ಕರ್ನಾಟಕ

karnataka

ಹಿಂದಿನ ಸರ್ಕಾರಗಳಿಗೆ ಟಿಪ್ಪು ಹೀರೋ: ಅಡ್ಡಂಡ ಕಾರ್ಯಪ್ಪ

By

Published : Feb 22, 2023, 3:36 PM IST

ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ

ಖಳನಾಯಕನನ್ನು ಖಳನಾಯಕನಾಗಿಯೇ ತೋರಿಸಬೇಕು. ಟಿಪ್ಪು ನಾಲ್ಕು ದೇವಸ್ಥಾನಗಳಿಗೆ ದತ್ತಿ ಕೊಟ್ಟು 80 ದೇವಸ್ಥಾನಗಳನ್ನು ಒಡೆದುಹಾಕಿದ್ದಾನೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಹೇಳಿದರು.

ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ

ತುಮಕೂರು : "ನಾಟಕ ಪ್ರದರ್ಶನಕ್ಕೆ ತಡೆ ಕೋರಿ ಅರ್ಜಿ ಹಾಕಿದವರು ಓಡಿ ಹೋದರು. ಸೂಕ್ತ ದಾಖಲೆ ಒದಗಿಸಲಾಗದೇ ಪಲಾಯನ ಮಾಡಿದರು. ಈ ಹಿಂದಿನ ಸರ್ಕಾರಗಳು ಟಿಪ್ಪುವನ್ನು ಹೀರೋ ಎಂದು ಬಿಂಬಿಸಿವೆ" ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಟೀಕಿಸಿದರು.

ತುಮಕೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಠತುಮಕೂರು ಶೈಕ್ಷಣಿಕವಾಗಿ ಮುಂದಿರುವ ಜಿಲ್ಲೆ. ಅತ್ಯಂತ ಬುದ್ದಿವಂತರ ಜಿಲ್ಲೆ ಎಂದು ಕರೆಸಿಕೊಳ್ಳಬಹುದು. ಇಲ್ಲಿ ನಾಟಕ ಮಾಡುವುದಕ್ಕೆ ರಂಗಾಯಣಕ್ಕೆ ಬಹಳ ಹೆಮ್ಮೆ ಇದೆ. ಗುಬ್ಬಿ ವೀರಣ್ಣ ರಂಗಮಂದಿರ ಕರ್ನಾಟಕದ ರಂಗಭೂಮಿಯ ಒಂದು ನಕ್ಷತ್ರ. ವಿದ್ಯೆ ಇಲ್ಲದಿದ್ದರೂ ಡಾಕ್ಟರೇಟ್​ ಪಡೆದ ಒಬ್ಬ ಮಹಾಮೇಧಾವಿ ಅವರು. ಅಂತಹ ರಂಗಕರ್ಮಿಯ ಹೆಸರಿನಲ್ಲಿರುವ ರಂಗಭೂಮಿಯಲ್ಲಿ ಮಾರ್ಚ್​ 2ರಂದು ಟಿಪ್ಪುವಿನ ನಿಜಕನಸುಗಳು ನಾಟಕ ಅನಾವರಣಗೊಳ್ಳಲಿದೆ. ಸಂಜೆ ಆರು ಗಂಟೆಗೆ ನಾಟಕ ಪ್ರದರ್ಶನವಾಗಲಿದೆ. ಇದರ ಉದ್ದೇಶವೇ ಸತ್ಯದ ಅನಾವರಣ. ಹಾಗಾಗಿ ಎಲ್ಲರೂ ಬರಬೇಕುಠ ಎಂದು ವಿನಂತಿಸಿದರು.

"ಟಿಪ್ಪು ನಿಜ ಕನಸುಗಳು ಪುಸ್ತಕ ಮಾರಾಟಕ್ಕೆ ಅನುಮತಿ ಸಿಕ್ಕಿದೆ. ಸುಮಾರು 12 ಆವೃತ್ತಿಗಳು ಮುದ್ರಣ ಆಗಿವೆ. 40 ಸಾವಿರ ಪ್ರತಿಗಳು ಮಾರಾಟ ಆಗಿವೆ ಎಂದರು. ಇಷ್ಟು ಕಡಿಮೆ ಅವಧಿಯಲ್ಲಿ ಇಷ್ಟು ಪ್ರಮಾಣದಲ್ಲಿ ಪ್ರತಿಗಳು ಮಾರಾಟವಾಗಿರುವುದು ಚಾರಿತ್ರಿಕ ದಾಖಲೆ. ಪೊಲೀಸರ ಸಲಹೆಯಂತೆ ಒಳಾಂಗಣ ವೇದಿಕೆಯಲ್ಲಿ ನಾಟಕವನ್ನು ಪ್ರದರ್ಶನ ಮಾಡಲಾಗುತ್ತದೆ" ಎಂದರು.

"ನಾನು ಶಾಂತಿಪ್ರಿಯ. ಶಾಂತಿಯುತವಾಗಿ ಪ್ರದರ್ಶನ ಆಗಲಿ ಅನ್ನೋದೇ ನನ್ನ ಆಶಯ. ಇದರಿಂದ ಬಿಜೆಪಿಗೆ ಲಾಭ ಆಗುತ್ತದೆ, ಕಾಂಗ್ರೆಸ್​ಗೆ ನಷ್ಟ ಆಗುತ್ತದೆ ಎಂದು ಲೆಕ್ಕ ಹಾಕಿ ಕೂರುವ ವ್ಯಾಪಾರಿ ನಾನಲ್ಲ. ನಾನೊಬ್ಬ ರಂಗಭೂಮಿ ಕಲಾವಿದ. ನಾಟಕ ಮಾಡೋದಷ್ಟೇ ನನ್ನ ಕೆಲಸ" ಎಂದು ಸ್ಪಷ್ಟಪಡಿಸಿದರು.

"ಇದು ಬಿಜೆಪಿಯ ಕಥಾನಕ ಅಲ್ಲ, ಟಿಪ್ಪು ಕಥಾನಕ. ಬಿಜೆಪಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಖಳನಾಯಕನನ್ನು ಖಳನಾಯಕನಾಗಿಯೇ ತೋರಿಸಬೇಕು. ಟಿಪ್ಪು ನಾಲ್ಕು ದೇವಸ್ಥಾನಗಳಿಗೆ ದತ್ತಿ ಕೊಟ್ಟು 80 ದೇವಸ್ಥಾನಗಳನ್ನು ಒಡೆದುಹಾಕಿದ. ಹೀಗಾಗಿ 80 ದೇವಸ್ಥಾನಗಳನ್ನು ಒಡೆದಿದ್ದನ್ನು ಹೇಳಬೇಕಾಗುತ್ತದೆ" ಎಂದರು.

"ಸಾವಿರಾರು ಜನರನ್ನು ಕೊಂದಿರುವುದು, ಮತಾಂತರ ಮಾಡಿದ್ದನ್ನೂ ಹೇಳಬೇಕಾಗುತ್ತದೆ. ಇದು ಆ ಸಮುದಾಯದ ಕೆಲವರ ಮನಸ್ಥಿತಿಯೇ ಹಾಗಿದೆ. ಅವರು ಶಿಶುನಾಳ ಷರೀಫರನ್ನು ಗೌರವಿಸಲಾರರು. ಅವರು ಮತಾಂಧ ಟಿಪ್ಪುವನ್ನೇ ಗೌರವಿಸ್ತಾರೆ. ಯಾಕಂದ್ರೆ ಹಿಂದೂಸ್ತಾನವನ್ನು ಇಸ್ಲಾಂ ರಾಷ್ಟ್ರ ಮಾಡಲು ಹೊರಟವರೇ ಅವರಿಗೆ ಪ್ರೀತಿ ಪಾತ್ರರು" ಎಂದು ಕಿಡಿ ಕಾರಿದರು.

"ಭಾವೈಕ್ಯತೆಯನ್ನು ಸಾರಿದ ಶಿಶುನಾಳ ಶರೀಫರು, ಅಬ್ದುಲ್ ಕಲಾಂ ಅವರಿಗೆ ಪ್ರೀತಿಪಾತ್ರರಲ್ಲ. ಉರಿಗೌಡ ಮತ್ತು ನಂಜೇಗೌಡ ಇತಿಹಾಸದ ವ್ಯಕ್ತಿಗಳೇ. ಅದಕ್ಕೆ ನನ್ನ ಬಳಿ ದಾಖಲೆಗಳಿವೆ. ಗಿರೀಶ್ ಕಾರ್ನಾಡ್ ಅವರು ಉದ್ದೇಶಪೂರ್ವಕವಾಗಿಯೇ ಟಿಪ್ಪುವನ್ನು ಹೀರೋ ಮಾಡಿದ್ದಾರೆ. ತುಘಲಕ್ ನನ್ನ ನಮ್ಮ ಚರಿತ್ರೆ ಹುಚ್ಚು ದೊರೆ ಎಂದರೆ, ಕಾರ್ನಾಡ್ ಅವರು ಆದರ್ಶ ರಾಜ ಅಂತಾ ಹೇಳ್ತಾರೆ. ಔರಂಗಜೇಬ್ ಆದರ್ಶ ರಾಜ ಅಂತಾರೆ. ಈ ಮೂಲಕ ನಮ್ಮ ಸಂಸ್ಕೃತಿಗೆ ಏಟು ಕೊಡುವುದೇ ಆಗಿನ ಎಡಪಂಥೀಯ ಕಾಂಗ್ರೆಸ್​​ನ ಉದ್ದೇಶವಾಗಿತ್ತು" ಎಂದು ತಿಳಿಸಿದರು.

ಕಾರ್ಯಪ್ಪ ಎಂಎಲ್​ಸಿ ಆಗಲು ಈ ಪುಸ್ತಕ ಬರೆದಿದ್ದಾರೆ ಎಂಬ ಹೆಚ್.ವಿಶ್ವನಾಥ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, "ಬಿಜೆಪಿಯಿಂದ ಆಯ್ಕೆಯಾಗಿ ಕಾಂಗ್ರೆಸ್ ಮನೆಯಲ್ಲಿ ಊಟ ಮಾಡುವ ಹಳ್ಳಿಹಕ್ಕಿಯಲ್ಲ. ಅದು ಹಾರೋ ಹಕ್ಕಿ. ಆ ಹಾರೋಹಕ್ಕಿಗೆ ಒಂದು ರಾತ್ರಿ ಕನಸು ಬಿದ್ದಿದೆ" ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

ಇದನ್ನೂ ಓದಿ:ನಾನು ಚುನಾವಣೆಗೆ ನಿಲ್ಲೋದಿಲ್ಲ, ಮತ್ತೆ ಸದನಕ್ಕೆ ಬರೋದಿಲ್ಲ: ಭಾವುಕರಾಗಿ ನುಡಿದ ಬಿಎಸ್​ವೈ

ABOUT THE AUTHOR

...view details