ಕರ್ನಾಟಕ

karnataka

ಶಂಕಿತ ಉಗ್ರ ಸೈಯ್ಯದ್ ಯಾಸೀನ್​​ನೊಂದಿಗೆ ವಿವಿಧ ಸ್ಥಳಗಳ ಮಹಜರು ನಡೆಸಿದ ಪೊಲೀಸರು

By

Published : Sep 20, 2022, 10:06 PM IST

Updated : Sep 20, 2022, 11:03 PM IST

place-inquest-by-police-with-suspected-terrorist-syed-yasin
ಶಂಕಿತ ಉಗ್ರ ಸೈಯ್ಯದ್ ಯಾಸೀನ್​​ನೊಂದಿಗೆ ವಿವಿಧ ಸ್ಥಳಗಳ ಮಹಜರು ನಡೆಸಿದ ಪೊಲೀಸರು ()

ಶಿವಮೊಗ್ಗದ ಶಂಕಿತ ಉಗ್ರ ಸೈಯ್ಯದ್​ ಯಾಸೀನ್​ನನ್ನು ಪೊಲೀಸರು ವಿವಿಧ ಸ್ಥಳಗಳಿಗೆ ಕರೆದೊಯ್ದು ಸ್ಥಳ ಮಹಜರು ನಡೆಸಿದ್ದಾರೆ.

ಶಿವಮೊಗ್ಗ: ನಗರದ ಶಂಕಿತ ಉಗ್ರ ಸೈಯ್ಯದ್ ಯಾಸೀನ್ ನನ್ನು ಪೊಲೀಸರು ವಿವಿಧ ಸ್ಥಳಗಳಿಗೆ ಕರೆದುಕೊಂಡು ಹೋಗಿ ಸ್ಥಳ ಮಹಜರು ನಡೆಸಿದ್ದಾರೆ. ಮೊದಲಿಗೆ ಶಿವಮೊಗ್ಗದ ಸಿದ್ದೇಶ್ವರ ನಗರದ ಮೊದಲನೇ ತಿರುವಿನಲ್ಲಿರುವ ಯಾಸೀನ್ ಮನೆಯನ್ನು ಮಹಜರು ಮಾಡಲಾಯಿತು. ಇವರ ಮನೆಯಲ್ಲಿ ಸುಮಾರು ಒಂದೂವರೆ ತಾಸಿಗೂ ಹೆಚ್ಚು ಕಾಲ ವಿಚಾರಣೆ ನಡೆಸಲಾಗಿದ್ದು,ಉಗ್ರ ಸಂಘಟನೆಯಲ್ಲಿ ತೊಡಗಿಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಶಂಕಿತ ಉಗ್ರ ಸೈಯ್ಯದ್ ಯಾಸೀನ್​​ನೊಂದಿಗೆ ವಿವಿಧ ಸ್ಥಳಗಳ ಮಹಜರು ನಡೆಸಿದ ಪೊಲೀಸರು

ನಂತರ ಯಾಸೀನ್ ಮನೆ ಬಳಿ ಇರುವ ಹಳೆ ಗುರುಪುರದ ತುಂಗಾ ನದಿ ದಂಡೆ ಬಳಿ ಮಹಜರು ಮಾಡಲಾಗಿದೆ. ತುಂಗಾ ನದಿ ದಂಡೆಯ ಮೇಲೆ ಯಾಸೀನ್, ಮಾಜ್ ಹಾಗೂ ಶಾರೀಕ್ ಬಾಂಬ್ ತಯಾರಿಸಿ, ಅದನ್ನು ತುಂಗಾ ನದಿಗೆ ಎಸೆಯುತ್ತಿದ್ದರು ಎಂದು ಹೇಳಲಾಗಿದೆ. ಇನ್ನಷ್ಟು ಸ್ಥಳಗಳ ಮಹಜರು ನಡೆಸಲಾಗುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮಂಗಳೂರಿನಲ್ಲಿ ಮಾಜ್ ಮನೆಯನ್ನು ಶಿವಮೊಗ್ಗ ಪೊಲೀಸರು ಮಹಜರು ನಡೆಸಿದ್ದಾರೆ. ಸದ್ಯ ಈತನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ತೀರ್ಥಹಳ್ಳಿ ಡಿವೈಎಸ್ಪಿ ಶಾಂತವೀರ್ ರವರ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ.

ಇದನ್ನೂ ಓದಿ :ಸೈಯ್ಯದ್ ಯಾಸೀನ್ ಒಳ್ಳೆಯ ಹುಡುಗ, ಆತನ ತಲೆ ಕೆಡಿಸಲಾಗಿದೆ: ಶಾಮೀರ್ ಖಾನ್

Last Updated :Sep 20, 2022, 11:03 PM IST

ABOUT THE AUTHOR

...view details