ಕರ್ನಾಟಕ

karnataka

ನಾನು ಕೇವಲ ಕುರುಬರಿಗೋಸ್ಕರ ಹೋರಾಟ ಮಾಡ್ತಾ ಇಲ್ಲ: ಸಚಿವ ಈಶ್ವರಪ್ಪ

By

Published : Feb 9, 2021, 6:05 PM IST

ಮೊದಲು ಪಾದಯಾತ್ರೆಗೆ ಬರಲ್ಲ, ನನ್ನ ಬೆಂಬಲವಿದೆ ಎಂದವರು ಕೊನೆಗೆ ಪಾದಯಾತ್ರೆ ಹೇಗಾಯ್ತು ಅಂತ ಕೇಳಲೂ ಬರಲಿಲ್ಲ. ಇದೇನಾ ನಿಮ್ಮ ಬೆಂಬಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಚಿವ ಈಶ್ವರಪ್ಪ ಗರಂ ಆದರು.

ks-eshwarappa
ಸಚಿವ ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ:ನಾನು ಕೇವಲ ಕುರುಬರಿಗೋಸ್ಕರ ಹೋರಾಟ ಮಾಡ್ತಾ ಇಲ್ಲ. ಹಿಂದುಳಿದ ವರ್ಗದಲ್ಲಿ ಅರ್ಹತೆ ಇರುವವರ ಪರವಾಗಿ ಹೋರಾಟ ಮಾಡುತ್ತೇನೆ ಎಂದು ಸಚಿವ ಈಶ್ವರಪ್ಪ ತಿಳಿಸಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ದಲಿತ, ಹಿಂದುಳಿದ ಸಮಾಜಗಳಿಗೆ ಅನ್ಯಾಯವಾದಾಗ ಧ್ವನಿ ಎತ್ತಬಾರದು ಎಂದು ಯಾವ ಸಂವಿಧಾನವೂ ಹೇಳಿಲ್ಲ. ಹೋರಾಟದ ಬೇಡಿಕೆಗಳು ಹೊಸದಾಗಿರುವುದಲ್ಲ, ಎಲ್ಲವೂ ಸ್ವಾತಂತ್ರ್ಯ ಪೂರ್ವದಲ್ಲಿಯೇ ಇದ್ದವು. ಸ್ವಾಮೀಜಿ ಹೋರಾಟಕ್ಕೆ ಹಾಗೂ ಸರ್ಕಾರದ ನಡುವಿನ ಕೊಂಡಿಯಾಗಿ ಕಾರ್ಯನಿರ್ವಹಿಸಿದ್ದೇವೆ. ಸಚಿವ ಸಂಪುಟದಲ್ಲಿ ಈ ಕುರಿತು ಚರ್ಚೆ ನಡೆಸಿ, ತೀರ್ಮಾನ ಮಾಡುತ್ತೇವೆ ಎಂದರು.

ಸಚಿವ ಕೆ.ಎಸ್.ಈಶ್ವರಪ್ಪ

ಓದಿ:ಅಡುಗೆ ಅನಿಲ ದರ ಏರಿಕೆ ಖಂಡಿಸಿ ನಡು ರಸ್ತೆಯಲ್ಲೇ ಅಡುಗೆ ತಯಾರಿಸಿ ಕಾಂಗ್ರೆಸ್ ಪ್ರತಿಭಟನೆ

ಸಿದ್ದರಾಮಯ್ಯ ವಿರುದ್ದ ಗರಂ: ಮೊದಲು ಪಾದಯಾತ್ರೆಗೆ ಬರಲ್ಲ, ನನ್ನ ಬೆಂಬಲವಿದೆ ಎಂದವರು ಕೊನೆಗೆ ಪಾದಯಾತ್ರೆ ಹೇಗಾಯ್ತು ಅಂತ ಕೇಳಲು ಬರಲಿಲ್ಲ. ಇದೇನಾ ನಿಮ್ಮ ಬೆಂಬಲ ಎಂದು ಗರಂ ಆದರು. ನಾನು ದಲಿತ‌, ಹಿಂದುಳಿದವರ ಪರ ಅಲ್ಲ ಎಂಬುದನ್ನು ಒಪ್ಪಿಕೊಳ್ಳಿ. ನಾನು ದಲಿತ, ಹಿಂದುಳಿದವರನ್ನು ಬಳಸಿಕೊಂಡು ಸಿಎಂ ಆದೆ ಎಂಬುದನ್ನು ಒಪ್ಪಿಕೊಳ್ಳಿ. ಅದನ್ನು ಬಿಟ್ಟು ಬಿಜೆಪಿ ವಿರುದ್ಧ ಆರೋಪ ಮಾಡುವುದನ್ನು ಬಿಡಿ. ಹಿಂದಿನ ಸರ್ಕಾರ ಮಾಡಿದ್ದ ಜಾತಿ ಗಣತಿಯನ್ನು ಆದಷ್ಟು ಬೇಗ ಜಾರಿ ಮಾಡಲಾಗುವುದು ಎಂದು ತಿಳಿಸಿದರು.

ABOUT THE AUTHOR

...view details