ಕರ್ನಾಟಕ

karnataka

ಕಿಮ್ಮನೆ ಬಹಿರಂಗ ಪತ್ರದ ಕುರಿತು ಅಧ್ಯಕ್ಷರು ಗಮನ ಹರಿಸುತ್ತಾರೆ : ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸುಂದರೇಶ್

By

Published : Sep 25, 2021, 5:53 PM IST

Shivamogga congress head

ಆರಗ ಜ್ಞಾನೇಂದ್ರ ಗೃಹ‌ ಸಚಿವರಾಗಿ ವಿಫಲರಾಗಿದ್ದಾರೆ. ರಾಜ್ಯದಲ್ಲಿ ಹಾಗೂ ಜಿಲ್ಲೆಯಲ್ಲಿ ಅಪರಾಧ ಪ್ರಕರಣ ಹೆಚ್ಚಾಗುತ್ತಿವೆ. ಇದಕ್ಕೆ ಆರಗ ಜ್ಞಾನೇಂದ್ರ ಸರಿಯಾದ ಕ್ರಮ ತೆಗೆದುಕೊಳ್ಳಬೇಕಿದೆ. ಅಧಿಕಾರದಲ್ಲಿದ್ದು ಅಪರಾಧಗಳನ್ನು ಮಟ್ಟ ಹಾಕಬೇಕಿದೆ..

ಶಿವಮೊಗ್ಗ :ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್ ಅವರು ಆರ್ ಎಂ ಮಂಜುನಾಥ ಗೌಡರ ವಿರುದ್ಧ ಬಹಿರಂಗ ಪತ್ರ ಬರೆದಿರುವುದು ಪಕ್ಷದ ಆಂತರಿಕ ವಿಚಾರ. ಈ ಕುರಿತು ಕೆಪಿಸಿಸಿ ಅಧ್ಯಕ್ಷರು ಗಮನ ಹರಿಸುತ್ತಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್ ಎಸ್ ಸುಂದರೇಶ್ ಹೇಳಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಿಮ್ಮನೆ ಹಿರಿಯರಿದ್ದಾರೆ. ಕಪಿಸಿಸಿ ವಕ್ತಾರರಾಗಿದ್ದಾರೆ. ಇದೊಂದು ಆಂತರಿಕ ವಿಚಾರವಾಗಿದೆ. ಪಕ್ಷದಲ್ಲಿಯೇ ಬಗೆಹರಿಸಲಾಗುವುದು. ಆದರೆ, ಪಾದಯಾತ್ರೆ ಬೇರೆಯವರು ನಡೆಸುತ್ತಿದ್ದು, ಅದರಲ್ಲಿ ಮಂಜುನಾಥ ಗೌಡರು ಭಾಗಿಯಾಗುತ್ತಿರುವುದಾಗಿ ಅವರೇ ತಿಳಿಸಿದ್ದಾರೆ ಎಂದರು.

ಮಾಜಿ ಸಚಿವ ಕಿಮ್ಮನೆ ಬಹಿರಂಗ ಪತ್ರದ ಕುರಿತಂತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸುಂದರೇಶ್ ಪ್ರತಿಕ್ರಿಯೆ ನೀಡಿರುವುದು..

ಭಾರತ್ ಬಂದ್​ಗೆ ಸಂಪೂರ್ಣ ಬೆಂಬಲ

ಕಿಸಾನ್ ಸಂಯುಕ್ತ ಮೋರ್ಚಾ ಸೋಮವಾರ ಕರೆ ನೀಡಿರುವ ಭಾರತ್ ಬಂದ್​ಗೆ ಜಿಲ್ಲಾ‌ ಕಾಂಗ್ರೆಸ್ ಘಟಕ ಸಂಪೂರ್ಣ ಬೆಂಬಲ ವ್ಯಕ್ತಪಡಿಸಲಿದೆ. ಅಂದಿನ ಪ್ರತಿಭಟನೆಯಲ್ಲಿ ಭಾಗವಹಿಸುವುದಾಗಿ ತಿಳಿಸಿದರು.

ಗೃಹ ಸಚಿವರಾಗಿ ಆರಗ ಜ್ಞಾನೇಂದ್ರ ವಿಫಲ

ಆರಗ ಜ್ಞಾನೇಂದ್ರ ಗೃಹ‌ ಸಚಿವರಾಗಿ ವಿಫಲರಾಗಿದ್ದಾರೆ. ರಾಜ್ಯದಲ್ಲಿ ಹಾಗೂ ಜಿಲ್ಲೆಯಲ್ಲಿ ಅಪರಾಧ ಪ್ರಕರಣ ಹೆಚ್ಚಾಗುತ್ತಿವೆ. ಇದಕ್ಕೆ ಆರಗ ಜ್ಞಾನೇಂದ್ರ ಸರಿಯಾದ ಕ್ರಮ ತೆಗೆದುಕೊಳ್ಳಬೇಕಿದೆ. ಅಧಿಕಾರದಲ್ಲಿದ್ದು ಅಪರಾಧಗಳನ್ನು ಮಟ್ಟ ಹಾಕಬೇಕಿದೆ ಎಂದರು.

ಇದನ್ನೂ ಓದಿ:ಸರ್ಕಾರಕ್ಕೆ ಕಟ್ಟಬೇಕಿರುವ ₹122 ಕೋಟಿ ಕಟ್ಟಿ, ಮಂಜುನಾಥ್ ಗೌಡ ವಿರುದ್ಧ ಕಿಮ್ಮನೆ ಬಹಿರಂಗ ಪತ್ರ..

ABOUT THE AUTHOR

...view details