ಕರ್ನಾಟಕ

karnataka

ಮರಿಗಳನ್ನು ರಕ್ಷಿಸಿಕೊಳ್ಳಲು ಕೊಳಕು ಮಂಡಲ ಹಾವು ಕಚ್ಚಿ ಪ್ರಾಣ ಬಿಟ್ಟಿತು ಶ್ವಾನ

By

Published : Dec 7, 2021, 10:34 PM IST

ಕೊಳಕು ಮಂಡಲ ಹಾವು ಕಚ್ಚಿ ಪ್ರಾಣ ಬಿಟ್ಟ ನಾಯಿ

ನಾಯಿ ಮರಿಗಳನ್ನು ತಿನ್ನಲು ಹಾವು ಬಂದಿದ್ದು, ನಾಯಿಯು ತನ್ನ ಮರಿಗಳನ್ನು ರಕ್ಷಿಸಿಕೊಳ್ಳಲು ತೀವ್ರ ಪ್ರತಿರೋಧವೊಡ್ಡಿದೆ. ಅದರಂತೆ ತನ್ನ ಮರಿಗಳನ್ನ ರಕ್ಷಿಸಿಕೊಂಡಿದೆ. ಹಾವನ್ನು ಹಿಡಿಯುವಾಗ ಅಚಾನಕ್ಕಾಗಿ ಅದನ್ನು ಕಚ್ಚಿದ ಪರಿಣಾಮ ನಾಯಿ ಸಾವನ್ನಪ್ಪಿದೆ.

ತುಮಕೂರು : ಮರಿಗಳನ್ನು ರಕ್ಷಿಸಿಕೊಳ್ಳಲು ಕೊಳಕು ಮಂಡಲ ಹಾವನ್ನ ಕಚ್ಚಿದ್ದ ನಾಯಿ ಪ್ರಾಣ ಬಿಟ್ಟಿರುವ ಮನಕಲಕುವ ಘಟನೆ ನಗರದ ಅಗ್ರಹಾರದ ಬಳಿ ನಡೆದಿದೆ.

ಹುಲ್ಲಿನ ಬಣವೆ ಬಳಿ ನಾಲ್ಕು ಮರಿಗಳಿಗೆ ಜನ್ಮ ನೀಡಿದ್ದ ನಾಯಿಯ ಸಮೀಪ ಕೊಳಕು ಮಂಡಲ ಹಾವು ಪ್ರತ್ಯಕ್ಷವಾಗಿತ್ತು. ನಾಯಿ ಮರಿಗಳನ್ನು ತಿನ್ನಲು ಹಾವು ಬಂದಿದ್ದು, ನಾಯಿಯು ತನ್ನ ಮರಿಗಳನ್ನು ರಕ್ಷಿಸಿಕೊಳ್ಳಲು ತೀವ್ರ ಪ್ರತಿರೋಧವೊಡ್ಡಿದೆ. ಅದರಂತೆ ತನ್ನ ಮರಿಗಳನ್ನ ರಕ್ಷಿಸಿಕೊಂಡಿದೆ.

ಕೊಳಕು ಮಂಡಲ ಹಾವು ಕಚ್ಚಿ ಪ್ರಾಣ ಬಿಟ್ಟ ನಾಯಿ

ವಿಷಯ ತಿಳಿದು ಸ್ಥಳಕ್ಕೆ ಬಂದ ವಾರಂಗಲ್ ವನ್ಯ ಜೀವಿ ಸಂಸ್ಥೆಯ ದಿಲೀಪ್ ಮತ್ತು ತಂಡದವರು, ಹಾವನ್ನು ಹಿಡಿಯುವಾಗ ನಾಯಿಯು ಅಚಾನಕ್ಕಾಗಿ ಹಾವನ್ನ ಕಚ್ಚಿದೆ. ಅಲ್ಲದೆ ಹಾವು ಕೂಡ ತಕ್ಷಣ ತಪ್ಪಿಸಿಕೊಂಡು ಹುಲ್ಲಿನ ಬಳಿ ಅವಿತುಕೊಂಡಿದೆ. ಸುಮಾರು ಅರ್ಧ ಗಂಟೆ ಕಾಲ ಕಾರ್ಯಾಚರಣೆ ನಡೆಸಿ ಹಾವನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ. ಆದ್ರೆ ಕೊಳಕುಮಂಡಲ ಹಾವನ್ನು ಕಚ್ಚಿದ ಪರಿಣಾಮ ನಾಯಿ ಸಾವನ್ನಪ್ಪಿದೆ.

ABOUT THE AUTHOR

...view details