯಾಗಳು ಸಾವಿಗೆ ಮುಖ್ಯ ಕಾರಣಗಳಾಗಿವೆ ಎಂದು WHO ಹೇಳುತ್ತದೆ. ಅಪೌಷ್ಟಿಕತೆಯು ಮಕ್ಕಳಲ್ಲಿ ತೀವ್ರವಾದ ಕಾಯಿಲೆಗಳಿಗೆ ಗುರಿಯಾಗುವಂತೆ ಮಾಡುತ್ತದೆ.

ನವಜಾತ ಶಿಶುವಿನ ಕಾಳಜಿ ವಹಿಸುವುದು ಹೇಗೆ?

ಈ ಅಂಕಿ-ಅಂಶಗಳನ್ನು ನೋಡಿದ ನಂತರ ನವಜಾತ ಶಿಶುವಿಗೆ ಯಾವ ರೀತಿ ಕಾಳಜಿಯನ್ನು ನೀಡಬೇಕು ಎಂದು ನಿಮಗೆ ಆಶ್ಚರ್ಯವಾಗಬಹುದು. ಆದ್ದರಿಂದ, WHO ಶಿಫಾರಸ್ಸಿನ ಪ್ರಕಾರ ನೀವು ಹೀಗೆ ಮಾಡಬಹುದಾಗಿದೆ.

ನವಜಾತ ಶಿಶುವನ್ನು ಬೆಚ್ಚಗಿನ ವಾತಾವರಣದಲ್ಲಿ ಇಟ್ಟು ಆರೈಕೆ ಮಾಡಬೇಕು.

ಆರೋಗ್ಯಕರ ಹೊಕ್ಕುಳಬಳ್ಳಿ ಮತ್ತು ಚರ್ಮದ ಆರೈಕೆ

ಆರಂಭಿಕ ಮತ್ತು ವಿಶೇಷ ಸ್ತನ್ಯಪಾನ

ಗಂಭೀರ ಆರೋಗ್ಯ ಸಮಸ್ಯೆಗಳ ಸೂಚನೆಗಳು ಕಂಡುಬಂದಾಗ ಹೆಚ್ಚು ಆರೈಕೆ ಮಾಡುವ ಅಗತ್ಯತೆ

ಕುಟುಂಬಗಳಿಗೆ ಈ ರೀತಿ ಸಲಹೆ ನೀಡಿ:

ಅಗತ್ಯವಿದ್ದರೆ ತ್ವರಿತ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯಿರಿ

ಜನನವನ್ನು ನೋಂದಾಯಿಸಿ

ರಾಷ್ಟ್ರೀಯ ವೇಳಾಪಟ್ಟಿಗಳ ಪ್ರಕಾರ ಮಗುವನ್ನು ಸಮಯೋಚಿತ ವ್ಯಾಕ್ಸಿನೇಷನ್ಗಾಗಿ ಕರೆತರಬೇಕು

COVID-19 ಮತ್ತು ನವಜಾತ ಶಿಶುವಿನ ಆರೈಕೆ:

ಗರ್ಭಾವಸ್ಥೆಯಲ್ಲಿ, ಹೆರಿಗೆಯ ಸಮಯದಲ್ಲಿ ಅಥವಾ ಸ್ತನ್ಯಪಾನ ಮಾಡುವಾಗ ಕೊರೊನಾ ವೈರಸ್​​ ತಾಯಿಯಿಂದ ಮಗುವಿಗೆ ಹರಡಬಹುದೇ ಎಂಬುದು ಇನ್ನೂ ತಿಳಿದಿಲ್ಲ. ಆದಾಗ್ಯೂ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು (ಸಿಡಿಸಿ) ಹೇಳಿರುವಂತೆ ನೀವು ನೆನಪಿಟ್ಟುಕೊಳ್ಳಬೇಕಾದ ಅಂಶಗಳು ಇಲ್ಲಿದೆ:

ಕೋವಿಡ್​-19ಗೆ ಚಿಕಿತ್ಸೆ ಪಡೆಯಿರಿ ಅಥವಾ ಪರೀಕ್ಷೆ ಮಾಡಿಸಿ, ನಿಮ್ಮ ನವಜಾತ ಶಿಶು ನಿಮ್ಮೊಂದಿಗೆ ಒಂದೇ ಕೋಣೆಯಲ್ಲಿ ಇರುವುದರಿಂದ ಆಗುವ ಅಪಾಯಗಳು ಮತ್ತು ಪ್ರಯೋಜನಗಳನ್ನು ನಿಮ್ಮ ವೈದ್ಯರೊಂದಿಗೆ ಚರ್ಚಿಸಿ.

ನಿಮ್ಮ ನವಜಾತ ಶಿಶುವನ್ನು ಹಿಡಿದಿಟ್ಟುಕೊಳ್ಳುವ ಅಥವಾ ಆರೈಕೆ ಮಾಡುವ ಮೊದಲು ಕನಿಷ್ಠ 20 ಸೆಕೆಂಡುಗಳ ಕಾಲ ನಿಮ್ಮ ಕೈಗಳನ್ನು ಸಾಬೂನು ಮತ್ತು ನೀರಿನಿಂದ ತೊಳೆಯಿರಿ. ಸಾಬೂನು ಮತ್ತು ನೀರು ಲಭ್ಯವಿಲ್ಲದಿದ್ದರೆ, ಕನಿಷ್ಠ ಶೇ. 60ರಷ್ಟು ಆಲ್ಕೋಹಾಲಿನೊಂದಿಗೆ ಹ್ಯಾಂಡ್ ಸ್ಯಾನಿಟೈಸರ್ ಬಳಸಬೇಕು.

ನಿಮ್ಮ ನವಜಾತ ಶಿಶುವಿನ 6 ಅಡಿಗಳ ಒಳಗೆ, ವಿಶೇಷವಾಗಿ ಸ್ತನ್ಯಪಾನ ಮಾಡುವಾಗ ಮುಖವಾಡ ಧರಿಸಬೇಕು.

ನಿಮ್ಮ ನವಜಾತ ಶಿಶುವನ್ನು ನಿಮ್ಮಿಂದ ಸಾಧ್ಯವಾದಷ್ಟು 6 ಅಡಿಗಳಿಗಿಂತ ಹೆಚ್ಚು ದೂರವಿಡಬೇಕು.

ನಿಮ್ಮ ಮಗುವಿಗೆ ಮಾಸ್ಕ್​ ಹಾಕಬೇಡಿ. ಇದರಿಂದ ಮಗು ಹಠಾತ್ ಸಾವನ್ನಪ್ಪುವ ಸಾಧ್ಯತೆ ಹೆಚ್ಚಿರುತ್ತದೆ.

ನಿಮ್ಮ ಮಗು ಚೆನ್ನಾಗಿ ನಿದ್ರೆ ಮಾಡುತ್ತದೆಯೇ ಎಂಬುದನ್ನು ಕಂಡುಕೊಳ್ಳಿ. ಏಕೆಂದರೆ ಇದರಿಂದ ರೋಗಗಳನ್ನು ತಡೆಗಟ್ಟಬಹುದಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.